Ram Charan: ʻಪೆದ್ದಿʼ ಸಿನಿಮಾ ಡೈರೆಕ್ಟರ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್; ಕಾರಣವೇನು?
Ram Charan's Peddi Movie: ʻಪೆದ್ದಿʼ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರ ಹುಟ್ಟುಹಬ್ಬದ ಪ್ರಯುಕ್ತ ನಟ ಶಿವರಾಜ್‌ಕುಮಾರ್ ಅವರು ದುಬಾರಿ ಬೆಲೆಯ 'ಜಿಸಿ' ಬ್ರ್ಯಾಂಡ್‌ನ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಮ್ ಚರಣ್ ಅಭಿನಯದ ಈ ಚಿತ್ರದಲ್ಲಿ ಶಿವಣ್ಣ 'ಗೌರ್ನಾಯ್ಡು' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಬುಚ್ಚಿಬಾಬು ಸಾನಾ ನಿರ್ದೇಶಿಸುತ್ತಿದ್ದು, ಹಳ್ಳಿ ಸೊಗಡಿನ ಕ್ರೀಡಾ ಹಿನ್ನೆಲೆಯಲ್ಲಿ 'ರಾ ಅಂಡ್ ರಸ್ಟಿಕ್' ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಜಗಪತಿ ಬಾಬು ಮತ್ತು ಹಿಂದಿ ನಟ ದಿವ್ಯೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ನಿರ್ದೇಶಕರಿಗೆ ಶಿವಣ್ಣ ಒಂದು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಗಿಫ್ಟ್ ನೀಡಲು ಕಾರಣವೇನು?
ಈಚೆಗೆ ನಿರ್ದೇಶಕ ಬುಚ್ಚಿ ಬಾಬು ಅವರ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ಬುಚ್ಚಿ ಬಾಬುಗೆ ಶಿವರಾಜ್‌ಕುಮಾರ್ ಅವರು ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಬುಚ್ಚಿ ಬಾಬು ಅವರಿಗೆ ದುಬಾರಿ ಬೆಲೆಯ 'ಜಿಸಿ' (GC) ಬ್ರ್ಯಾಂಡ್‌ನ ವಾಚ್ ಅನ್ನು ಉಡುಗೊರೆಯಾಗಿ ಶಿವಣ್ಣ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಬುಚ್ಚಿ ಬಾಬು ಅವರು ಫೋಟೋದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. ಅಂದಹಾಗೆ, 'ಪೆದ್ದಿ' ಚಿತ್ರದಲ್ಲಿ ಶಿವಣ್ಣ 'ಗೌರ್ನಾಯ್ಡು' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ವಾಚ್‌ನ ಬೆಲೆ ಎಷ್ಟು?
ಶಿವಣ್ಣ ಕೊಟ್ಟ ಈ ವಾಚ್‌ನ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಗಿಫ್ಟ್ ಬಗ್ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ಸಿನಿಮಾ ಬಿಡುಗಡೆಗೂ ಮುನ್ನವೇ ಆ ಚಿತ್ರದ ಕಲಾವಿದರಿಂದ ಉತ್ತಮ ಗಿಫ್ಟ್ ಪಡೆದಿರುವ ಬುಚ್ಚಿ ಬಾಬು, ಸಿನಿಮಾ ಬ್ಲಾಕ್‌ಬಸ್ಟರ್ ಆದರೆ ಮತ್ತಷ್ಟು ದೊಡ್ಡ ಸರ್ಪ್ರೈಸ್ ಗಿಫ್ಟ್‌ಗಳನ್ನು ಪಡೆಯುವುದು ಗ್ಯಾರಂಟಿ" ಎಂದಿದ್ದಾರೆ.
Peddi Movie: ರಾಮ್ ಚರಣ್ 'ಪೆದ್ದಿ'ಯಲ್ಲಿ ಅಚ್ಚಿಯಮ್ಮನಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್
ಸದ್ಯ 'ಪೆದ್ದಿ' ಚಿತ್ರೀಕರಣ ಪ್ರಸ್ತುತ ಅಂತಿಮ ಹಂತದಲ್ಲಿದೆ. ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತಾದರೂ, ಚಿತ್ರೀಕರಣ ತಡವಾದ ಕಾರಣ ಏಪ್ರಿಲ್ 30 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆ ದಿನಾಂಕ ಬದಲಾದರೂ, ಚಿತ್ರದ ಮೇಲಿನ ನಿರೀಕ್ಷೆಗಳು ಮಾತ್ರ ಕಡಿಮೆಯಾಗಿಲ್ಲ. ಮೆಗಾ ಫ್ಯಾನ್ಸ್ ಈ ಸಿನಿಮಾಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಪೆದ್ದಿ ಮೇಲೆ ರಾಮ್ ಚರಣ್ ನಿರೀಕ್ಷೆ
ಈ ಹಿಂದಿನ 'ಗೇಮ್ ಚೇಂಜರ್' ಸಿನಿಮಾವು ಹೀನಾಯವಾಗಿ ಸೋತಿರುವುದರಿಂದ ರಾಮ್ ಚರಣ್‌ಗೆ ಪೆದ್ದಿ ಮೇಲೆ ದೊಡ್ಡ ನಿರೀಕ್ಷೆ ಇದೆ. 'ಪೆದ್ದಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಎಂತಹ ಸಂಚಲನ ಸೃಷ್ಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ 'ಚಿಕಿರಿ' ಹಾಡು ಚಿತ್ರದ ಮೇಲಿನ ಹೈಪ್ ಅನ್ನು ಇನ್ನಷ್ಟು ಜಾಸ್ತಿ ಮಾಡಿದೆ.