ಕೇರಳದಲ್ಲಿ ಕೋವಿಡ್ ಮಾದರಿಯ ಸ್ವಯಂ-ಲಾಕ್‌ಡೌನ್ ಘೋಷಣೆ; ಕಾರಣವೇನು?
ಕೇರಳದಲ್ಲಿ ಕೋವಿಡ್ ಮಾದರಿಯ ಲಾಕ್‌ಡೌನ್ ಹೇರಲಾಗಿದೆ. ತೀವ್ರ ಬಿಸಿಲಿನ ನಡುವೆ ಸ್ವಯಂ-ಲಾಕ್‌ಡೌನ್ ನಿಯಮ ಪಾಲಿಸುವಂತೆ ಕೇರಳ ಮುಖ್ಯಮಂತ್ರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ. ಜನರು ತೀವ್ರ ಬಿಸಿಲಿನ ಅವಧಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಮನೆಯಿಂದ ಹೊರಗೆ ಬಾರದಂತೆ ಅವರು ಸೂಚಿಸಿದ್ದಾರೆ.
ಸಂಗ್ರಹ ಚಿತ್ರ -
ಕೇರಳ: ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಕೇರಳದಲ್ಲಿ (kerala) ಕೋವಿಡ್ (Covid 19) ಮಾದರಿಯ ಲಾಕ್‌ಡೌನ್ (self-lockdown) ಘೋಷಣೆ ಮಾಡಲಾಗಿದೆ. ಪಾಲಕ್ಕಾಡ್, ಕೊಲ್ಲಂ ಮತ್ತು ತ್ರಿಶೂರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು ಭಾರತ ಹವಾಮಾನ ಇಲಾಖೆಯು ಬಿಸಿ ಶಾಖದ ಅಲೆಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Chief Minister Pinarayi Vijayan) ಅವರು ರಾಜ್ಯಾದ್ಯಂತ ಜನರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಿದ್ದು, ಕೋವಿಡ್ ಮಾದರಿಯ ಲಾಕ್‌ಡೌನ್ ಹೇರಿರುವುದಾಗಿ ತಿಳಿಸಿದ್ದಾರೆ.
ಕೇರಳದಲ್ಲಿ ಬಿಸಿಲಿನ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕೋವಿಡ್-19 ಮಾದರಿಯ ಸ್ವಯಂ ಪ್ರೇರಿತ ಲಾಕ್‌ಡೌನ್ ಗೆ ಕರೆ ನೀಡಿದ್ದಾರೆ. ಜನರು ಮಧ್ಯಾಹ್ನದ ಅವಧಿಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ರಾಘವ್ ಚಡ್ಡಾ ರಾಜೀನಾಮೆ: ಬಿಜೆಪಿ ಸೇರುವುದಾಗಿ ಅಧಿಕೃತ ಘೋಷಣೆ
ಕೇರಳ ರಾಜ್ಯದ ಪಾಲಕ್ಕಾಡ್, ಕೊಲ್ಲಂ ಮತ್ತು ತ್ರಿಶೂರ್ ಸೇರಿದಂತೆ ಹಲವು ಜಿಲ್ಲೆಗಳಿಗೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಶಾಖದ ಅಲೆಯ ಎಚ್ಚರಿಕೆಯನ್ನು ನೀಡಿದೆ. ಹೆಚ್ಚಿನ ಆರ್ದ್ರತೆಯ ಮಟ್ಟಗಳು ರಾಜ್ಯಾದ್ಯಂತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು, ಹಲವು ಪ್ರದೇಶಗಳಲ್ಲಿ ಶಾಖದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ದೀರ್ಘ ಕಾಲದವರೆಗೆ ಹೆಚ್ಚಿನ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಅನಾರೋಗ್ಯ ಉಂಟಾಗಬಹುದು, ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಅನಗತ್ಯ ಪ್ರಯಾಣ ಅಥವಾ ಹೊರಾಂಗಣ ಕೆಲಸವನ್ನು ತಪ್ಪಿಸಬೇಕು ಎಂದು ವಿಜಯನ್ ತಿಳಿಸಿದ್ದಾರೆ.
ಶಾಖದ ಹೊಡೆತ ಉಂಟಾದಾಗ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ ಎಂದು ಸೂಚಿಸಿರುವ ಅವರು, ಈ ಸಮಯದಲ್ಲಿ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಲಾಗಿದೆ. ಹೊರಾಂಗಣ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು, ಮೆರವಣಿಗೆಗಳು ಮತ್ತು ಪಟಾಕಿಗಳನ್ನು ಸುಡುವುದನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಹೊರಾಂಗಣ ಕಾರ್ಮಿಕರಿಗೆ ಕೆಲಸದ ಸಮಯವನ್ನು ಸರಿಹೊಂದಿಸಲು ರಾಜ್ಯ ಸರ್ಕಾರವು ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಹಗಲು ನಡೆಸಲಾಗುವ ಉದ್ಯೋಗ ಖಾತರಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಸಂಚಾರ ಸಿಬ್ಬಂದಿ ಸೇರಿದಂತೆ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು ಮತ್ತು ತುರ್ತು ವ್ಯವಸ್ಥೆಗಳನ್ನು ಖಚಿತ ಪಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಶಾಖ ಸಂಬಂಧಿತ ಕಾಯಿಲೆಗಳ ಪ್ರಕರಣಗಳನ್ನು ನಿರ್ವಹಿಸಲು ಜಾಗರೂಕರಾಗಿ ಇರುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
Cyber alert: ಆ್ಯಂಡ್ರಾಯ್ಡ್ ಬಳಕೆದಾರರೇ ಎಚ್ಚರ! ಯಾಮಾರಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾದೀತು!
ಸ್ಥಳೀಯ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ವ್ಯಾಪಾರಿಗಳು ಮತ್ತು ಸ್ವಯಂಸೇವಕರು ಸಾರ್ವಜನಿಕರಿಗೆ ನೀರು ವಿತರಣಾ ಕೇಂದ್ರಗಳು ಮತ್ತು ನೆರಳಿನ ಪ್ರದೇಶಗಳನ್ನು ಸ್ಥಾಪಿಸಲು ಕರೆ ನೀಡಿರುವ ಸಿಎಂ ವಿಜಯನ್, ಪ್ರಾಣಿ, ಪಕ್ಷಿಗಳಿಗೂ ನೀರು, ಆಹಾರದ ವ್ಯವಸ್ಥೆ ಕಲ್ಪಿಸಿಡುವಂತೆ ಮನವಿ ಮಾಡಿದ್ದಾರೆ.