Kavya Bigg Boss: ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ! ಅಶ್ವಿನಿಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಕಾವ್ಯಾ?
Gilli Nata: ಬಿಗ್ ಬಾಸ್ ಸೀಸನ್ 12ರ ಟ್ರೋಪೀಯನ್ನು ಗೆದ್ದು ಬೀಗಿದ್ದಾರೆ ಗಿಲ್ಲಿ ನಟ. ಗಿಲ್ಲಿ ಕ್ರೇಜ್ ಜೋರಾಗಿದೆ. ಅಷ್ಟೇ ಅಲ್ಲ ಕೈಗೆ ಸಿಗಲಾರದಷ್ಟು ಬ್ಯುಸಿ ಆಗಿದ್ದಾರೆ ಗಿಲ್ಲಿ. ನಟನ ಹುಟ್ಟೂರಿನಲ್ಲಿ ಮೆರವಣಿಗೆಯೂ ಜೋರಾಗಿ ಆಗಿದೆ. ಇದರ ಬೆನ್ನಲ್ಲೇ ಅಶ್ವಿನಿ ಗೌಡ ಅವರು ಬಡವರ ಮಕ್ಕಳು ಬೆಳೆಯಬೇಕು ನಿಜ. ಆದರೆ ಗಿಲ್ಲಿ ಬಡವ ಅಲ್ಲ, ಬಡವರ ಥರ ಗೆಟಪ್ ಹಾಕಿಕೊಂಡು ಆಟ ಆಡಿದ ಎಂದು ಅಶ್ವಿನಿ ಹೇಳಿದ್ದಾರೆ. ಇದಾದ ಬಳಿಕ ಕಾವ್ಯ ಪೋಸ್ಟ್ ವೈರಲ್ ಆಗಿದೆ. ಅಶ್ವಿನಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಟ್ರೋಪೀಯನ್ನು ಗೆದ್ದು ಬೀಗಿದ್ದಾರೆ ಗಿಲ್ಲಿ ನಟ. ಗಿಲ್ಲಿ (Gilli Nata) ಕ್ರೇಜ್ ಜೋರಾಗಿದೆ. ಅಷ್ಟೇ ಅಲ್ಲ ಕೈಗೆ ಸಿಗಲಾರದಷ್ಟು ಬ್ಯುಸಿ ಆಗಿದ್ದಾರೆ ಗಿಲ್ಲಿ. ನಟನ ಹುಟ್ಟೂರಿನಲ್ಲಿ ಮೆರವಣಿಗೆಯೂ ಜೋರಾಗಿ ಆಗಿದೆ. ಇದರ ಬೆನ್ನಲ್ಲೇ ಅಶ್ವಿನಿ ಗೌಡ (Ashwini Gowda) ಅವರು ಬಡವರ ಮಕ್ಕಳು ಬೆಳೆಯಬೇಕು ನಿಜ. ಆದರೆ ಗಿಲ್ಲಿ ಬಡವ ಅಲ್ಲ, ಬಡವರ ಥರ ಗೆಟಪ್ ಹಾಕಿಕೊಂಡು ಆಟ ಆಡಿದ ಎಂದು ಅಶ್ವಿನಿ ಹೇಳಿದ್ದಾರೆ. ಇದಾದ ಬಳಿಕ ಕಾವ್ಯ (Kavya Gowda) ಪೋಸ್ಟ್ ವೈರಲ್ ಆಗಿದೆ. ಅಶ್ವಿನಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.
ಜನ ಮೆಚ್ಚಿದ ಜೋಡಿ
ಕಾವ್ಯ ಹಾಗೂ ಗಿಲ್ಲಿ ಜೋಡಿ ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್. ಕಾವ್ಯ ಮತ್ತು ಗಿಲ್ಲಿಯ ಸ್ನೇಹವನ್ನು ಜನ ಮೆಚ್ಚಿಕೊಂಡಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ಕಟೌಟ್ ರಾರಾಜಿಸುತ್ತಿತ್ತು. ಅಷ್ಟರ ಮಟ್ಟಿಗೆ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಗಿಲ್ಲಿ ಕೂಡ ಗೆದ್ದ ಬಳಿಕ ಕಾವ್ಯ, ಅವರು ಖುಷಿ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bigg Boss Kannada 12: ಕಾವ್ಯ ಜೊತೆ ಮದುವೆ ಆಗ್ತಾರಾ ಗಿಲ್ಲಿ? ಮಾತಿನ ಮಲ್ಲನ ಉತ್ತರ ಇದು!
ಬಿಗ್‌ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮೊದಲ ದಿನದಿಂದ ಸ್ನೇಹಿತರಾಗಿದ್ದರು. ಆಕೆ 3ನೇ ರನ್ನರ್ ಅಪ್ ಎನಿಸಿಕೊಂಡರು. ಆಕೆ ಮನೆಯಿಂದ ಹೊರ ಬಂದ ಬಳಿಕ ಸುದೀಪ್ ಹೋಗಿ ಇನ್ನುಳಿದ ಮೂವರನ್ನು ವೇದಿಕೆಗೆ ಕರೆತಂದರು. ಇದೇ ಮೊದಲ ಬಾರಿಗೆ ಬಹಿರಂಗವಾಗಿ ಗಿಲ್ಲಿ ಗೆಲುವಿಗೆ ಕಾವ್ಯಾ ಪ್ರತಿಕ್ರಿಯಿಸಿದ್ದಾರೆ.
ಗಿಲ್ಲಿ ಪೋಸ್ಟ್ ಏನು?
ಗಿಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿರುವ ಕಾವ್ಯಾ "ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ .. ಹೇ ಗಿಲ್ಲಿ ಕಂಗ್ರಾಟ್ಸ್ ಕಣೋ. ನೀನು ಇದಕ್ಕೆ ಅರ್ಹ. ಜೀರೊದಿಂದ ಹೀರೋ ಈಗ.. ಇನ್ನು ಸಾಕಷ್ಟು ಸಾಧಿಸಬೇಕು. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವಂತಾಗಲಿ. ತುಂಬಾ ತುಂಬ ಒಳ್ಳೇದಾಗ್ಲಿ" ಎಂದು ಕಾವ್ಯಾ ಬರೆದುಕೊಂಡಿದ್ದಾರೆ.
"ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ" ಎನ್ನುವ ಸಾಲು ಅಶ್ವಿನಿಗೆ ಗೌಡಗೆ ಕೌಂಟರ್ ಕೊಡಲು ಬಳಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.ಗಿಲ್ಲಿ ಇಲ್ಲ ಅಂದ್ರೆ ಕಾವ್ಯಾ ಜೀರೊ ಎಂದು ಅಶ್ವಿನಿ ಹೇಳಿದ್ದರು. ಗಿಲ್ಲಿ ಹಾಗೂ ಕಾವ್ಯಾ ಜಂಟಿ ಸ್ಪರ್ಧಿಗಳಾಗಿ ಮನೆ ಒಳಗೆ ಹೋಗಿದ್ದರು. ಇಬ್ಬರೂ ಸ್ನೇಹಿತರಾಗಿದ್ದರು. ಪದೇ ಪದೆ ಜಗಳ ಆಡುತ್ತಿದ್ದರು. ಟಾಮ್ ಅಂಡ್ ಜೆರಿ ರೀತಿ ಇವರ ಜಗಳ ವೀಕ್ಷಕರಿಗೂ ಮನರಂಜನೆ ಕೊಟ್ಟಿತ್ತು.
ಅಶ್ವಿನಿ ಹೇಳಿದ್ದೇನು?
ಮಾಧ್ಯಮವೊಂದಕ್ಕೆ ಅಶ್ವಿನಿ ಹೇಳಿಕೆ ನೀಡಿದ್ದು ಹೀಗೆ, ಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಮ್ಮ ಡಾಲಿ ಧನಂಜಯ್ ಅವರ ಡೈಲಾಗ್. ಗಿಲ್ಲಿ ನಿಜವಾದ ಬಡವನಾ? ಅದು ಬಹಳ ಮುಖ್ಯ ಆಗುತ್ತೆ. ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್ ಹಾಕ್ಕೊಂಡು ಬದುಕೋದು ಬೇರೆ.
ಬಹುಶಃ ಅವರ ಆಟ ಎಲ್ಲರಿಗೂ ಇಷ್ಟ ಆಗಿದೆ ಅಂತ ಹೇಳೋಕೆ ನಾನು ಇಷ್ಟ ಪಡ್ತೀನಿ.ಗಿಲ್ಲಿ ಗೆದ್ದಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಆಟದ ವಿಚಾರದಲ್ಲಿ ಖಂಡಿತ ನನಗೆ ಹೆಮ್ಮೆಯಿದೆ. ಯಾಕಂದ್ರೆ ಅವರೂ ನನ್ನ ಜೊತೆ ಪ್ರಯಾಣ ಮಾಡಿದ ಪ್ರತಿಸ್ಪರ್ಧಿ ಎಂದಿದ್ದರು.