Bigg Boss Kannada 13: ಕಿರಣ್ ಚೀಟಿಂಗ್ ಆಟ; ಸತ್ಯ ಬಿಚ್ಚಿಟ್ಟು ಬೆಂಡೆತ್ತಿದ ಸುದೀಪ್
Bigg Boss Kannada 13:ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಕಳೆದ ವಾರ ಶಾಸ್ತ್ರಿ ಮತ್ತು ಮಂಜ (Manja) ಬುದ್ಧಿವಾದ ಹೇಳಿಸಿಕೊಂಡಿದ್ದರು. ಈ ವಾರವೂ ಸಹ ಕಿರಣ್ ಶಾಸ್ತ್ರಿ (Kiran Shastri) ಕಳ್ಳಾಟ ಆಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎಲಿಮಿನೇಷನ್‌ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿತ್ತು. ಬಣ್ಣದ ಪೈಪ್‌ಗಳನ್ನ ಸರಿಯಾಗಿ, ಜೋಡಿಸಿದ ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಗೌಡ ಗೇಮ್‌ನ ವಿನ್ನರ್ ಆಗಿ, ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುವ ಅಡ್ವಾಂಟೇಜ್ ಕಾರ್ಡ್ ಪಡೆದರು. ಆಸಿಯಾ ಮತ್ತು ಯಶಸ್ ಆಡಿದ ನಂತರ ಸಣ್ಣ ಗ್ಯಾಪ್ ಇತ್ತು. ಈ ಸಮಯದಲ್ಲಿ ಬಾತ್‌ರೂಮ್‌ನಲ್ಲಿ ತಾಂಡವ್ ರಾಮ್‌ಗೆ (Thandav Ram) ಗೇಮ್ ಹೇಗಿತ್ತು ಎಂದು ಕಿರಣ್ ಶಾಸ್ತ್ರಿ ಕೇಳುತ್ತಾರೆ. ಇದು ಸುದೀಪ್ ಪ್ರಶ್ನೆ ಇಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಕಳೆದ ವಾರ ಶಾಸ್ತ್ರಿ ಮತ್ತು ಮಂಜ (Manja) ಬುದ್ಧಿವಾದ ಹೇಳಿಸಿಕೊಂಡಿದ್ದರು. ಈ ವಾರವೂ ಸಹ ಕಿರಣ್ ಶಾಸ್ತ್ರಿ (Kiran Shastri) ಕಳ್ಳಾಟ ಆಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎಲಿಮಿನೇಷನ್‌ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಗೌಡ (Kavya Gowa) ಜೋಡಿಯಾಗಿ ಆಡಿದ್ರೇ, ಆಸಿಯಾ ಫಿರ್ದೋಸ್ ಮತ್ತು ಯಶಸ್ ಕೃಷ್ಣ ಅವರು ಜೋಡಿಯಾಗಿದ್ದರು. ಬಣ್ಣದ ಪೈಪ್‌ಗಳನ್ನ ಸರಿಯಾಗಿ, ಜೋಡಿಸಿದ ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಗೌಡ ಗೇಮ್‌ನ ವಿನ್ನರ್ ಆಗಿ, ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುವ ಅಡ್ವಾಂಟೇಜ್ ಕಾರ್ಡ್ ಪಡೆದರು. ಆಸಿಯಾ ಮತ್ತು ಯಶಸ್ ಆಡಿದ ನಂತರ ಸಣ್ಣ ಗ್ಯಾಪ್ ಇತ್ತು. ಈ ಸಮಯದಲ್ಲಿ ಬಾತ್‌ರೂಮ್‌ನಲ್ಲಿ ತಾಂಡವ್ ರಾಮ್‌ಗೆ (Thandav Ram) ಗೇಮ್ ಹೇಗಿತ್ತು ಎಂದು ಕಿರಣ್ ಶಾಸ್ತ್ರಿ ಕೇಳುತ್ತಾರೆ. ಇದು ಸುದೀಪ್ ಪ್ರಶ್ನೆ ಇಟ್ಟಿದ್ದಾರೆ.
ಕಿರಣ್ ದೇವಿ ಹೂವ ಏಕೆ ಕೊಟ್ಟಿಲ್ಲ? ಎಂದು ಸುದೀಪ್ ಕೇಳಿದರು. ಅದಕ್ಕೆ ಕಿರಣ್ ಇದ್ದವರು, ನಾನು ಆಡಿದ ಆಟ ಚೆನ್ನಾಗಿತ್ತು ಅನ್ನೋ ಕಾರಣಕ್ಕೂ ಹೂ ಕೊಟ್ಟಿರಬಹುದು ಎಂದರು. ಆಗ ಸುದೀಪ್ ಇದ್ದವರು ಏನೋ ಆಗಿದೆ ಅದಕ್ಕೆ ಹೂವ ಕೊಟ್ಟಿಲ್ಲ ಎಂದರು. ತಾಂಡವ್ ಬಳಿ ನೀವು ಕೇಳಿದ್ದು ಸ್ಟ್ರಾಟಜಿಗೆ ಬರಲ್ಲ. ಚೀಟಿಂಗ್ ಅಲ್ಲಿ ಬರತ್ತೆ ಎಂದರು. ನಿಮ್ಮ ಭಾಷೆಯಲ್ಲಿ ನೀವಾಗೆ ಆಡ್ತೀರಾ ಅನ್ನೋದಕ್ಕೆ ಏನಂತೀರಿ? ಆಗ ಅಲ್ಲಿ ಏಕೆ ಹೇಳಿಲ್ಲ? ಮುಂದಿನ ಬಾರಿ ಹೂವ ಬೀಳಿಲ್ಲ ಅಂದರೆ ಬೀಳೋ ಥರ ಇಡಿ. ದೇವಿ ನಮ್ಮನೆಗೂ ಬಂದಿದ್ದರು. ಏಕೆ ಹೂವ ಕೊಟ್ಟಿಲ್ಲ ಅಂತ ಹೇಳು ಅಂದರು. ಈ ಮೂಲಕ ಕಿರಣ್ ಅವರ ಚೀಟಿಂಗ್ ಆಟದ ಬಗ್ಗೆ ಕಿಚ್ಚ ಹೇಳಿದ್ದಾರೆ.
ಆಗಿದ್ದೇನು?
ಬಣ್ಣ ಬಣ್ಣದ ಪೈಪ್‌ಗಳನ್ನ ಸ್ಕ್ರೀನ್ ಮೇಲೆ ತೋರಿಸಿದ ರೀತಿಯಲ್ಲಿ ಕಣ್ಣೀಗೆ ಬಟ್ಟೆ ಕಟ್ಟಿಕೊಂಡು ನಿಗದಿತ ಅವಧಿಯಲ್ಲಿ ಜೋಡಿಸಬೇಕಿತ್ತು. ಬಾತ್‌ರೂಮ್‌ನಲ್ಲಿ ತಾಂಡವ್ ರಾಮ್‌ಗೆ ಗೇಮ್ ಹೇಗಿತ್ತು ಎಂದು ಕಿರಣ್ ಶಾಸ್ತ್ರಿ ಕೇಳಿತ್ತಾರೆ.
“ಪೈಪ್‌ಗಳನ್ನ ಜೋಡಿಸುವಾಗಲೇ ಒತ್ತೋತ್ತಾಗಿ ಜೋಡಿಸು, ಸ್ಪೀಡ್ ಆಗಿ ಆಡು” ಎಂದು ಕಿರಣ್ ಶಾಸ್ತ್ರಿ ಹಿಂಟ್ ಕೊಡುತ್ತಾರೆ ತಾಂಡವ್ ರಾಮ್. ಈ ಹಿಂಟ್‌ನ ಬಳಿಸಿಕೊಂಡು ಕಿರಣ್ ಶಾಸ್ತ್ರಿ ಅವರು ಗೇಮ್ ಪ್ಲ್ಯಾನ್ ಮಾಡಿದ್ರು. ಈ ಮಾತುಕತೆಯನ್ನ ಸ್ಪರ್ಧಿಗಳು ಯಾರು ಕೇಳಿಸಿಕೊಂಡಿಲ್ಲ.