ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ram Charan: ಮೂರೇ ದಿನಕ್ಕೆ ದಾಖಲೆಯ ಕಲೆಕ್ಷನ್‌ ಮಾಡಿದ ʻಪೆದ್ದಿʼ; ವಿಶ್ವಾದ್ಯಂತ ಈವರೆಗೂ ಆಗಿರುವ ಗಳಿಕೆ ಎಷ್ಟು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ವಿಶ್ವಾದ್ಯಂತ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 236.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಪ್ರಮಾಣ ಹಣ ಬಾಚಿಕೊಂಡ ʻಪೆದ್ದಿʼ!

-

Avinash GR
Avinash GR Jun 7, 2026 8:18 PM

ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ನಟನೆಯ ʻಪೆದ್ದಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮಿಶ್ರ ಪ್ರತಿಕ್ರಿಯೆಗಳು ಸಿಕ್ಕರೂ, ಮೊದಲ ಮೂರು ದಿನಗಳಿಗೆ ಈ ಸಿನಿಮಾವು ವಿಶ್ವಾದ್ಯಂತ 236 ಕೋಟಿ ರೂ. ಗಳಿಸುವಲ್ಲಿ ಯಶಸ್ಸು ಕಂಡಿದೆ. ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಪ್ರೆಸೆಂಟ್ಸ್‌ನಲ್ಲಿ, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ಸಾನಾ ನಿರ್ದೇಶನ ಮಾಡಿದ್ದಾರೆ.

ಮೂರೇ ದಿನಗಳಲ್ಲಿ ರೂ. 236.70 ಕೋಟಿ!

ಬಾಕ್ಸ್ ಆಫೀಸ್‌ನಲ್ಲಿ 'ಪೆದ್ದಿ' ಸಿನಿಮಾವು ಮೊದಲ ದಿನ ವಿಶ್ವಾದ್ಯಂತ ಸುಮಾರು ರೂ. 135.36 ಕೋಟಿ ರೂ. ಗಳಿಸಿತ್ತು. ಎರಡನೇ ದಿನದ ಅಂತ್ಯಕ್ಕೆ ಆ ಮೊತ್ತವು 181.80 ಕೋಟಿಗೆ ತಲುಪಿತ್ತು. ಇದೀಗ ಮೂರನೇ ದಿನದ ಮುಕ್ತಾಯಕ್ಕೆ ಈ ಚಿತ್ರವು ಬರೋಬ್ಬರಿ ರೂ. 236.70 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟರ್ ಮೂಲಕ ಹಂಚಿಕೊಂಡಿದೆ.‌

Peddi Review: ಕ್ರಾಸ್‌ಓವರ್ ಅಥ್ಲೀಟ್ ಪೆದ್ದಿಯ ಸಾಧಾರಣ ಆಟ; ಬದುಕಿನ ಗುರುತಿಗಾಗಿ ನಡೆಯುವ ಅಸಾಧಾರಣ ಹೋರಾಟ!

ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೆ ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲೂ ಈ ಸಿನಿಮಾ ದಾಖಲೆಗಳನ್ನು ಬರೆಯುತ್ತಿದೆ. ಬುಕ್ ಮೈ ಶೋ ಮತ್ತು ಡಿಸ್ಟ್ರಿಕ್ಟ್ ಆ್ಯಪ್‌ಗಳಲ್ಲಿ ಇದುವರೆಗೆ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು, ಭಾನುವಾರ ರಜಾದಿನವಾದ್ದರಿಂದ ನಾಲ್ಕನೇ ದಿನವು ಉತ್ತಮ ಕಮಾಯಿ ಆಗಿರುವ ಸಾಧ್ಯತೆ ಇದ್ದು, ಮೊದಲ ವಾರಾಂತ್ಯಕ್ಕೆ ಈ ಸಿನಿಮಾವು 300 ಕೋಟಿ ರೂ. ಗಡಿ ತಲುಪುವ ಸಾಧ್ಯತೆ ಇದೆ.

ಜಾನ್ವಿ ಪಾತ್ರದ ಕುರಿತು ವಿವಾದ; ದೃಶ್ಯಗಳಿಗೆ ಕತ್ತರಿ

ಒಂದು ಕಡೆ ಸಿನಿಮಾವು ಭರ್ಜರಿ ಕಲೆಕ್ಷನ್‌ನೊಂದಿಗೆ ಮುನ್ನುಗ್ಗುತ್ತಿದ್ದರೂ, ಮತ್ತೊಂದೆಡೆ ನಾಯಕಿಯ ಪಾತ್ರದ ಚಿತ್ರಣದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿವಾದ ಭುಗಿಲೆದ್ದಿದೆ. ಇದರಲ್ಲಿ ಜಾನ್ವಿ ಕಪೂರ್ ನಿರ್ವಹಿಸಿರುವ 'ಅಚ್ಚಿಯಮ್ಮ' ಪಾತ್ರವನ್ನು ತೋರಿಸಿರುವ ವಿಧಾನ ಮತ್ತು ಆಕೆಯನ್ನು ಮಿತಿಮೀರಿ ಲೈಂಗಿಕವಾಗಿ ಬಿಂಬಿಸಿರುವುದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಹೀರೋ, ನಾಯಕಿಯ ಅನುಮತಿಯಿಲ್ಲದೆ ಮುತ್ತಿಡುವ ದೃಶ್ಯ ಹಾಗೂ ಕಥೆಯನ್ನು ಮುನ್ನಡೆಸಲು ನಾಯಕಿಯ ಪಾತ್ರವನ್ನು ಕೇವಲ ಟ್ರಿಗರ್ ಪಾಯಿಂಟ್ ಆಗಿ ಬಳಸಿ, ಗ್ಲಾಮರ್‌ಗಷ್ಟೇ ಸೀಮಿತಗೊಳಿಸಿರುವುದಕ್ಕೆ ಟೀಕೆಗಳು ಕೇಳಿಬಂದಿವೆ.

Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಪೆದ್ದಿ ಚಿತ್ರದ ಕಲೆಕ್ಷನ್‌ ರಿಪೋರ್ಟ್



ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಬುಚ್ಚಿ ಬಾಬು ಸಾನಾ, "ರಾಮ್ ಚರಣ್ ಮತ್ತು ಜಾನ್ವಿ ನಡುವೆ ಒಂದು ಮಜಾವಾದ ರೋಮ್ಯಾಂಟಿಕ್ ಟ್ರ್ಯಾಕ್ ಮೂಡಿಸಬೇಕೆಂಬ ಉದ್ದೇಶದಿಂದ ಆ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಇದರಿಂದ ಈ ಮಟ್ಟದ ವಿರೋಧ ವ್ಯಕ್ತವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದು ಹೇಳಿ, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಅಲ್ಲದೆ, ವಿವಾದಕ್ಕೆ ಕಾರಣವಾದ ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ಡಿಲೀಟ್‌ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ನಿರ್ದೇಶಿಸುವ ಚಿತ್ರಗಳಲ್ಲಿ ಮಹಿಳಾ ಪಾತ್ರಗಳನ್ನು ಮತ್ತಷ್ಟು ಗೌರವಯುತವಾಗಿ ತೋರಿಸುವುದಾಗಿ ಬುಚ್ಚಿ ಬಾಬು ಭರವಸೆ ನೀಡಿದ್ದಾರೆ.