ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiccha Sudeep: ಮುಂದಿನ ಯೋಜನೆಗಳ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಘೋಷಣೆ; ಫ್ಯಾನ್ಸ್‌ ಖುಷ್‌!

Kiccha Sudeep: ಇಷ್ಟು ದಿನ ಕಿಚ್ಚನ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈ ಒಂದೇ ಒಂದು ಪೋಸ್ಟ್ ಖುಷಿ ನೀಡಿದೆ. ಕಿಚ್ಚ ಸುದೀಪ್ ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ನೀಡಿದ್ದಾರೆ.

ಮುಂದಿನ ಯೋಜನೆಗಳ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಘೋಷಣೆ

ಕಿಚ್ಚ ಸುದೀಪ್‌ -

Yashaswi Devadiga
Yashaswi Devadiga Jun 10, 2026 10:58 AM

ಇದೇ ತಿಂಗಳು ಜೂನ್ 26ರಿಂದ ಸುದೀಪ್ ಅವರ ಬಹುನಿರೀಕ್ಷಿತ ‘ಬಿಆರ್​​ಬಿ’ (BRB Movie) ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇಷ್ಟು ದಿನ ಕಿಚ್ಚನ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈ ಒಂದೇ ಒಂದು ಪೋಸ್ಟ್ ಖುಷಿ ನೀಡಿದೆ. ಕಿಚ್ಚ ಸುದೀಪ್ (kichcha sudeepa) ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾಗಳ (Cinema Update) ಅಪ್‌ಡೇಟ್ ನೀಡಿದ್ದಾರೆ.

ಕಿಚ್ಚ ಪೋಸ್ಟ್‌ನಲ್ಲಿ ಏನಿದೆ?

ನಿಮ್ಮ ಪ್ರೀತಿಯನ್ನು ನಾನೆಂದೂ ಲಘುವಾಗಿ ಪರಿಗಣಿಸಿಲ್ಲ ನೀವೆಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ ಇಲ್ಲಿದೆ. ಸಿನಿಮಾ ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ಮನರಂಜನೆ ನೀಡುವುದಕ್ಕಿಂತ ನನಗೆ ಇಷ್ಟವಾದದ್ದು ಯಾವುದೂ ಇಲ್ಲ. ನಿಮ್ಮ ಈ ‘ವೇಕ್ ಅಪ್’ ಪ್ರಯತ್ನಗಳು ನನ್ನ ಕೆಲಸದ ಮೇಲಿರುವ ನಿಮ್ಮ ಪ್ರೀತಿಯನ್ನು ತೋರಿಸುತ್ತವೆ, ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಈ ಸಣ್ಣ ವಿರಾಮದಲ್ಲೂ ಸಹ, ನಾನು ಕೆಲಸದಲ್ಲಿ ನಿರತನಾಗಿದ್ದೇನೆ.

ಇದನ್ನೂ ಓದಿ: Chaitra Rao: ಕೂದಲಿಗೆ ಕತ್ತರಿ, ಶಾಕಿಂಗ್‌ ವಿಚಾರ ತೆರೆದಿಟ್ಟ 'ಗಿಣಿರಾಮ' ಆಯಿಸಾಹೇಬ್​!

26 ರಂದು "BRB" ನೊಂದಿಗೆ ನೆಬರುತ್ತಿದ್ದೇನೆ, 4 ಸ್ಕ್ರಿಪ್ಟ್‌ಗಳನ್ನು ಲಾಕ್ ಮಾಡಿದ್ದೇನೆ ಮತ್ತು ಅವೆಲ್ಲವನ್ನೂ ಶೀಘ್ರದಲ್ಲೇ ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ.

ತುಂಬಾ ಲವ್ & ಹಗ್ಸ್ ಎಂದು ಬರೆದುಕೊಂಡಿದ್ದಾರೆ. ಜೂನ್ 26ರಿಂದ ಸುದೀಪ್ ಅವರ ಬಹುನಿರೀಕ್ಷಿತ ‘ಬಿಆರ್​​ಬಿ’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಈಗಾಗಲೇ ಅವರು 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು (ಕಥೆಗಳನ್ನು) ಲಾಕ್ ಮಾಡಿದ್ದಾರೆ.



ಇತ್ತೀಚಗೆ ಸುದೀಪ್‌ ಅವರು ನೆಪೋಟಿಸಂ ಕುರಿತಾಗಿ ಸುದ್ದಿಯಾಗಿದ್ದರು. ಮ್ಯಾಂಗೋ ಪಚ್ಚ' ಸಿನಿಮಾ ನೋಡಿದ ಬಳಿಕ ನೆಪೋಟಿಸಂ ಬಗ್ಗೆ ಕಿಚ್ಚ ಸುದೀಪ್ 'ನೆಪೋಟಿಸಂ' ಬಗ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. "ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದೇನೆ. ಇಂಡಸ್ಟ್ರಿಗೆ ಹೊಸಬರು ಬರಲಿ. ಬರೀ ನಮ್ಮ ಸಿನಿಮಾಗಳನ್ನಷ್ಟೇ ನೋಡುವುದಲ್ಲ. ಹೊಸಬರ ಸಿನಿಮಾಗಳನ್ನು ನೋಡಬೇಕು. ಅವರು ಬರಬೇಕು. ನಾವು ಎಷ್ಟು ವರ್ಷ ಸಿನಿಮಾಗಳನ್ನು ಮಾಡುತ್ತೇವೆ. ಮುಂದೆ ನಮ್ಮ ಭಾಷೆಯನ್ನು ತೆಗೆದುಕೊಂಡು ಹೋಗುವುದು ಯುವಕರು.

ಇದನ್ನೂ ಓದಿ: Salman Khan : ಗೆಳತಿ ನಿಧನದಿಂದ ತೀವ್ರ ದುಃಖಿತರಾದ ಸಲ್ಮಾನ್‌ ಖಾನ್‌; ಯಾರು ಈ ಕುಮುದ್ ರಾಣೆ ?

ಬೇರೆ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಪ್ರೋತ್ಸಾಹ ನೀಡುತ್ತಾರೆ. ಇಂತಹ ಸಿನಿಮಾಗಳನ್ನು ನೋಡಬೇಕು. ಒಬ್ಬ ಡೈರೆಕ್ಟರ್ ಹುಟ್ಟಿಕೊಳ್ಳುತ್ತಾರೆ. ಒಬ್ಬ ಕ್ಯಾಮರಾಮ್ಯಾನ್ ಹುಟ್ಟಿಕೊಳ್ಳುತ್ತಾರೆ. ಒಬ್ಬ ಹೀರೋ ಬಂದ್ಮೇಲೆ ಅವರಿಂದ ಎಷ್ಟು ಸಿನಿಮಾಗಳು ಆಗಬಹುದು. ಹಾಗಾಗಿ ಇಂತಹ ಸಿನಿಮಾಗಳನ್ನು ನೋಡುವುದಕ್ಕೆ ಬರಬೇಕು" ಎಂದು ಹೇಳಿದ್ದರು.