ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋಮಲ್‌ ನಟನೆಯ ‘ರೋಲೆಕ್ಸ್’ ಚಿತ್ರಕ್ಕೆ ವಿನೋದ್ ಪ್ರಭಾಕರ್ ಎಂಟ್ರಿ: ಸೋನಲ್‌ಗೆ ‘ಮರಿ ಟೈಗರ್’ ಥ್ಯಾಂಕ್ಸ್ ಹೇಳಿದ್ದೇಕೆ?

ರೋಲೆಕ್ಸ್‌ ಸಿನಿಮಾದ ಟೀಸರ್ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದು, ಕೋಮಲ್ ಕುಮಾರ್ ಹಾಗೂ ವಿನೋದ್ ಪ್ರಭಾಕರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸೋನಲ್ ಮೊಂತೆರೊ ಅವರಿಂದಾಗಿ ತಮಗೆ ಈ ಮಹತ್ವದ ಪಾತ್ರ ಸಿಕ್ಕಿದೆ ಎಂದು ವಿನೋದ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Komal: ‘ರೋಲೆಕ್ಸ್’ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ನಟಿಸಲು ಕಾರಣ ಯಾರು?

-

Avinash GR
Avinash GR Aug 23, 2026 12:39 PM

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ ಸಿನಿಮಾದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೋಮಲ್‌ಗೆ ಜೋಡಿಯಾಗಿ ಸೋನಲ್ ಮೊಂತೆರೊ ನಟಿಸಿದ್ದು, ‘ಮರಿ ಟೈಗರ್’ ಖ್ಯಾತಿಯ ವಿನೋದ್ ಪ್ರಭಾಕರ್ ಪ್ರಮುಖ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಅವರು ಟೀಸರ್ ರಿಲೀಸ್ ಮಾಡಿದರು.

ಸೋನಲ್‌ಗೆ ವಿನೋದ್ ಪ್ರಭಾಕರ್ ಧನ್ಯವಾದ ಹೇಳಿದ್ದೇಕೆ?

ವೇದಿಕೆಯಲ್ಲಿ ಮಾತನಾಡಿದ ನಟ ವಿನೋದ್ ಪ್ರಭಾಕರ್, ಚಿತ್ರದಲ್ಲಿ ತಮಗಿರುವ ಪಾತ್ರದ ಮಹತ್ವವನ್ನು ಹಂಚಿಕೊಂಡರು. "ಮಾದೇವ ಚಿತ್ರದ ನಂತರ ಸೋನಲ್ ಮೊಂತೆರೊ ಅವರೊಂದಿಗೆ ನಟಿಸಿದ ಸಿನಿಮಾವಿದು. ಈ ಚಿತ್ರದಲ್ಲಿ ನನಗೊಂದು ಅತ್ಯುತ್ತಮ ಪಾತ್ರ ಸಿಗಲು ಸೋನಲ್ ಅವರೇ ಕಾರಣ, ಅವರೇ ನನಗೆ ಅವಕಾಶ ಕೊಡಿಸಿದ್ದು. ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವಂತಹ ಅದ್ಭುತ ಕಥಾಹಂದರ ಚಿತ್ರದಲ್ಲಿದೆ" ಎಂದು ವಿನೋದ್ ಪ್ರಭಾಕರ್ ನಟಿ ಸೋನಲ್‌ಗೆ ಕೃತಜ್ಞತೆ ಸಲ್ಲಿಸಿದರು.

‘ಮಿಸ್ಟರ್ ಗರಗಸ’ ನಂತರ ಅಂತಹದ್ದೇ ಪಾತ್ರ ಎಂದ ಕೋಮಲ್

ನಟ ಕೋಮಲ್ ಕುಮಾರ್ ಮಾತನಾಡಿ, "ವಿನೋದ್ ಪ್ರಭಾಕರ್ ಅವರೊಂದಿಗೆ ತೆರೆ ಹಂಚಿಕೊಂಡಿರುವುದು ಖುಷಿ ತಂದಿದೆ. ಕಲಾವಿದರು ಒಟ್ಟಾಗಿ ನಟಿಸಿದರೆ ಚಿತ್ರರಂಗಕ್ಕೆ ಮತ್ತಷ್ಟು ಬಲ ಸಿಗುತ್ತದೆ. ‘ಮಿಸ್ಟರ್ ಗರಗಸ’ ಸಿನಿಮಾದ ನಂತರ ಅಂತಹ ವಿಭಿನ್ನ ಕಥೆಯ ಹುಡುಕಾಟದಲ್ಲಿದ್ದ ನನಗೆ ನಿರ್ದೇಶಕ ಶ್ರೀನಿವಾಸ್ ಮೂಲಕ ಸೂಕ್ತ ಪಾತ್ರ ಸಿಕ್ಕಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

"ನಿರ್ಮಾಪಕರು ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದಾರೆ. ಕೋಮಲ್ ಸರ್ ಜೊತೆ ಮೊದಲ ಬಾರಿಗೆ ಕೆಲಸ ಮಾಡಿದ್ದು ಕಲಿಕೆಗೆ ಉತ್ತಮ ಅನುಭವ ನೀಡಿತು. ವಿನೋದ್ ಪ್ರಭಾಕರ್ ನನ್ನ ಆಪ್ತ ಸ್ನೇಹಿತರಾಗಿದ್ದು, ಅವರ ಪಾತ್ರವೂ ಚಿತ್ರಕ್ಕೆ ದೊಡ್ಡ ಶಕ್ತಿ ತಂದಿದೆ" ಎಂದು ನಟಿ ಸೋನಲ್ ಮೊಂತೆರೊ ಹೇಳಿದರು.

"ರೋಲೆಕ್ಸ್ ಕಾಮಿಡಿ ಹಾಗೂ ಪ್ರೀತಿಯ ಕಥಾಹಂದರವುಳ್ಳ ಮುಗ್ಧ ಕೌಟುಂಬಿಕ ಮನರಂಜನಾ ಚಿತ್ರ. ಕೋಮಲ್ ಅವರು ನಗೆಹಬ್ಬದ ರಸದೌತಣ ನೀಡಲು ಸಜ್ಜಾಗಿದ್ದು, ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ" ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದರು. ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ, "ಸಿನಿಮಾಗೆ ಭಾಷೆ ಮತ್ತು ಗಡಿಗಳ ಹಂಗಿಲ್ಲ. ತೆಲುಗಿನಿಂದ ಬಂದು ಕನ್ನಡದಲ್ಲಿ ಸಿನಿಮಾ ನಿರ್ಮಿಸಿದ್ದೇನೆ. ಸಸ್ಪೆನ್ಸ್ ಹಾಗೂ ಕಾಮಿಡಿ ಅಂಶಗಳಿರುವ ಈ ಚಿತ್ರ ಪ್ರತಿಯೊಬ್ಬ ಕುಟುಂಬ ಪ್ರೇಕ್ಷಕರಿಗೂ ಮೆಚ್ಚುಗೆಯಾಗಲಿದೆ" ಎಂದರು.

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ, ಸುನಂದ ಕಲಬುರಗಿ ಸೇರಿದಂತೆ ಪ್ರತಿಭಾವಂತರ ದಂಡೇ ಇದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುರುಳಿ ಕೃಷ್ಣ, ಛಾಯಾಗ್ರಾಹಕರಾಗಿ ರಾಕೇಶ್ ತಿಲಕ್, ಸಂಕಲನಕಾರರಾಗಿ ಅರವಿಂದ್ ರೆಡ್ಡಿ ಹಾಗೂ ಕ್ರಿಯೇಟಿವ್ ಹೆಡ್ ಆಗಿ ರಾಜೇಶ್ ವರ್ಮ ಕಾರ್ಯನಿರ್ವಹಿಸಿದ್ದಾರೆ.