ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಮಹತ್ವಾಕಾಂಕ್ಷೆಗಳನ್ನು ವಿಶ್ವದ ಮುಂದೆ ತೆರೆದಿಡಲಿದೆ ಎಐ ಶೃಂಗಸಭೆ

ಕೆಲವು ತಿಂಗಳಲ್ಲಿ ನ್ಯೂಜಿಲ್ಯಾಂಡ್, ಜೋರ್ಡಾನ್, ಬ್ರಿಟನ್, ಯುರೋಪಿಯನ್ ಒಕ್ಕೂಟ, ಯುಎಸ್.. ಹೀಗೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳೊಂದಿಗೆ ಒಂದರ ಬಳಿಕ ಒಂದರಂತೆ ವ್ಯಾಪಾರ ಒಪ್ಪಂದವನ್ನು ನಡೆಸಿರುವ ಭಾರತ ಇದೀಗ ದೆಹಲಿಯಲ್ಲಿ ಎಐ ಶೃಂಗಸಭೆ ನಡೆಸಿ ವಿಶ್ವದ ಗಮನ ಸೆಳೆದಿದೆ. ಈ ಶೃಂಗಸಭೆಯ ಮೂಲಕ ತನ್ನ ಜಾಗತಿಕ ಮಹತ್ವಾಕಾಂಕ್ಷೆಗಳ ಪ್ರತಿಪಾದನೆಯನ್ನು ಮಾಡಿದೆ.

ಎಐ ಶೃಂಗಸಭೆ ಮೂಲಕ ಜಗತ್ತಿನ ಗಮನ ಸೆಳೆದ ಭಾರತ

ಸಂಗ್ರಹ ಚಿತ್ರ -

ನವದೆಹಲಿ: ಒಂದರ ಮೇಲೆ ಒಂದರಂತೆ ವಿಶ್ವದ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದ (Trade deal) ಮಾಡಿರುವ ಭಾರತ (India) ಇದೀಗ ಎಐ ಶೃಂಗಸಭೆ (AI Summit) ಮೂಲಕ ಜಗತ್ತಿನ ಗಮನ ಸೆಳೆದಿದೆ. ಕಳೆದ ಕೆಲವು ತಿಂಗಳಲ್ಲಿ ನ್ಯೂಜಿಲ್ಯಾಂಡ್, ಜೋರ್ಡಾನ್, ಬ್ರಿಟನ್, ಯುರೋಪಿಯನ್ ಒಕ್ಕೂಟ, ಯುಎಸ್ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ಒಪ್ಪಂದವನ್ನು ನಡೆಸಿದೆ. ಇದೀಗ ದೆಹಲಿಯಲ್ಲಿ (Delhi) ಎಐ (artificial intelligence) ಶೃಂಗಸಭೆ ನಡೆಸಿದ್ದು, ಈ ಮೂಲಕ ತನ್ನ ಜಾಗತಿಕ ಮಹತ್ವಾಕಾಂಕ್ಷೆಗಳ ಪ್ರತಿಪಾದನೆಯನ್ನು ಮಾಡಿದೆ.

ಅಮೆರಿಕದ ತೆರಿಗೆ ನೀತಿಗೆ ಬಗ್ಗದ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಬಾರಿ ವಿವಿಧ ರೀತಿಯಲ್ಲಿ ಬೆದರಿಕೆ ಹಾಕುವ ಪ್ರಯತ್ನವನ್ನು ಮಾಡಿದರು. ಅಂತಿಮವಾಗಿ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಕಾರ್ಯ ಪೂರ್ಣಗೊಂಡಿತ್ತು. ಇದು ಪಾಕಿಸ್ತಾನದೊಂದಿಗಿನ ಸಂಘರ್ಷದ ಬಳಿಕ ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವು ಎನ್ನುವಂತೆ ಮಾಡಿತು.

ಫೆಬ್ರವರಿ 25ರಂದು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ; ಪಿಎಂ ಬೆಂಜಮಿನ್‌ ನೆತನ್ಯಾಹು ಜತೆ ಮಹತ್ವದ ಮಾತುಕತೆ

ಯುರೋಪಿಯನ್ ಒಕ್ಕೂಟ ಮತ್ತು ಯುಎಸ್ ಜೊತೆ ಪ್ರಮುಖ ವ್ಯಾಪಾರ ಒಪ್ಪಂದ ಕಾರ್ಯವನ್ನು ಪೂರ್ಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಹಲವಾರು ವಿದೇಶಿ ನಾಯಕರು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ನಡುವೆ ದೇಶಾದ್ಯಂತ ಚುನಾವಣಾ ಕಾರ್ಯಗಳು ಕೂಡ ಬಿರುಸುಗೊಂಡಿವೆ.

ದೆಹಲಿಯಲ್ಲಿ ಆಯೋಜಿಸಿರುವ ಉನ್ನತ ಮಟ್ಟದ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳ ಜೊತೆಗೆ ಪುನರುಜ್ಜೀವನವನ್ನು ಪ್ರದರ್ಶಿಸುವ ನಿರೀಕ್ಷೆ ಇದೆ. ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ಮತ್ತು ಬ್ರೆಜಿಲ್ ಸೇರಿದಂತೆ ಅನೇಕ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಟೆಕ್ ಜಗತ್ತಿನ ಕೆಲವು ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆ.

ಈ ಶೃಂಗಸಭೆಯು ಎಐ ಜಗತ್ತಿನಲ್ಲಿ ಭಾರತಕ್ಕೆ ಬಲವಾದ ನೆಲೆಯನ್ನು ಪಡೆಯಲು ಒಂದು ಪ್ರಮುಖ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಇದೀಗ ದೇಶ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಎಐ ಸಮ್ಮೇಳನವು ದೇಶಕ್ಕೆ ಆರ್ಥಿಕ ಶಕ್ತಿಯನ್ನು ತುಂಬಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಹೊಸ್ತಿಲಿನಲ್ಲಿ ತಮ್ಮ ವರ್ಚಸ್ಸನ್ನು ಪುನಃ ಸ್ಥಾಪಿಸಲು ಸಹಾಯ ಮಾಡಲಿದೆ. ಇದು ಅಭಿವೃದ್ಧಿ ಮತ್ತು ಆಧುನೀಕರಣಕ್ಕಾಗಿ ದೇಶದ ಭವಿಷ್ಯದ ದೃಷ್ಟಿಕೋನವನ್ನು ಪ್ರದರ್ಶಿಸಲಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನ ಪ್ರಾಧ್ಯಾಪಕ ಸ್ವರಣ್ ಸಿಂಗ್ ತಿಳಿಸಿದ್ದಾರೆ.



ಎಐ ಶೃಂಗ ಸಭೆಯು ದೇಶದ ವಿಶಾಲ, ತಂತ್ರಜ್ಞಾನ-ಬುದ್ಧಿವಂತ ಪ್ರತಿಭೆಗಳಿಗೆ ಅಪಾರ ಅವಕಾಶಗಳನ್ನು ಒದಗಿಸಲಿದೆ. ಈಗಾಗಲೇ ಭಾರತ ಅಮೆಜಾನ್ ಡಾಟ್ ಕಾಮ್ ಇಂಕ್, ಮೈಕ್ರೋಸಾಫ್ಟ್ ಕಾರ್ಪ್ ನಿಂದ 50 ಶತಕೋಟಿ ಡಾಲರ್ ಗೂ ಹೆಚ್ಚು ಹೊಸ ಹೂಡಿಕೆಗಳನ್ನು ಸೆಳೆದಿದೆ. ಇದು ಎಐ, ಕ್ಲೌಡ್ ಸೇವೆಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರಕ್ಕಾಗಿ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿ ದೇಶ ಬೆಳೆಯುತ್ತಿರುವುದನ್ನು ತೋರಿಸುತ್ತದೆ. ಓಪನ್‌ಎಐ ಮತ್ತು ಗೂಗಲ್‌ನಂತಹ ಕಂಪೆನಿಗಳು ಕೂಡ ಭಾರತದಲ್ಲಿ ಬಳಕೆದಾರರಿಗೆ ಉಚಿತವಾಗಿ ಎಐ ಸೇವೆಯನ್ನು ನೀಡುತ್ತಿವೆ. ವಿಶ್ವದ ಅತ್ಯಂತ ಭರವಸೆಯ ಇಂಟರ್ನೆಟ್ ಮಾರುಕಟ್ಟೆಗಳಲ್ಲಿ ಒಂದಾದ ಚೀನಾ, ಅಮೆರಿಕದ ಬಿಗ್ ಟೆಕ್‌ನಿಂದ ಮುಚ್ಚಲ್ಪಟ್ಟಿರುವುದರಿಂದ ತಂತ್ರಜ್ಞಾನ ಲೋಕದಲ್ಲಿ ಭಾರತ ಈಗ ವಿಶ್ವಕ್ಕೆ ಒಂದು ಆಕರ್ಷಕ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ.

ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಕಾರ್ಮಿಕನ ಮೃತದೇಹ 120 ದಿನಗಳ ಬಳಿಕ ಭಾರತಕ್ಕೆ; ಕುಟುಂಬಸ್ಥರ ಆಕ್ರೋಶ

ಇದು ದೇಶಕ್ಕೆ ದೀರ್ಘಕಾಲೀನ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ತಿಳಿಸಿದ್ದು, ಆದರೆ ಇದು ಅನೇಕ ರೀತಿಯ ಸವಾಲುಗಳನ್ನು ಕೂಡ ತರಲಿದೆ ಎಂದು ಹೇಳಿದ್ದಾರೆ.

ಈ ಶೃಂಗಸಭೆಯ ಮೂಲಕ ಪ್ರಧಾನಿ ಮೋದಿ ಅವರು ಜಾಗತಿಕವಾಗಿ ದಕ್ಷಿಣದ ಮೇಲೆ ದೃಷ್ಟಿ ಇಟ್ಟಿದ್ದಾರೆ. ಇದು ಭಾರತವನ್ನು ಉನ್ನತ ವೇದಿಕೆಯ ಮೇಲೆ ಇರಿಸಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿ ಮೋದಿಯನ್ನು ಗಟ್ಟಿಗೊಳಿಸಲಿದೆ ಎಂದು ಕಾರ್ನೆಗೀ ಇಂಡಿಯಾದ ಹಿರಿಯ ಸಂಶೋಧನಾ ವಿಶ್ಲೇಷಕ ನಿಧಿ ಸಿಂಗ್ ತಿಳಿಸಿದ್ದಾರೆ.