ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಸ್ತೆ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿ: ವ್ಯಕ್ತಿಯ ಪ್ರಾಣ ಉಳಿಸಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತುರ್ತು ಚಿಕಿತ್ಸಾ ತಂಡವು ತಕ್ಷಣವೇ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಆಸ್ಪತ್ರೆಯ 'ಟ್ರಾಮಾ ರೆಸ್ಪಾನ್ಸ್ ಪ್ರೋಟೋಕಾಲ್' ಅನ್ನು ಬಳಸಿಕೊಂಡಿತು. ಹೆಚ್ಚಿನ ತಪಾಸಣೆಯ ನಂತರ, ಅಪಘಾತದ ತೀವ್ರ ಹೊಡೆತ ದಿಂದಾಗಿ ರೋಗಿಯ ಸ್ಪ್ಲೀನ್ ತೀವ್ರವಾಗಿ ಹಾನಿಗೊಳಗಾಗಿರುವುದು ಮತ್ತು ಹೊಟ್ಟೆಯೊಳಗೆ ಅನಿಯಂತ್ರಿತ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು.

ಹೊಟ್ಟೆಯ ಶಸ್ತ್ರಚಿಕಿತ್ಸೆ ಯಶಸ್ವಿ: ಉಳಿಯಿತು ವ್ಯಕ್ತಿಯ ಪ್ರಾಣ

-

Ashok Nayak
Ashok Nayak Feb 18, 2026 3:18 PM

ಬೆಂಗಳೂರು: ಭೀಕರ ರಸ್ತೆ ಅಪಘಾತಕ್ಕೀಡಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ 48 ವರ್ಷದ ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ತುರ್ತು ಚಿಕಿತ್ಸೆ, ಜಠರಗರುಳಿನ ಶಸ್ತ್ರಚಿಕಿತ್ಸೆ (ಗ್ಯಾಸ್ಟ್ರೋ ಇಂಟೆಸ್ಟೈನಲ್ ಸರ್ಜರಿ), ಅರಿವಳಿಕೆ, ತೀವ್ರ ನಿಗಾ ಘಟಕ, ಮೂಳೆಚಿಕಿತ್ಸೆ ಮತ್ತು ನರ್ಸಿಂಗ್ ಸೇರಿದಂತೆ ವಿವಿಧ ವಿಭಾಗಗಳ ತಂಡಗಳ ನಡುವಿನ ಸಮಯೋಚಿತ ಸಮನ್ವಯದಿಂದಾಗಿ ಆಸ್ಪತ್ರೆಯು ರೋಗಿಯ ಜೀವ ಉಳಿಸಿ ಮಹತ್ವದ ಸಾಧನೆ ಮಾಡಿದೆ.

ರೋಗಿಯನ್ನು ನಾಗರಭಾವಿಯ ಫೋರ್ಟಿಸ್ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತಂದಾಗ ಅವರು ತೀವ್ರ ಆಘಾತದ ಸ್ಥಿತಿಯಲ್ಲಿದ್ದರು. ಅವರ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು ಮತ್ತು ಹೃದಯ ಬಡಿತದ ವೇಗ ಗಣನೀಯವಾಗಿ ಹೆಚ್ಚಾಗಿತ್ತು. ಇದು ದೇಹದ ಒಳಗಿನ ತೀವ್ರ ರಕ್ತಸ್ರಾವ ಮತ್ತು ಪ್ರಮುಖ ಅಂಗಗಳಿಗೆ ರಕ್ತದ ಪೂರೈಕೆಯ ಕೊರತೆಯನ್ನು ಸೂಚಿಸುತ್ತಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತುರ್ತು ಚಿಕಿತ್ಸಾ ತಂಡವು ತಕ್ಷಣವೇ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಆಸ್ಪತ್ರೆಯ 'ಟ್ರಾಮಾ ರೆಸ್ಪಾನ್ಸ್ ಪ್ರೋಟೋಕಾಲ್' ಅನ್ನು ಬಳಸಿಕೊಂಡಿತು. ಹೆಚ್ಚಿನ ತಪಾಸಣೆಯ ನಂತರ, ಅಪಘಾತದ ತೀವ್ರ ಹೊಡೆತ ದಿಂದಾಗಿ ರೋಗಿಯ ಸ್ಪ್ಲೀನ್ ತೀವ್ರವಾಗಿ ಹಾನಿಗೊಳಗಾಗಿರುವುದು ಮತ್ತು ಹೊಟ್ಟೆ ಯೊಳಗೆ ಅನಿಯಂತ್ರಿತ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ಅವರನ್ನು ತಕ್ಷಣವೇ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯ ಲಾಯಿತು. ಅಲ್ಲಿ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಜಠರಗರುಳಿನ ಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರರಾದ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಅವರ ನೇತೃತ್ವದ ತಂಡವು ತುರ್ತು ಹೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು.

ಇದನ್ನೂ ಓದಿ: Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಪ್ರಕರಣದ ಕುರಿತು ವಿವರಗಳನ್ನು ನೀಡಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಜಠರಗರುಳಿನ ಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರರಾದ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಅವರು, “ಸ್ಪ್ಲೀನ್ ಎನ್ನುವುದು ರಕ್ತನಾಳಗಳಿಂದ ಕೂಡಿದ ಅತ್ಯಂತ ಸೂಕ್ಷ್ಮ ವಾದ ಅಂಗವಾಗಿದೆ ಮತ್ತು ಅದಕ್ಕೆ ಉಂಟಾಗುವ ಗಾಯಗಳು ವೇಗವಾಗಿ ಹಾಗೂ ಪ್ರಾಣಾ ಪಾಯ ತಂದೊಡ್ಡುವ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದಾಗಿದೆ. ಈ ಪ್ರಕರಣ ದಲ್ಲಿ, ಅಪಘಾತದ ತೀವ್ರತೆಗೆ ಸ್ಪ್ಲೀನ್ ಸಂಪೂರ್ಣವಾಗಿ ಜರ್ಜರಿತವಾಗಿತ್ತು, ಇದರಿಂದಾಗಿ ಹೊಟ್ಟೆಯೊಳಗೆ ಭಾರಿ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು.

ನಾವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಟ್ಟೆಯೊಳಗೆ ಸುಮಾರು ಮೂರು ಲೀಟರ್‌ ಗಳಷ್ಟು ರಕ್ತ ಸೋರಿಕೆಯಾಗಿರುವುದನ್ನು ಕಂಡೆವು, ಇದು ಅವರ ಸ್ಥಿತಿ ಎಷ್ಟು ಗಂಭೀರ ವಾಗಿತ್ತು ಎಂಬುದನ್ನು ಸೂಚಿಸುತ್ತದೆ. ರಕ್ತಸ್ರಾವವನ್ನು ನಿಯಂತ್ರಿಸಲು, ರೋಗಿಯನ್ನು ಸ್ಥಿರಗೊಳಿಸಲು ಮತ್ತು ಅಂಗಾಂಗ ವೈಫಲ್ಯವನ್ನು ತಡೆಯಲು ಹಾನಿಗೊಳಗಾದ ಸ್ಪ್ಲೀನ್ ಅನ್ನು ತುರ್ತಾಗಿ ತೆಗೆದುಹಾಕುವುದು ಒಂದೇ ದಾರಿಯಾಗಿತ್ತು. ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ, ರೋಗಿಯು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು” ಎಂದು ಹೇಳಿದರು.

ಈ ಶಸ್ತ್ರಚಿಕಿತ್ಸೆಯು ಸುಮಾರು 2 ಗಂಟೆಗಳ ಕಾಲ ನಡೆಯಿತು, ನಂತರ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಮೇಲ್ವಿಚಾರಣೆ ಮಾಡಲಾಯಿತು. ಅವರ ಒಟ್ಟಾರೆ ಆರೋಗ್ಯ ಸುಧಾರಿಸಿದ ನಂತರ, ಎಡ ಮುಂಗೈ ಮೂಳೆ ಮುರಿತಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನಂತರ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ, ಸ್ಥಿರವಾಗಿ ಚೇತರಿಸಿಕೊಂಡರು. 10 ದಿನಗಳ ನಂತರ ಆರೋಗ್ಯವಂತ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ಕುರಿತು ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಆಗಿರುವ ರತೀಫ್ ನಾಯಕ್ ಅವರು ಮಾತನಾಡಿ, "ಅತ್ಯಂತ ಗಂಭೀರವಾದ ಇಂತಹ ಅಪಘಾತದ ಪ್ರಕರಣಗಳಲ್ಲಿ ಸಮಯೋಚಿತ ನಿರ್ಧಾರ ಮತ್ತು ವಿವಿಧ ವೈದ್ಯಕೀಯ ತಂಡಗಳ ಸಾಮೂಹಿಕ ಪ್ರಯತ್ನವು ಸಾವು-ಬದುಕಿನ ನಡುವೆ ಹೇಗೆ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ತುರ್ತು ಸ್ಪಂದನೆಯಿಂದ ಹಿಡಿದು ಶಸ್ತ್ರಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕದವರೆಗೆ ಪ್ರತಿಯೊಂದು ತಂಡವು ಸಮನ್ವಯದಿಂದ ಕೆಲಸ ಮಾಡಿದ್ದ ರಿಂದ ರೋಗಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಾಧ್ಯವಾಯಿತು" ಎಂದು ತಿಳಿಸಿದರು.