Kantara Movie: ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ತಪ್ಪದ ಸಂಕಷ್ಟ: ದೈವ ನುಡಿದ ಮಾತು ನಿಜವಾಯ್ತಾ?
ಕಾಂತಾರ ಸಿನಿಮಾ ಈಗಾಗಲೇ ಬಹಳಷ್ಟು ಪ್ರಸಿದ್ಧಿ ಪಡೆದಿದೆ.. ಸುಮಾರು 16 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಈ ಸಿನಿಮಾದ ಮೊದಲ ಭಾಗ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರದ ಬಿಡುಗಡೆಗಾಗಿ ಸಿನಿ ಪ್ರಿಯರು ಕಾತುರ ರಾಗಿದ್ದು ಈ ನಡುವೆ ಸಿನಿಮಾ ತಂಡಕ್ಕೆ ವಿಘ್ನ ಎದುರಾದಂತೆ ಆಗಿದೆ. ಹೌದು ಕಾಂತಾರ ಚಾಪ್ಟರ್ -1 ಶೂಟಿಂಗ್ ಸಮಯದಲ್ಲಿ ಜೂನಿಯರ್ ಕಲಾವಿದನೊಬ್ಬ ಸಾವಿಗೀಡಾಗಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ತಯಾರಿ ಹಂತದಲ್ಲೇ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದ್ದು, ದೈವ ನುಡಿದ ಮಾತು ನಿಜವಾಗುತ್ತಿದೆಯೇ ಎಂಬ ಅನುಮಾನ ಕೂಡ ಇದೀಗ ಉಂಟು ಮಾಡಿದೆ..


ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ (Kantara) ಸಿನಿಮಾ ಈಗಾಗಲೇ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಸುಮಾರು 16 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಈ ಸಿನಿಮಾದ ಮೊದಲ ಭಾಗ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರದ ಬಿಡುಗಡೆಗಾಗಿ ಸಿನಿ ಪ್ರಿಯರು ಕಾತುರ ರಾಗಿದ್ದು ಈ ನಡುವೆ ಸಿನಿಮಾ ತಂಡಕ್ಕೆ ವಿಘ್ನ ಎದುರಾ ದಂತೆ ಆಗಿದೆ. ಹೌದು ಕಾಂತಾರ ಚಾಪ್ಟರ್ -1 ಶೂಟಿಂಗ್ ಸಮಯದಲ್ಲಿ ಜೂನಿಯರ್ ಕಲಾವಿದನೊಬ್ಬ ಸಾವಿ ಗೀಡಾಗಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ತಯಾರಿ ಹಂತದಲ್ಲೇ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದ್ದು, ದೈವ ನುಡಿದ ಮಾತು ನಿಜವಾಗುತ್ತಿದೆಯೇ ಎಂಬ ಅನುಮಾನ ಕೂಡ ಇದೀಗ ಉಂಟು ಮಾಡಿದೆ.
ಬಹುನಿರೀಕ್ಷಿತ ಕಾಂತರ ಚಾಪ್ಟರ್ -1 ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಈ ಸಿನಿಮಾದ ಸೆಟ್ನಲ್ಲಿದ್ದ ಜೂನಿಯರ್ ಆರ್ಟಿಸ್ಟ್ ನಿಧನರಾಗಿದ್ದಾರೆ.ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದ್ದು ಇವರನ್ನು ಕೇರಳ ಮೂಲದವರು ಎಂದು ಹೇಳಲಾಗಿದೆ. ಶೂಟಿಂಗ್ ಮುಗಿಸಿದ ಬಳಿಕ ಕಪಿಲ್ ಎನ್ನುವ ಜೂನಿ ಯರ್ ಆರ್ಟಿಸ್ಟ್ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದರು. ಈ ವೇಳೆ ಅವರು ಮುಳುಗಿ ಸಾವಿಗೀಡಾಗಿದ್ದಾರೆ.
ರಿಷಬ್ ಶೆಟ್ಟಿ ಅವರ ಕಾಂತಾರ 2 ಚಿತ್ರಕ್ಕೆ ಹಲವು ವಿಘ್ನಗಳು ಬರಲಾರಂಭಿಸಿತ್ತು. ಈ ಹಿಂದೆ ಕಾಡಿನಲ್ಲಿ ಚಿತ್ರೀಕರಣ ವೇಳೆ ಅರಣ್ಯ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿತ್ತು. ಹಾಗೆಯೇ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಜೋರಾದ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಇಂಥ ಘಟನೆಗಳ ಬೆನ್ನಲ್ಲೇ ಜೂನಿಯರ್ ಆರ್ಟಿಸ್ಟ್ ದಾರುಣ ಸಾವು ಕೂಡ ಸಂಭವಿಸಿದೆ.
ಇತ್ತೀಚೆಗಷ್ಟೇ ಕಾಂತಾರ-1' ಚಿತ್ರಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದು ದೈವ ನುಡಿದಿತ್ತು. ಧೃತಿಗೆಡಬೇಡ, ನಿನ್ನ ಸಂಸಾರ ಹಾಳು ಮಾಡಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ನಿನ್ನ ಜೊತೆಗಿದ್ದವರೇ ಕೇಡು ಬಯಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ದೈವ ನುಡಿದ ಸರಿಯಾಗಿ ಒಂದು ತಿಂಗಳ ನಂತರ ಈ ದುರಂತ ಸಂಭವಿಸಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ.
2022ರಲ್ಲಿ ತೆರೆಗೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಕಂಡು ಸಕ್ಸಸ್ ಪಡೆದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಚಿತ್ರರಂಗದಲ್ಲೆ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್’ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ಮಾಣ ಆಗುತ್ತಿದ್ದು ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ'-1 ಚಾಪ್ಟರ್ ಸಿನಿಮಾ ನಿರ್ಮಾಣವಾಗುತ್ತಿದೆ.