ಸಿನಿಮಾ ನಿರ್ದೇಶಕನಾಗುವ ಗಿಲ್ಲಿ ನಟನ ಕನಸು ಎಲ್ಲಿಗೆ ಬಂತು? ʻಬಿಗ್ ಬಾಸ್ ವಿನ್ನರ್ʼ ಡೈರೆಕ್ಟರ್ ಆಗೋದು ಯಾವಾಗ?
ಬಿಗ್ ಬಾಸ್ ವಿಜೇತ ಗಿಲ್ಲಿ ನಟ ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡಿರುವ ಗಿಲ್ಲಿ ನಟ, ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. "ನಿರ್ದೇಶನ ಎಂಬುದು ದೊಡ್ಡ ಜವಾಬ್ದಾರಿ" ಅಂತಲೂ ಅವರು ಹೇಳಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವಿನ್ನರ್ ಆಗಿರುವ ಗಿಲ್ಲಿ ನಟ ಸದ್ಯ ತಮ್ಮ ಮುಂದಿನ ಸಿನಿಮಾ ʻಸೂಪರ್ ಹಿಟ್ʼ ಪ್ರಮೋಷನದಲ್ಲಿ ಬ್ಯುಸಿ ಆಗಿದ್ದಾರೆ. ಫೆ.27ರಂದು ಈ ಸಿನಿಮಾ ತೆರೆಕಾಣುತ್ತಿದೆ. ಇದು ಗಿಲ್ಲಿ ನಟ ಹೀರೋ ಆಗಿರುವ ಮೊದಲ ಸಿನಿಮಾ. ಟ್ರೇಲರ್ ಎಲ್ಲರ ಗಮನಸೆಳೆದಿದ್ದು, ಗಿಲ್ಲಿ ನಟನ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ನಡುವೆ ಅವರ ಮನದಾಳದ ಆಸೆ ಏನಾಯ್ತು? ಅದರ ಬಗ್ಗೆ ಏನು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಿರ್ದೇಶನ ಮಾಡುವುದು ಗಿಲ್ಲಿ ಕನಸು
ಹಾಸ್ಯ ನಟರಾಗಿ ಸ್ಟೇಜ್ ಮೇಲೆ ಎಲ್ಲರನ್ನು ನಗಿಸುವ ಗಿಲ್ಲಿ ನಟ, ಕಾಮಿಡಿ ಶೋಗಳಲ್ಲಿ ಮಿಂಚಿದ್ದಾರೆ. ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳನ್ನು ಮಾಡಿ, ಜನರನ್ನು ನಗಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಇಡೀ ನಾಡಿನ ಜನತೆಗೆ ಇಷ್ಟವಾಗಿಬಿಟ್ಟಿದ್ದಾರೆ. ಈ ನಡುವೆ ಅವರಿಗೆ ಒಂದು ಕನಸು ಇದೆ. ಅದೇನಪ್ಪ ಅಂದರೆ, ಸಿನಿಮಾ ನಿರ್ದೇಶಕನಾಗುವುದು. ಹೌದು, ಗಿಲ್ಲಿ ನಟ ಬರೀ ಅಭಿನಯಿಸುವುದು ಮಾತ್ರವಲ್ಲ, ಒಳ್ಳೆಯ ಬರಹಗಾರ ಕೂಡ. ಸಿನಿಮಾಗಳಿಗೆ ಡೈಲಾಗ್ ಬರೆಯುವ ಗಿಲ್ಲಿ, ತಮ್ಮ ಕಾಮಿಡಿ ಸ್ಕಿಟ್‌ಗಳಿಗೆ ತಾವೇ ಸ್ಕ್ರಿಪ್ಟ್ ಬರೆದುಕೊಳ್ಳುತ್ತಾರೆ.
Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ
ಹಾಗಾಗಿ, ಸಿನಿಮಾವೊಂದನ್ನು ನಿರ್ದೇಶನ ಮಾಡುವ ಬಗ್ಗೆಯೂ ಅವರು ಕನಸನ್ನ ಹೊಂದಿದ್ದಾರೆ. ಆ ಬಗ್ಗೆ ಈಚೆಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ಗಿಲ್ಲಿ ನಟ, "ಸದ್ಯ ನಾನು ನಿರ್ದೇಶನ ಮಾಡಲಿರುವ ಸಿನಿಮಾದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ನಟನೆಯನ್ನು ಬೇಗ ಮಾಡಬಹುದು. ಸ್ಕ್ರಿಪ್ಟ್ ಇರುತ್ತದೆ, ನಿರ್ದೇಶಕರು ಇರುತ್ತಾರೆ, ಅವರು ಹೇಳುತ್ತಾರೆ ನಾವು ನಟನೆ ಮಾಡಿಬಿಡಬಹುದು. ಎಲ್ಲಾ ಮಾಡಿ ಮುಗಿಸಿ, ಸಂಜೆ ಆರು ಗಂಟೆ ಆದಕೂಡಲೇ ಮನೆಗೆ ಹೋಗ್ತಾ ಇರಬಹುದು. ಆದರೆ ನಿರ್ದೇಶನ ಆ ರೀತಿ ಅಲ್ಲ" ಎಂದು ಹೇಳಿದ್ದಾರೆ.
Gilli Nata: ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ
ನಿರ್ದೇಶನದ ಅನ್ನೋದು ತಮಾಷೆಯ ಮಾತಲ್ಲ
"ಸ್ಕ್ರಿಪ್ಟ್ ಮೇಲೆ ಮೊದಲ ಹಾಳೆ ಮೇಲೆ ಓಂಕಾರ ಬರೆಯುವುದರಿಂದ ಶುರು ಮಾಡಿ, ಸಿನಿಮಾ ಶೂಟಿಂಗ್ ಮುಗಿಸಿ, ಅದನ್ನು ತೆರೆಮೇಲೆ ತರುವವರೆಗೂ ಆತನದ್ದೇ ಎಲ್ಲಾ ಕೆಲಸ, ಅವನದ್ದೇ ಜವಾಬ್ದಾರಿ. ನಿರ್ದೇಶನದ ಅನ್ನೋದು ತಮಾಷೆಯ ಮಾತಲ್ಲ. ನಿರ್ದೇಶಕ ಆಗಬೇಕೆಂದರೆ, ಮೊದಲು ಅದರ ಬಗ್ಗೆ ಜ್ಞಾನ ಇರಬೇಕು, ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕೇ ಆದಂತಹ ಸಮಯವನ್ನು ನೀಡಬೇಕು. ಹಾಗಾಗಿ, ಇವೆಲ್ಲಾ ಮುಗಿಸಿಕೊಂಡು, ಅದಕ್ಕೆಂದೇ ನಾನು ಕುಳಿತುಕೊಳ್ಳಬೇಕಿದೆ" ಎಂದು ಗಿಲ್ಲಿ ನಟ ಹೇಳಿದ್ದಾರೆ.
ನಾನು ರೆಡಿ ಆಗಬೇಕು
"ಒಂದು ಲೈನ್ ಇದೆ. ಅದರ ಮೇಲೆ ಸ್ಕ್ರೀನ್‌ಪ್ಲೇ ಎಲ್ಲಾ ಬರೆದು ರೆಡಿ ಮಾಡಬೇಕು. ನನ್ನು ಬಳಿ ಪೂರ್ತಿ ಸ್ಕ್ರಿಪ್ಟ್ ಇದ್ದರೆ ಮಾತ್ರ ನಾನು ಮಾತನಾಡಲು ಸಾಧ್ಯ. ಆಗತಾನೇ ನಾನು ನಿರ್ಮಾಪಕರಿಗೆ ಕಥೆ ಹೇಳಲು ಸಾಧ್ಯ. ಅದಕ್ಕಿಂತಲೂ ಮುಖ್ಯವಾಗಿ ನಾನು ರೆಡಿ ಆಗಬೇಕು" ಎಂದು ಗಿಲ್ಲಿ ನಟ ಹೇಳಿಕೊಂಡಿದ್ದಾರೆ.