BBK 12: ʻಕಲರ್ಸ್ ಕನ್ನಡʼದ ಇನ್‌ಸ್ಟಾ ಖಾತೆ ಡಿ-ಆಕ್ಟಿವೇಟ್! ಬಿಗ್ ಬಾಸ್ ಪ್ರೋಮೋ ನೋಡೋದು ಹೇಗೆ?
ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ಸುದ್ದಿವೊಂದು ಎದುರಾಗಿದೆ. ಅನೇಕ ಧಾರಾವಾಹಿ, ರಿಯಾಲಿಟಿ ಶೋ ವೀಕ್ಷಕರು, ಪ್ರೋಮೋಗಾಗಿ ಕಾಯ್ತಾ ಇರ್ತಾರೆ. ಅದಕ್ಕಾಗಿ ಆಯಾ ವಾಹಿನಿಯ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡ್ತಾ ಇರ್ತಾರೆ. ಆದರೀಗ ಏಕಾಏಕಿ ಕಲರ್ಸ್ ವಾಹಿನಿಯ ಇನ್‌ಸ್ಟಾ ಹಾಗೂ ಫೇಸ್‌ಬುಕ್ ಖಾತೆ ಕಾಣೆಯಾಗಿ ಬಿಟ್ಟಿದೆ. ಬಿಗ್ಬಾಸ್ ಮಾಹಿತಿ ನೋಡಲು ಸೋಷಿಯಲ್ ಮೀಡಿಯಾ ನೋಡುಗರಿಗೂ ಶಾಕ್ ಆಗಿದೆ. ಹಾಗಾದ್ರೆ ಬಿಗ್ ಬಾಸ್ ಅಪ್‌ಡೇಟ್ ನೋಡೋದು ಹೇಗೆ?
-
Yashaswi Devadiga
Nov 1, 2025 7:17 PM
ಸೋಷಿಯಲ್ ಮೀಡಿಯಾಗಳನ್ನು (Social Media) ಕೇವಲ ಜನ ಮಾತ್ರವಲ್ಲ, ಅನೇಕ ರಿಯಾಲಿಟಿ ಶೋಗಳು (Reality Show) ಕೂಡ ಬಳಕೆ ಮಾಡುತ್ತವೆ. ಅನೇಕ ಜನಪ್ರಿಯ ವಾಹಿನಿಗಳು ವೀಕ್ಷಕರಿಗೆ ತಾವು ಪ್ರಸಾರ ಮಾಡುತ್ತಿರುವ ರಿಯಾಲಿಟಿ ಶೋ, ಸೀರಿಯಲ್ (Serial) ಸೇರಿದಂತೆ ಏನೇ ಅಪ್‌ಡೇಟ್ ಕೊಡಬೇಕೂ ಅಂದರೂ ಇನ್‌ಸ್ಟಾಗ್ರಾಂ ಬಳಸುತ್ತಾರೆ. ಆದರೆ, ಕಲರ್ಸ್ ಕನ್ನಡ ಏಕಾಏಕಿ ಸೋಷಿಯಲ್ ಮೀಡಿಯಾದಿಂದ ಇದು ಕಾಣೆಯಾಗಿಬಿಟ್ಟಿದೆ. ಬಿಗ್ಬಾಸ್ ಮಾಹಿತಿ ನೋಡಲು ಸೋಷಿಯಲ್ ಮೀಡಿಯಾ ನೋಡುಗರಿಗೂ ಶಾಕ್ (Shock) ಆಗಿದೆ. ಹಾಗಾದ್ರೆ ಬಿಗ್ ಬಾಸ್ ಅಪ್‌ಡೇಟ್ ನೋಡೋದು ಹೇಗೆ?
ಇದನ್ನೂ ಓದಿ: BBK 12: ರಕ್ಷಿತಾ ಜಗಳ ಮಾಡ್ತಾರೆ ಅನ್ಸಲ್ಲ, ಡ್ಯಾನ್ಸ್ ಮಾಡಿಕೊಂಡೇ ಮಾತಾಡ್ತಾರೆ! ಕಿಚ್ಚನ ಮುಂದೆ ಅಶ್ವಿನಿ ಗೌಡ ನೇರ ಮಾತು
ಬಿಗ್ ಬಾಸ್ ವೀಕ್ಷಕರಿಗೆ ಶಾಕ್!
ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ಸುದ್ದಿವೊಂದು ಎದುರಾಗಿದೆ. ಅನೇಕ ಧಾರಾವಾಹಿ, ರಿಯಾಲಿಟಿ ಶೋ ವೀಕ್ಷಕರು, ಪ್ರೋಮೋಗಾಗಿ ಕಾಯ್ತಾ ಇರ್ತಾರೆ. ಅದಕ್ಕಾಗಿ ಆಯಾ ವಾಹಿನಿಯ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡ್ತಾ ಇರ್ತಾರೆ. ಆದರೀಗ ಏಕಾಏಕಿ ಕಲರ್ಸ್ ವಾಹಿನಿಯ ಇನ್‌ಸ್ಟಾ ಹಾಗೂ ಫೇಸ್‌ಬುಕ್ ಖಾತೆ ಕಾಣೆಯಾಗಿ ಬಿಟ್ಟಿದೆ.
ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಂ ಖಾತೆ ಏಕಾಏಕಿ ನಿಷ್ಕ್ರಿಯಗೊಂಡಿದೆ. ಇದೂವರೆಗೂ ಅಪ್‌ಲೋಡ್ ಮಾಡಿದ್ದ ಲಕ್ಷಾಂತರ ವಿಡಿಯೋಗಳು ಡಿಲೀಟ್ ಆಗಿವೆ. ತಾಂತ್ರಿಕ ಸಮಸ್ಯೆ ಆಗಿದೆ ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಅಕೌಂಟ್ಗಳು ಡಿ-ಆಕ್ಟಿವೇಟ್ ಆಗಿದೆ ಎಂಬ ಮಾಹಿತಿ ಬಂದಿದ್ದರೂ, ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ. ಕನ್ನಡದಂತೆಯೇ ಹಿಂದಿಯ ಖಾತೆಯೂ ಇದೇ ರೀತಿ ಆಗಿದೆ.
ಪ್ರೋಮೋ ನೋಡೋದು ಹೇಗೆ?
ಕಲರ್ಸ್ ಕನ್ನಡದ ವಾಟ್ಸಾಪ್ ಚಾನೆಲ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಪ್ರೋಮೊಗಳನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಜಿಯೋ ಹಾಟ್ ಸ್ಟಾರ್ ಸದ್ಯ ಆಕ್ಟಿವ್ ಇದ್ದು ಅಲ್ಲಿಯೂ ಪ್ರೋಮೋ ನೋಡಬಹುದಾಗಿದೆ.
ಕಿಚ್ಚನ ಪಂಚಾಯ್ತಿಯಲ್ಲಿ ಏನಾಗ್ತಿದೆ?
ರಕ್ಷಿತಾ ಅಸಲಿನಾ? ನಕಲಿನಾ? ಎನ್ನುವ ಪ್ರಶ್ನೆ ಸ್ಪರ್ಧಿಗಳಿಗೆ ಎದುರಾಗಿದೆ. ಅವರ ಕೊಟ್ಟ ಉತ್ತರವೇನು? ಕಿಚ್ಚ ಹೇಳಿದ್ದೇನು? ರಕ್ಷಿತಾ ಅವರ ಎಲ್ಲ ಕಡೆ ಮೂಗು ತೂರಿಸುತ್ತಾರೆ ಅನ್ನೋ ಸ್ಟೇಟ್‌ಮೆಂಟ್‌ಗೆ ಅನೇಕ ಸ್ಪರ್ಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ. ರಕ್ಷಿತಾ ಅವರು ಫೇಕ್ ಅಂತ ಕೂಡ ಹೇಳಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ ಅವರು ಸುದೀಪ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ.
ʻರಕ್ಷಿತಾ ಅವರು ಜಗಳ ಮಾಡ್ತಾರೆ ಅನ್ಸಲ್ಲ. ಅವರು ಡ್ಯಾನ್ಸ್ ಮಾಡಿಕೊಂಡೇ ಆಟ ಆಡ್ತಾರೆʼ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದರು ಅಶ್ವಿನಿ. ಅದರಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಿಷಾ ಕೂಡ, ʻ15 ನಿಮಿಷ ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಶನಿವಾರ ಭಾನುವಾರ ಬಂತು ಅಂದರೆ ಅದು ಇದು ಅಂತ ಶುರುವಾಗತ್ತೆ. ನನ್ನ ಪ್ರಕಾರ ಅವರ ಸ್ಟ್ರಾಟಜಿ ಬಳಕೆ ಮಾಡ್ತಿದ್ದಾರೆʼ ಎಂದಿದ್ದಾರೆ. ಕಾಕ್ರೋಚ್ ಸುಧಿ ಕೂಡ ʻರಕ್ಷಿತಾ ತುಂಬಾ ಫೇಕ್ʼ ಎಂದಿದ್ದಾರೆ.
ಇದನ್ನೂ ಓದಿ: Bigg Boss 12: ಈ ಎಲ್ಲ ವಿಷಯಗಳು ಚರ್ಚೆ ಆಗಲೇಬೇಕು! ಕಿಚ್ಚನಿಗೆ ವೀಕ್ಷಕರಿಂದ ಒತ್ತಾಯ
ಈಗಾಗಲೇ ಶೋ 30 ದಿನ ಪೂರೈಸಿದೆ. ಇತ್ತೀಚೆಗೆ ನಡೆದ ಬಿಬಿ ಕಾಲೇಜ್ ಫೆಸ್ಟ್‌ನಲ್ಲಿ ಡ್ಯಾನ್ಸ್, ಸ್ಕಿಟ್ ಮಾಡಿ ಸ್ಪರ್ಧಿಗಳು ರಂಜಿಸಿದ್ದಾರೆ. ಈ ವಾರ ರಾಶಿಕಾ, ದೃವಂತ್, ಮಲ್ಲಮ್ಮ, ಮಾಳು, ಅಶ್ವಿನಿ ಗೌಡ, ಗಿಲ್ಲಿ, ರಿಷಾ, ಧನುಷ್ ನಾಮಿನೇಟ್ ಆಗಿದ್ದಾರೆ.
ಹಾಗೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ.