ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅರುಣಾಚಲ ಪ್ರದೇಶದ ಗಡಿಯಲ್ಲಿ ಮೊದಲ ಬಾರಿಗೆ ಚೀನಾ ನಡೆ ಮೇಲೆ ಕಣ್ಣಿಟ್ಟ ಎಐ

ದೇಶದ ಗಡಿ ನಿಯಂತ್ರಣ ರೇಖೆ ಬಳಿ ಮೊದಲ ಬಾರಿಗೆ ಭದ್ರತಾ ಕಾರ್ಯಕ್ಕಾಗಿ ಕೃತಕ ಬುದ್ದಿ ಮತ್ತೆಯನ್ನು ಬಳಸಿತು. ಅರುಣಾಚಲ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ನಡೆ ಮೇಲೆ ನಿಗಾ ಇರಿಸಲು ಭಾರತೀಯ ಸೇನೆ ಎಐ ಚಾಲಿತ ಭವಿಷ್ಯ ಸಾಧನಗಳನ್ನು ಬಳಸಿದೆ ಎಂದು ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ತಿಳಿಸಿದ್ದಾರೆ.

ದೇಶದ ಭದ್ರತೆಗೆ ಮೊದಲ ಬಾರಿಗೆ ಎಐ ಬಳಕೆ

ಸಂಗ್ರಹ ಚಿತ್ರ -

ಅರುಣಾಚಲ ಪ್ರದೇಶ: ಇದೇ ಮೊದಲ ಬಾರಿಗೆ ದೇಶದ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಕಾರ್ಯಕ್ಕಾಗಿ ಭಾರತ ಕೃತಕ ಬುದ್ದಿ ಮತ್ತೆ (artificial intelligence) ಸಾಧನವನ್ನು ಬಳಸಿದೆ. ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ (arunachal pradesh LAC) ಉದ್ದಕ್ಕೂ ಚೀನಾದ (China) ನಡೆ ಮೇಲೆ ನಿಗಾ ಇರಿಸಲು ಭಾರತೀಯ ಸೇನೆ ಎಐ ಚಾಲಿತ ಭವಿಷ್ಯ ಸಾಧನಗಳನ್ನು ಬಳಸಿದೆ ಎಂದು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ (Lt Gen Dinesh Singh Rana) ತಿಳಿಸಿದ್ದಾರೆ.

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಮಾತನಾಡಿದ ಅವರು, ಎಐಯು ಆಧುನಿಕ ಯುದ್ಧ, ಕಾರ್ಯತಂತ್ರದ ಸಿದ್ಧಾಂತಗಳು ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಲಿದೆ. ಅರುಣಾಚಲ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಬಳಿ ಭದ್ರತಾ ಜವಾಬ್ದಾರರಾಗಿರುವ ಕಾರ್ಪ್ಸ್‌ಗೆ ಕಮಾಂಡಿಂಗ್ ಮಾಡುವುದಕ್ಕೆ ಇದು ಎಷ್ಟು ಉಪಯುಕ್ತ ಎಂಬುದನ್ನು ಅವರು ವಿವರಿಸಿದರು.

Rajya Sabha Election: 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ; ಮಾರ್ಚ್ 16ರಂದು ಮತದಾನ

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ, ಕಡಿಮೆ-ವೆಚ್ಚದ ಎಐ ವ್ಯವಸ್ಥೆಯು ವಿವಾದಿತ ವಲಯದಲ್ಲಿ ಚೀನಾದ ಮಿಲಿಟರಿ ಸ್ಥಾಪನೆಗೂ ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡಲು ಸಹಾಯ ಮಾಡುತ್ತದೆ. ಗಡಿ ಭಾಗದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನಾವು ನೋಡಬಹುದು. ಅವರ ನಡೆಯ ಸಮಯವನ್ನು ನಾವು ಊಹಿಸಬಹುದು ಎಂದರು.

ಎಐ ಭವಿಷ್ಯದ ಪರಿಕಲ್ಪನೆಯಲ್ಲ. ಜಾಗತಿಕ ಶಕ್ತಿ ಚಲನಶಾಸ್ತ್ರದ ಕೇಂದ್ರವಾಗಿದೆ ಎಂದ ಅವರು, ವಿಶ್ವಾದ್ಯಂತ ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದಿಂದ ಇದಕ್ಕಾಗಿ ಹೂಡಿಕೆಗಳು ಹೆಚ್ಚಾಗುತ್ತಿದೆ. ಇದು ಎಐ ಸ್ಪರ್ಧೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಎಐ ಕೇವಲ ಸಾಫ್ಟ್‌ವೇರ್ ಮಾತ್ರವಲ್ಲ. ಅದು ಕಾರ್ಯಪಡೆಯ ಅಭಿವೃದ್ಧಿ, ಮೂಲಸೌಕರ್ಯ, ಮಿಲಿಟರಿ ಸಿದ್ಧಾಂತ ಮತ್ತು ಕಮಾಂಡ್ ರಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಸೈಬರ್ ಡೊಮೇನ್‌ನಲ್ಲಿ ಎಐ ಚಾಲಿತ ವ್ಯವಸ್ಥೆಗಳು ಅತ್ಯಾಧುನಿಕ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದು ಮತ್ತು ದೌರ್ಬಲ್ಯಗಳನ್ನು ಗುರುತಿಸುವ ಮೂಲಕ ಅಂತರವನ್ನು ಮುಚ್ಚಿ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸಬಹುದು ಎಂದು ಅವರು ತಿಳಿಸಿದರು.

ಪಾಕಿಸ್ತಾನಕ್ಕೆ ಏಪ್ರಿಲ್ ಬಳಿಕ ಸಿಗಲಿದೆ ಮತ್ತೊಂದು ಶಾಕ್; ಸಿಂಧೂ ಬಳಿಕ ರಾವಿ ನದಿ ನೀರು ಹರಿವಿಗೆ ತಡೆ

ಎಐಯು ಅವಕಾಶಗಳು ಮತ್ತು ಸವಾಲುಗಳು ಎರಡನ್ನೂ ತರುತ್ತವೆ ಎಂದು ಎಚ್ಚರಿಸಿದ ಅವರು, ಇದು ಪರಮಾನಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಹೀಗಾಗಿ ಉನ್ನತ ಮಟ್ಟದ ಸಾಮರ್ಥ್ಯಗಳನ್ನು ಮಾತ್ರ ಅವಲಂಬಿಸುವ ಬದಲು ಸ್ವಾಯತ್ತ ಡ್ರೋನ್‌ಗಳು ಸೇರಿದಂತೆ ಸ್ಕೇಲೆಬಲ್, ಕಡಿಮೆ ವೆಚ್ಚದ ಎಐ ಯುದ್ಧಭೂಮಿ ವ್ಯವಸ್ಥೆಗಳ ಮೇಲೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಸೂಪರ್ ಪವರ್ ಆಗುವುದು ಮುಖ್ಯವಲ್ಲ. ಜವಾಬ್ದಾರಿಯುತ ಪರಮಾಣು ಶಕ್ತಿಯಂತೆ ಜವಾಬ್ದಾರಿಯುತ ಎಐ ಶಕ್ತಿಯೂ ಆಗಬೇಕು. ಎಐ ಸಾಮರ್ಥ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ತಿಳಿಸಿದರು.