ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಚ್ಛೇದನ ವದಂತಿಗೆ ಸಿಂಗರ್ ನೇಹಾ ಕಕ್ಕರ್ ಬ್ರೇಕ್: ಗಾಸಿಪ್ ಬೆನ್ನಲ್ಲೇ ಪೋಸ್ಟ್ ಡಿಲೀಟ್

Neha Kakkar: ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಕೆಲಸದಿಂದ ವಿರಾಮ ಪಡೆಯುವ ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಇದರೊಂದಿಗೆ ಪತಿ ರೋಹನ್‌ಪ್ರೀತ್ ಸಿಂಗ್ ಜತೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್ ಹಬ್ಬಿದ್ದು ಈ ವಿಚಾರವನ್ನು ತಳ್ಳಿಹಾಕಿರುವ ಅವರು, ಸಣ್ಣ ವಿಚಾರವನ್ನು‌ ಈ ರೀತಿಯಾಗಿ ಹಬ್ಬಿಸಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ವಿಚ್ಛೇದನದ ವದಂತಿ ಬೆನ್ನಲ್ಲೇ ಗಾಯಕಿ ನೇಹಾ ಕಕ್ಕರ್ ಪೋಸ್ಟ್ ಡಿಲೀಟ್

ನೇಹಾ ಕಕ್ಕರ್ ಮತ್ತು ಪತಿ ರೋಹನ್‌ಪ್ರೀತ್ ಸಿಂಗ್ (ಸಂಗ್ರಹ ಚಿತ್ರ) -

Profile
Pushpa Kumari Jan 20, 2026 3:07 PM

ದೆಹಲಿ, ಜ. 20: ಬಾಲಿವುಡ್ ಖ್ಯಾತ ಗಾಯಕಿ ನೇಹಾ ಕಕ್ಕರ್ (Neha Kakkar) ಆಗಾಗ ಸುದ್ದಿಯಲ್ಲಿರುತ್ತಾರೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನು‌ ಹೊಂದಿರುವ ಅವರು ಬ್ಯುಸಿ ಗಾಯಕಿಯರಲ್ಲಿ ಒಬ್ಬರು. ಸದ್ಯ‌ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಂಬಂಧ ಮತ್ತು ಕೆಲಸದಿಂದ ವಿರಾಮ ಪಡೆಯುವ ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು. ಇದರಿಂದಾಗಿ ಪತಿ ರೋಹನ್‌ಪ್ರೀತ್ ಸಿಂಗ್ ಜತೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಈ ವಿಚಾರವನ್ನು ತಳ್ಳಿ ಹಾಕಿರುವ ಅವರು, ಸಣ್ಣ ವಿಚಾರವನ್ನು‌ ಈ ರೀತಿಯಾಗಿ ಹಬ್ಬಿಸಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಸಿಂಗರ್ ನೇಹಾ ಕಕ್ಕರ್ ತಮ್ಮ ಅಫೀಶಿಯಲ್​ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಎರಡು ಪೋಸ್ಟ್‌ಗಳನ್ನು ಶೇರ್ ಮಾಡಿದ್ದರು.‌ ಜವಾಬ್ದಾರಿಗಳು ಮತ್ತು ರಿಲೇಶನ್‌​​ಶಿಪ್​ಗಾಗಿ ಸಮಯ ತೆಗೆದುಕೊಳ್ಳಲು ಬಯಸುವುದಾಗಿ ಹೇಳಿಕೊಂಡಿದ್ದು, "ನಾನು ಜವಾಬ್ದಾರಿಗಳು, ಕೆಲಸ ಮತ್ತು ಸಂಬಂಧಗಳಿಂದ ವಿರಾಮ ಪಡೆಯುತ್ತಿದ್ದೇನೆ. ಮತ್ತೆ ಸಿಗುತ್ತೇನೋ ಗೊತ್ತಿಲ್ಲ'' ಎಂದು ವಿದಾಯದ ಪೋಸ್ಟ್​ ಹಾಕಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ, ʼʼಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನ ಫೋಟೊ, ವಿಡಿಯೊ ತೆಗೆಯದಂತೆ ವಿನಂತಿಸುತ್ತೇನೆ. ನೀವು ನನ್ನ ಗೌಪ್ಯತೆಯನ್ನು ಗೌರವಿಸಿ‌. ನನ್ನನ್ನು ಮುಕ್ತವಾಗಿ ಬದುಕಲು ಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆʼʼ ಎಂದು ಬರೆದುಕೊಂಡಿದ್ದರು.‌ ಇದನ್ನು ಗಮನಿಸಿದ ಹೆಚ್ಚಿನವರು ಇವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ಮಾಡಿದ್ದರು.

`ರಾಯ'ನಾಗಿ ಬಂದು ಧೂಳೆಬ್ಬಿಸಿದ ಯಶ್ ; ಟ್ಯಾಕ್ಸಿಕ್ ಟೀಸರ್ ನೋಡಿದ ರಾಕಿ ಭಾಯ್ ಫ್ಯಾನ್ಸ್ ಗೆ ʻಅಚ್ಚರಿ"

ಸದ್ಯ ಈ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆಯೇ ನೇಹಾ‌ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ನೇಹಾ ಪ್ರತಿಕ್ರಿಯೆ ನೀಡಿದ್ದು ಸಣ್ಣ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಮಾಧ್ಯಮದವರು ನಿಸ್ಸೀಮರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ʼʼನನ್ನ ಪತಿ ಅಥವಾ ನನ್ನ ಕುಟುಂಬವನ್ನು ಈ ವಿಚಾರಕ್ಕೆ ಎಳೆದು ತರಬೇಡಿ. ಅವರು ಅತ್ಯಂತ ಪ್ರಾಮಾಣಿಕರು. ನಾನಿಂದು ಇಷ್ಟು ಬೆಳೆಯಲು ಅವರ ಬೆಂಬಲವೇ ಕಾರಣ" ಎಂದು ನೇಹಾ ಹೇಳಿಕೊಂಡಿದ್ದಾರೆ.

ಸದ್ಯ ನೇಹಾ ಅವರ ಈ ಹಠಾತ್ ನಿರ್ಧಾರಕ್ಕೆ ಸತತವಾಗಿ ನಡೆಯುತ್ತಿರುವ ಸೋಶಿಯಲ್ ಮೀಡಿಯಾ ಟ್ರೋಲಿಂಗ್ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ತನ್ನ ಸಹೋದರ ಟೋನಿ ಕಕ್ಕರ್ ಅವರೊಂದಿಗೆ ಮಾಡಿದ "ಕ್ಯಾಂಡಿ ಶಾಪ್" ವಿಡಿಯೊದಿಂದ ಟ್ರೋಲ್‌ ಮತ್ತು ಟೀಕೆಗಳಿಂದಾಗಿ ಈ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಹೇಳಲಾಗಿದೆ.