SL vs ZIM: ಸಿಕಂದರ್ ರಾಝಾ ಅಬ್ಬರ, ಶ್ರೀಲಂಕಾಗೆ ಆಘಾತ ನೀಡಿದ ಜಿಂಬಾಬ್ವೆ!
SL vs ZIM Match Highlights: ಸಿಕಂದರ್ ರಾಝಾ ಹಾಗೀ ಬ್ರಿಯಾನ್ ಬೆನೆಟ್ ಅವರ ಬ್ಯಾಟಿಂಗ್ ಬಲದಿಂದ ಜಿಂಬಾಬ್ವೆ ತಂಡ, ಎದುರಾಳಿ ಶ್ರೀಲಂಕಾವನ್ನು ಕೊನೆಯ ಲೀಗ್ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಮಣಿಸಿ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ಕ್ಕೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಶ್ರೀಲಂಕಾ ವಿರುದ್ಧ ಜಿಂಬಾಬ್ವೆ ತಂಡಕ್ಕೆ 6 ವಿಕೆಟ್ ಜಯ. -
ಕೊಲಂಬೊ: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಜಿಂಬಾಬ್ವೆ(Zimbabwe) ತಂಡ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ (Sri lanka) ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (T20 World Cup 2026) ಸೂಪರ್-8ಕ್ಕೆ ಸಿಕಂದರ್ ರಾಝಾ ನಾಯಕತ್ವದ ತಂಡ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಸೋಲುವ ಮೂಲಕ ಆತಿಥೇಯ ಶ್ರೀಲಂಕಾ ತಂಡ ತವರು ಅಭಿಮಾನಿಗಳ ಎದುರು ಮುಖಭಂಗವನ್ನು ಅನುಭವಿಸಿದ್ದಾರೆ.
ಗುರುವಾರ ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ ತಂಡ, ಪಥುಮ್ ನಿಸಾಂಕ (62 ರನ್) ಹಾಗೂ ಪವನ್ ರತ್ಮ ನಾಯಕೆ (44 ರನ್) ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 178 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಜಿಂಬಾಬ್ವೆಗೆ 179 ರನ್‌ಗಳ ಗುರಿಯನ್ನು ನೀಡಿತು.
T20 World Cup 2026: ಸೆಮಿಫೈನಲ್ಸ್‌ಗೆ ಪ್ರವೇಶಿಸಬಲ್ಲ 4 ತಂಡಗಳನ್ನು ಆರಿಸಿದ ಗ್ಲೆನ್ ಮೆಗ್ರಾಥ್!
ಬಳಿಕ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, ಬ್ರಿಯನ್ ಬೆನೆಟ್ ಹಾಗೂ ಸಿಕಂದರ್ ರಾಝಾ ಅವರ ಶಕ್ತಿಯುತ ಬ್ಯಾಟಿಂಗ್ ಬಲದಿಂದ 19.3 ಓವರ್‌ಗಳಿಗೆ 4ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಜಿಂಬಾಬ್ವೆ ತಂಎ ಬಿ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದು ಸೂಪರ್-8ಕ್ಕೆ ಪ್ರವೇಶ ಮಾಡಿದೆ.
Sri Lanka set Zimbabwe a target of 179 🎯#SLvZIM #T20WorldCup 📝 https://t.co/ZtrHAXewii pic.twitter.com/RLf6rFsEwi
— Zimbabwe Cricket (@ZimCricketv) February 19, 2026
ಪಥುಮ್ ನಿಸಾಂಕ ಅರ್ಧಶತಕ
ಶ್ರೀಲಂಕಾ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಆರಂಭಿಕ ಬ್ಯಾಟ್ಸ್‌ಮನ್ ಪಥುಮ್ ನಿಸಾಂಕ. ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದೀಗ ಅದೇ ಲಯವನ್ನು ಜಿಂಬಾಬ್ವೆ ವಿರುದ್ಧವೂ ಪ್ರದರ್ಶಿಸಿದರು. ಅವರು ಆಡಿದ 48 ಎಸೆತಗಳಲ್ಲಿ 63 ರನ್ ಗಳಿಸಿದರು ಹಾಗೂ 22 ರನ್ ಗಳಿಸಿದ ಕುಸಾಲ್ ಪೆರೆರಾ ಅವರೊಂದಿಗೆ ಮೊದಲನೇ ವಿಕೆಟ್‌ಗೆ 54 ರನ್ ಜೊತೆಯಾಟವನ್ನು ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಪವನ್ ರತ್ನನಾಯಕೆ ಅವರು 25 ಎಸೆತಗಳಲ್ಲಿ 44 ರನ್ ಗಳಿಸಿದರು. ಮೊದಲ 11 ಓವರ್‌ಗಳವರೆಗೂ ಶ್ರೀಲಂಕಾ ಮೇಲುಗೈ ಸಾಧಿಸಿತ್ತು.
Back-to-back half-centuries for Brian Bennett, his 11th in T20Is 👏#SLvZIM #T20WorldCup 📝 https://t.co/ZtrHAXewii pic.twitter.com/EeBE79uKwF
— Zimbabwe Cricket (@ZimCricketv) February 19, 2026
ಎರಡನೇ ಅವಧಿಯಲ್ಲಿ ಜಿಂಬಾಬ್ವೆ ಬೌಲರ್‌ಗಳು ಮೇಲುಗೈ ಸಾಧಿಸಿದರು. ನಿಯಮಿತವಾಗಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಿಂಬಾಬ್ವೆ, 200ರ ಹಾದಿಯಲ್ಲಿ ಸಾಗುತ್ತಿದ್ದ ಆತಿಥೇಯ ತಂಡವನ್ನು ಕಟ್ಟಿಹಾಕಿತು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಝರಬಾನಿ, ವೆಲ್ಲಿಂಗ್ಟನ್ ಮಸಕಟ್ಜಾ ಹಾಗೂ ಗ್ರೇಮ್ ಕ್ರೇಮರ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
A 68-run partnership between Brian Bennett (57*) and Sikandar Raza (45*)
— Zimbabwe Cricket (@ZimCricketv) February 19, 2026
Zimbabwe are 166/2, they need 13 runs in 12 balls with 8 wickets in hand#SLvZIM #T20WorldCup 📝 https://t.co/ZtrHAXewii pic.twitter.com/qEoibBtNUc
ಬ್ರಿಯನ್ ಬೆನೆಟ್-ಸಿಕಂದರ್ ರಾಜಾ ಅಬ್ಬರ
ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯನ್ ಬೆನೆಟ್ ಅವರು ಕೊನೆಯವರೆಗೂ ಅಜೇಯರಾಗಿ ಉಳಿದು ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 48 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಾಜಾ ಕೇವಲ 26 ಎಸೆತಗಳಲ್ಲಿ ಅಜೇಯ 45 ರನ್‌ಗಳನ್ನು ಸಿಡಿಸಿದರು. ಅವರು ತನ್ನ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 173.08ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ಜಿಂಬಾಬ್ವೆ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತಾಡುಮಾನಶೆ ಮಾರುಮಣಿ 26 ಎಸೆತಗಳಲ್ಲಿ 34 ರನ್, ರಯಾನ್ ಬರ್ಲ್ 12 ಎಸೆತಗಳಲ್ಲಿ 23 ರನ್ ಗಳಿಸಿದ್ದರು.