Raghu Bigg Boss Kannada: ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಬಿಗ್ ಬಾಸ್ ರಘು ಗರಂ
Gilli Nata: ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ವಿನ್ನರ್ ಆದ್ರೆ, ರಕ್ಷಿತಾ ರನ್ನರ್ ಅಪ್ ಆದ್ರು. ಈ ಸೀಸನ್ ಅಲ್ಲಿ ಹೈಲೈಟ್ ಆಗಿರೋ ಗುಂಪು ಅಂದರೆ ಅದುವೇ ರಘು , ಗಿಲ್ಲಿ ಹಾಗೂ ರಕ್ಷಿತಾ. ರಘು ಕೂಡ ಪ್ರಬಲ ಸ್ಪರ್ಧಿ ಆಗಿದ್ದರು. ಗಿಲ್ಲಿ ಹಾಗೂ ರಘು ಜೋಡಿಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಫಿನಾಲೆ (Finale) ಕೂಡ ತಲುಪಿದ್ದರು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ರಘು ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ ವಿನ್ನರ್ ಆದ್ರೆ, ರಕ್ಷಿತಾ ರನ್ನರ್ ಅಪ್ ಆದ್ರು. ಈ ಸೀಸನ್ ಅಲ್ಲಿ ಹೈಲೈಟ್ ಆಗಿರೋ ಗುಂಪು ಅಂದರೆ ಅದುವೇ ರಘು (Mutent Raghu), ಗಿಲ್ಲಿ ಹಾಗೂ ರಕ್ಷಿತಾ. ರಘು ಕೂಡ ಪ್ರಬಲ ಸ್ಪರ್ಧಿ ಆಗಿದ್ದರು. ಗಿಲ್ಲಿ ಹಾಗೂ ರಘು ಜೋಡಿಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಫಿನಾಲೆ (Finale) ಕೂಡ ತಲುಪಿದ್ದರು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ರಘು ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಪ್ ಗೆದ್ದಷ್ಟು ಸಂತೋಷ ಆಯ್ತು
ನಾನು ಟಾಪ್3 ಬರ್ತೀನಿ ಅಂತ ಅಂದುಕೊಂಡಿದ್ದೆ. ಸುದೀಪ್ ಸರ್ ಅವರು ಯಾವಾಗ ನನ್ನ ಕರೆದು ವ್ಯಕ್ತಿತ್ವದ ಬಗ್ಗೆ ಹೇಳಿದ್ರೂ ಆಗ ನಾನೆ ಕಪ್ ಗೆದ್ದಷ್ಟು ಸಂತೋಷ ಆಯ್ತು. ತುಂಬಾ ಖುಷಿ ಇದೆ. ನಾನು ಸಣ್ಣ ವಯಸ್ಸಿದ್ದಾಗ ತುಂಬಾ ಕಷ್ಟ ಪಡ್ತಾ ಇದ್ದೀವಿ. ಯಾವಾಗ ಸೋಷಿಯಲ್ ಮೀಡಿಯಾ ಬರೋಕೆ ಶುರು ಆದಾಗ ಹೈಲೈಟ್ ಆಗೋಕೆ ಶುರು ಆದೆ ಎಂದರು.
ಗಿಲ್ಲಿ, ರಕ್ಷಿತಾ ಬಗ್ಗೆ ಖುಷಿ ಇದೆ
ಗಿಲ್ಲಿ ರಕ್ಷಿತಾ ವಿನ್ ಆಗಿದ್ದು ತುಂಬಾ ಖುಷಿ ಆಗಿದೆ. ಇಬ್ಬರೂ ಒಳ್ಳೆಯ ಸ್ಪರ್ಧಿಗಳು. ನಾನು ಯಾವದಕ್ಕೂ ಬೇಸರ ಮಾಡಲ್ಲ. ನಾನು ಗಿಲ್ಲಿನ ಕೆಳಗೆ ಹಾಕಿ ಕಾಮಿಡಿ ಮಾಡ್ತಾ ಇರಲಿಲ್ಲ. ನಾವಿಬ್ಬರೂ ಒಂದೇ ಥರ ಮಾತಾಡಿದ್ರೆ ಸರಿ. ಆದರೆ ನನಗೆ ಅವನು ಮಾತುಗಳನ್ನು ವಾಪಸ್ ಕೊಟ್ಟಿದ್ದು ಇದೆ. ನನ್ನ ವ್ಯಕ್ತಿತ್ವ ಅಂತ ಬಂದಾಗ, ಲೈನ್ ಅಂತ ಇರತ್ತೆ. ಅದು ಮೀರಿ ಹೋದರೆ ಬೇಸರ ಆಗತ್ತೆ ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನನ್ನಷ್ಟು ಅಡುಗೆ ಮಾಡಿ ಬಡಿಸಿದ್ದು ಯಾರೂ ಇಲ್ಲ. ಆದರೆ ಚಪಾತಿ ವಿಚಾರ ಯಾಕೆ ಇಷ್ಟು ನೆಗೆಟಿವ್ ಆಯ್ತು ಗೊತ್ತಾಗಿಲ್ಲ. ಚಪಾತಿ ವಿಚಾರದ ಬಗ್ಗೆ ಗಿಲ್ಲಿಯನ್ನೇ ಕೇಳಬೇಕು. ನಾನು ಊಟ ಕೊಟ್ಟಿದ್ದೀನಿ ಇಲ್ವಾ ಅಂತ ಹೇಳಿದ್ದಾರೆ.
ಅಶ್ವಿನಿ ಹಾಗೆ ಹೇಳೋದು ತಪ್ಪು
ಅಶ್ವಿನಿ ಅವರ ಮಾತು ತುಂಬಾ ತಪ್ಪಾಗುತ್ತೆ. ಎಲ್ಲರಿಗೂ ಒಂದೊಂದು ವ್ಯಕ್ತಿತ್ವ ಇರುತ್ತದೆ. ಒಬ್ಬರಿಂದ ಆಟ ಅನ್ನೋದು ತಪ್ಪು. ಅವರಿಂದ ಇವರಿಂದ ಪ್ಲಸ್ ಆಯ್ತು ಅನ್ನೋದು ತಪ್ಪು. ತಪ್ಪು ಮಾಡಿದ್ದೀವಿ ಅಂದರೆ ಅದನ್ನು ನಾವೇ ಅನುಭವಿಸಬೇಕು. ನಾವು ಏನು ಆಟ ಆಡ್ತೀವಿ ಅದೇ ಬರುತ್ತೆ. ಯಾವದನ್ನೂ ಚೇಂಜ್ ಮಾಡೋಕೆ ಆಗಲ್ಲ. ಗಿಲ್ಲಿ ಯಾವತ್ತೂ ಬಡವ ಅಂತ ಎಲ್ಲಿಯೂ ತೋರಿಸಿಕೊಂಡಿಲ್ಲ. ಅವನು ಚೆನ್ನಾಗಿ ಆಡಲಿ ಅಂತ ನಾನು ಅವನು ಜಗಳ ಆಡ್ತಾ ಇದ್ವಿ. ನನಗೆ ಇವನು ಕ್ಯಾಪ್ಟನ್ ಆದಾಗ ಚೆನ್ನಾಗಿ ಆಡಬೇಕಿತ್ತು ಅಂತ ಇತ್ತು ಎಂದಿದ್ದಾರೆ.
ನಮ್ಮದೇ ಮನೆ ಅಂತ ಜೀವಿಸಿದ್ದೀವಿ
ನನಗೆ ಅನ್ಸಿದ್ದು, ನಾವು ಮೂವರು ಏನು ಪ್ಲ್ಯಾನ್ಸ್ ಮಾಡಿಕೊಂಡು ಬಂದಿಲ್ಲ. ನಾವು ಏನೂ ಎಪಿಸೋಡ್ ಏನೂ ನೋಡಿಲ್ಲ. ಗಿಲ್ಲಿನೂ ಅಷ್ಟೇ ಬಂದ. ಎಲ್ಲರೂ ಅಷ್ಟೇ ನಮ್ಮದೇ ಮನೆ ಅಂತ ಜೀವಿಸಿದ್ದೀವಿ. ಕಾವ್ಯ ಅವರ ಮನೆಯವರು ಬಂದಾಗ ವಿಟಿ ಪ್ಲೇ ಮಾಡಿಸಿದಾಗ ಸ್ವಲ್ಪ ಬೇಸರವಾಯ್ತು. ನಾನು ಕಾವ್ಯ ಅವರು ಟಾಪ್ 6 ಬರ್ತಾ ಇದ್ದರು. ಇನ್ನು ಧನುಷ್ ಮೊದಲಿಗೆ ಎಲಿಮಿನೇಟ್ ಆದಾಗ ಸ್ವಲ್ಪ ಶಾಕ್ ಆಯ್ತು. ಒಳ್ಳೆಯವನಾಗಿದ್ದೇ ತಪ್ಪಾಯ್ತಾ ಅಂತ ಅನ್ನಿಸುತ್ತೆ ಎಂದಿದ್ದಾರೆ.