Bigg Boss Kannada 13: ಗಗನ್ ಪಕ್ಷಪಾತ ಆಟ; ಇನ್ನೊಂದು ಕಡೆ ಆಸಿಯಾಗೆ ಸಿಗದ ಚಾನ್ಸ್!
Bigg Boss Kannada 13:ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ (Gagan Chinnappa) ಸಖತ್ ಸೌಂಡ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್-13’ ಕಾಯಕ್ರಮ ಆರಂಭವಾಗಿ 4 ದಿನಗಳು ಕಳೆದಿವೆ. ಫ್ಲೈಟ್‌ನಲ್ಲಿ (Flight) ಪ್ರಯಾಣಿಸುತ್ತಿರುವ 8 ಜನರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಪ್ರತಿ ಟಾಸ್ಕ್ ಗೆಲ್ಲುವ ಅನಿರ್ವಾತೆ ಇದೆ. ಇದೀಗ ಟಾಸ್ಕ್ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಐಪಿ (VIP) ಪಟ್ಟದಲ್ಲಿರುವ ಗಗನ್ ಚಿನ್ನಪ್ಪ (Gagan Chinnappa)ತಾಂಡವ್ ರಾಮ್ ತಂಡಕ್ಕೆ (Thadav Ram) ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ (Gagan Chinnappa) ಸಖತ್ ಸೌಂಡ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್-13’ ಕಾಯಕ್ರಮ ಆರಂಭವಾಗಿ 4 ದಿನಗಳು ಕಳೆದಿವೆ. ಫ್ಲೈಟ್‌ನಲ್ಲಿ (Flight) ಪ್ರಯಾಣಿಸುತ್ತಿರುವ 8 ಜನರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಪ್ರತಿ ಟಾಸ್ಕ್ ಗೆಲ್ಲುವ ಅನಿರ್ವಾತೆ ಇದೆ. ಇದೀಗ ಟಾಸ್ಕ್ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಐಪಿ (VIP) ಪಟ್ಟದಲ್ಲಿರುವ ಗಗನ್ ಚಿನ್ನಪ್ಪ (Gagan Chinnappa)ತಾಂಡವ್ ರಾಮ್ ತಂಡಕ್ಕೆ (Thadav Ram) ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಸಿಯಾ ಬೆಸ್ಟ್ ಪರ್ಫಾಮನ್ಸ್
ಒಬ್ಬರೂ ಸ್ವಿಮಿಂಗ್ ಪೂಲ್‌ನಲ್ಲಿ ಇಳಿಯಬೇಕಿತ್ತು. ಮತ್ತೋಬ್ಬರು ವಿರೋಧಿಗಳನ್ನ ತಡೆಯಬೇಕಿತ್ತು. ಇನ್ನೋರ್ವರು ಸ್ವಿಮಿಂಗ್ ಪೂಲ್‌ನಲ್ಲಿರುವ ಸ್ಪರ್ಧಿಗಳನ್ನ ರೆಸ್ಕ್ಯೂ ಮಾಡಲು ಟಯರ್‌ಗಳನ್ನ ಎಸೆಯಬೇಕಿತ್ತು. ಟಾಸ್ಕ್‌ನಲ್ಲಿ ಆಸಿಯಾ ಅವರು ಬೆಸ್ಟ್ ಪರ್ಫಾಮನ್ಸ್‌ನ್ನ ಕೊಡ್ತಾರೆ. ತಂಡ ಗೆಲ್ಲುತ್ತದೆ. ಬಿಗ್ ಬಾಸ್ ಮನೆಗೆ ಯಾರು ಹೋಗಬೇಕು ಎಂದು ಒಮ್ಮತದ ನಿರ್ಧಾರ ಬಂದಾಗ ಎಲ್ಲರೂ ಲಿಖಿತ್‌ಗೆ ವೋಟ್ ಮಾಡಿ, ಬಿಗ್ ಬಾಸ್ ಮನೆಗೆ ಕಳುಹಿಸುತ್ತಾರೆ. ಇದು ಒಂದು ಕಡೆ ಆಸಿಯಾಗೆ ನೆಗೆಟಿವ್ ಆಯ್ತು.
ಇದನ್ನೂ ಓದಿ: Bigg Boss Kannada 13: ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!
ಗಗನ್ ಪಕ್ಷಪಾತದ ಆಟ
ಇನ್ನೂ ಗಗನ್ ವಿಚಾರಕ್ಕೆ ಬಂದರೆ ಗಗನ್ ಈಗ ಮನೆಯಲ್ಲಿ ವಿಐಪಿ ಪಟ್ಟದಲ್ಲಿ ಇದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸೋ ಕರ್ತವ್ಯ ಅವರದ್ದು. ಗಗನ್ ಅವರನ್ನು ಅದನ್ನು ಮಾಡುತ್ತಿಲ್ಲ. ತಾಂಡವ್ ರಾಮ್ ಜೊತೆ ಸಕತ್ ಕ್ಲೋಸ್ ಆಗಿ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೇ ಆಟದಲ್ಲೂ ಫೇರ್ ಗೇಮ್ ಆಡಿದ್ದಾರೆ.
Queen slayed !! ...Always let your actions speak for themselves.#BBK13 pic.twitter.com/0KBDDDOh2X
— Archi ✨ (@ocean_islove) September 10, 2026
ಈ ಟಾಸ್ಕ್‌ನಲ್ಲಿ ಮೇಲಿನಿಂದ ಟ್ಯೂಬ್ ಹಾಕಿದ್ದು ನೇರವಾಗಿ ಸ್ವಮಿಂಗ್ಪೂಲ್ನಲ್ಲಿ ನಿಂತಿದ್ದವರ ಒಳಗೆ ಹೋಗಬೇಕು. ನೀರಿನಲ್ಲಿ ಇದ್ದವರು ಕೊಂಚವೂ ಸರಿಯಬಾರದು, ತಾಂಡವ್ ತಂಡದವರು ಇಲ್ಲಿ ಫೌಲ್ ಮಾಡಿದ್ದರು. ಇದನ್ನು ಗಗನ್ ಗಮನಿಸಿಯೇ ಇಲ್ಲ.
ಇದನ್ನೂ ಓದಿ: Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್ ವಾರ್ನಿಂಗ್
ಸೌಂದರ್ಯಾ ಶೆಟ್ಟಿ ಕೊಂಚ ಅಲ್ಲಾಡಿದ್ದಕ್ಕೆ ಫೌಲ್ ಕೊಟ್ಟಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ. ಅನೇಕರು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದಲ್ಲದೇ ಮಂಜು ಅವರನ್ನು ನಾಮಿನೇಟ್ ಮಅಡುವ ವಿಚಾರದಲ್ಲೂ ಗಗನ್ ಎಡವಿದ್ದಾರೆ.