ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rishab Shetty: ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ! ಏನಿದು ಮ್ಯಾಟರ್‌?

Rishab Shetty: ರಿಷಬ್‌ ಟ್ವೀಟ್‌ನಲ್ಲಿ ಕಿಚ್ಚ ಸುದೀಪ್‌ ಸರ್, ಇಷ್ಟು ದೀರ್ಘಕಾಲದ ನಂತರ ನಿಮ್ಮನ್ನು ಮತ್ತೆ ಭೇಟಿಯಾದದ್ದು ತುಂಬಾ ಸಂತೋಷವಾಯಿತು. ನಿಮ್ಮ ಆತ್ಮೀಯ ಸ್ವಾಗತ ಮತ್ತು ಅದ್ಭುತ ಆತಿಥ್ಯಕ್ಕೆ ಧನ್ಯವಾದಗಳು. ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮೇಲೆ ತೋರುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ!

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Jul 10, 2026 6:33 PM

ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ (Risha Shetty) ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. 'ಜೈಹನುಮಾನ್' ಸಿನಿಮಾ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಮುಂದೆ ಶಿವಾಜಿ ಬಯೋಪಿಕ್ ಹಾಗೂ 'ಕಾಂತಾರ- 2' ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಇದೀಗ ಕಿಚ್ಚ ಸುದೀಪ್‌ (Kichcha Sudeep) ಅವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ರಿಷಬ್‌ ಹಾಗೂ ಅವರ ಪತ್ನಿ ಪ್ರಗತಿ ಸುದೀಪ್‌ ಅವರನ್ನು ಭೇಟಿ ಮಾಡಿದ್ದಾರೆ.

ರಿಷಬ್‌ ಟ್ವೀಟ್‌ನಲ್ಲಿ ಕಿಚ್ಚ ಸುದೀಪ್‌ ಸರ್, ಇಷ್ಟು ದೀರ್ಘಕಾಲದ ನಂತರ ನಿಮ್ಮನ್ನು ಮತ್ತೆ ಭೇಟಿಯಾದದ್ದು ತುಂಬಾ ಸಂತೋಷವಾಯಿತು. ನಿಮ್ಮ ಆತ್ಮೀಯ ಸ್ವಾಗತ ಮತ್ತು ಅದ್ಭುತ ಆತಿಥ್ಯಕ್ಕೆ ಧನ್ಯವಾದಗಳು. ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮೇಲೆ ತೋರುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Amruthadhaare Serial: ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

ಈ ಪೋಸ್ಟ್‌ ನೋಡಿ ಅನೇಕ ಅಭಿಮಾನಿಗಳು ಆದಷ್ಟು ಬೇಗ ಇಬ್ಬರೂ ಜತೆಗೂಡಿ ಸಿನಿಮಾ ಮಾಡಿ ಎಂದು ಕಮೆಂಟ್‌ ಮಾಡಿದ್ದಾರೆ. ಅಥವಾ ಕಾತಾಂರ ಮುಂದಿನ ಸಿನಿಮಾಗೆ ಕಿಚ್ಚ ಸುದೀಪ್‌ ನಟಿಸಲಿದ್ದಾರಾ ಅಂತ ಪ್ರಶ್ನೆ ಕೂಡ ಇಡುತ್ತಿದ್ದಾರೆ.



ಸಿನಿಮಾ ವಿಚಾರಕ್ಕೆ ಬಂದರೆ ದ್ಯ ಜೈ ಹನುಮಾನ್ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಶಿವಾಜಿ ಚಿತ್ರೀಕರಣ ಶುರುವಾಗಲಿದೆ. ಆ ಸಿನಿಮಾದಲ್ಲಿ ನಟಿಸುವ ಕುರಿತು ಸ್ವತಃ ರಿಷಬ್ ಮಾತಾಡಿದ್ದಾರೆ. ಸದ್ಯ ಕೈಯಲ್ಲಿ ʻಜೈ ಹನುಮಾನ್‌ʼ ಮತ್ತು ʻಶಿವಾಜಿʼ ಚಿತ್ರಗಳಿವೆ. ನಂತರ ಸಿನಿಮಾವೊಂದನ್ನ ನಿರ್ದೇಶನ ಮಾಡಲಿದ್ದೇನೆ. ಅದು ಮುಗಿದಾದ ನಂತರ ಕಾಂತಾರ ಚಾಪ್ಟರ್‌-2 ಚಿತ್ರದಲ್ಲಿ ತೊಡಗಿಕೊಳ್ಳುವ ಕುರಿತು ರಿಷಬ್ ಮಾತಾಡಿದ್ದಾರೆ. ಅಲ್ಲಿಗೆ ಶಿವಾಜಿ ಸಿನಿಮಾ ಕೈ ಬಿಟ್ಟಿಲ್ಲ ಅನ್ನೋದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.

ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: OTT Releases: ಈ ವಾರ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌! ಯಾವುದೆಲ್ಲ?

'ಕಾಂತಾರ: ಚಾಪ್ಟರ್ 1' ಬಳಿಕ ಈಗ ಮುಂದಿನ ಭಾಗದ ಚಿತ್ರದ ಚಿತ್ರಕಥೆ ಬರೆಯುವ ಕೆಲಸ ಆರಂಭವಾಗಿದ್ದು, ತಮ್ಮ ಲೇಖಕರ ತಂಡದೊಂದಿಗೆ ಸ್ಕ್ರಿಪ್ಟ್ ಅಭಿವೃದ್ಧಿಯಲ್ಲಿ ತೊಡಗಿರುವುದಾಗಿ ಅವರು ತಿಳಿಸಿದ್ದಾರೆ.