Sanvi Sudeep: ಟಾಲಿವುಡ್ ಸಿನಿಮಾದಲ್ಲಿ ಕಿಚ್ಚನ ಮಗಳು ಸಾನ್ವಿ: ಮುಂದಿನ ವಾರವೇ ಚಿತ್ರ ತೆರೆಗೆ
ತೆಲುಗು ಚಿತ್ರವೊಂದರಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟಾಲಿವುಡ್ ನಟ ನಾನಿ ಮಾಹಿತಿ ನೀಡಿದ್ದಾರೆ. ಇಲ್ಲಿ ಸಾನ್ವಿ ಹೀರೊಯಿನ್ ಆಗಿ ನಟಿಸುತ್ತಿಲ್ಲ ಅಥವಾ ಯಾವುದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ನಾನಿ ನಟನೆಯ ತೆಲುಗಿನ ಆಕ್ಷನ್ ಥ್ರಿಲ್ಲರ್ ಹಿಟ್- 3 ಸಿನಿಮಾದ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.

Sanvi Sudeep Hit 3

ಸಾನ್ವಿ ಸುದೀಪ್ (Sanvi Sudeep) ಸ್ಯಾಂಡಲ್ವುಡ್ನ ಸ್ಟಾರ್ ಹೀರೋ ಅಭಿನಯ ಚಕ್ರವರ್ತಿ ಸುದೀಪ್ ಅವರ ಏಕಮಾತ್ರ ಪುತ್ರಿ. ನೋಡಲು ಬಬ್ಲಿ ಬಬ್ಲಿಯಾಗಿ ಕ್ಯೂಟ್ ಆಗಿರುವ ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸಾನ್ವಿ ಸುದೀಪ್ ತಂದೆಯಂತೆಯೇ ಕಂಠ ಸಿರಿ ಹೊಂದಿದ್ದು, ಅದ್ಭುತ ಗಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ಕೂಡ ನಟನೆ ಮಾಡಿದ್ದಾರೆ. ಸಾನ್ವಿ ಅವರು ಸುದೀಪ್ರ ಸೋದರಳಿಯನ ಜಿಮ್ಮಿ ಸಿನಿಮಾಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಸದ್ದಿಲ್ಲದೆ ಇವರು ಟಾಲಿವುಡ್ಗೆ ಕಾಲಿಟ್ಟಿದ್ದಾರೆ.
ಸುದೀಪ್ ಪುತ್ರಿ ಸಾನ್ವಿ ತೆಲುಗು ಚಿತ್ರವೊಂದರಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟಾಲಿವುಡ್ ನಟ ನಾನಿ ಮಾಹಿತಿ ನೀಡಿದ್ದಾರೆ. ಇಲ್ಲಿ ಸಾನ್ವಿ ಹೀರೊಯಿನ್ ಆಗಿ ನಟಿಸುತ್ತಿಲ್ಲ ಅಥವಾ ಯಾವುದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ನಾನಿ ನಟನೆಯ ತೆಲುಗಿನ ಆಕ್ಷನ್ ಥ್ರಿಲ್ಲರ್ ಹಿಟ್- 3 ಸಿನಿಮಾದ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಈ ಕುರಿತು ನಾನಿ ಸಂದರ್ಶನವೊಂದರಲ್ಲಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ ನಾನಿ, ಸುದೀಪ್ ಅವರು ನನ್ನ ಕುಟುಂಬ. ನಿನ್ನೆಯಷ್ಟೇ ನಾವು ಭೇಟಿಯಾಗಿದ್ದೇವು. ಆ ನಂತರ ಅವರು ಬಿಲ್ಲಾ ರಂಗ ಭಾಷಾ ಶೂಟಿಂಗ್‌ಗೆ ತೆರಳಿದರು. ನೀವು ಹಿಟ್ 3 ಟ್ರೈಲರ್ ನೋಡಿದ್ರಾ ಅದರಲ್ಲಿ ಗಾಯಕಿಯ ಧ್ವನಿ ಕೇಳಿಸುತ್ತದೆ. ಅದು ಸಾನ್ವಿಯ ವಾಯ್ಸ್ ಎಂದು ನಾನಿ ರಿವೀಲ್ ಮಾಡಿದ್ದಾರೆ. ನಾನು ಸಾನ್ವಿ ವಾಯ್ಸ್‌ಗೆ ಅಭಿಮಾನಿ, ಆಕೆ ಅದ್ಭುತ ಹಾಡುಗಾರ್ತಿ ಎಂದು ನಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Actor Sridhar: ಪಾರು ಸೀರಿಯಲ್ ನಟ ಶ್ರೀಧರ್‌ಗೆ ಅನಾರೋಗ್ಯ: ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ನಟ!
ನಾನಿ ನಟನೆಯ ತೆಲುಗಿನ ಆಕ್ಷನ್ ಥ್ರಿಲ್ಲರ್ ಹಿಟ್- 3 ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಗಾಗಿ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರದಲ್ಲಿ ನಾನಿ ತೊಡಗಿಸಿಕೊಂಡಿದ್ದಾರೆ. ಹಿಟ್ ಸರಣಿಯಲ್ಲಿ ಇದುವರೆಗೆ 2 ಸಿನಿಮಾಗಳು ಬಂದಿವೆ, ಆದರೆ ಮೊದಲ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಎರಡನೆಯದು ಸಾಧಾರಣವೆನಿಸಿತು. ಮತ್ತು ಈಗ ಮೂರನೆಯದು... ನ್ಯಾಚುರಲ್ ಸ್ಟಾರ್ ನಾನಿ ಸಖತ್ ಆಕ್ಷನ್ ಪ್ಯಾಕ್ಡ್‌ನೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ.