ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಮತದಾನ: ಯಾರಿಗೆ ಲಾಭ, ಯಾರಿಗೆ ನಷ್ಟ?

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಯಾಕೆಂದರೆ ಈ ಬಾರಿ ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತದಾನವಾಗಿದೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದನ್ನು ಕಂಡುಕೊಳ್ಳುವುದು ಕಠಿಣವಾಗಿದ್ದು, ಇದು ಸಮೀಕ್ಷೆಯನ್ನುಫಲಿತಾಂಶವನ್ನು ಕೂಡ ಅನಿಶ್ಚಿತಗೊಳಿಸಿದೆ.

ಮತದಾನದಲ್ಲಿ ದಾಖಲೆ: ಫಲಿತಾಂಶ ಮೇಲೆ ಏನು ಪರಿಣಾಮ?

ಸಂಗ್ರಹ ಚಿತ್ರ -

ಬೆಂಗಳೂರು: ಪಶ್ಚಿಮ ಬಂಗಾಳದ (west bengal) ಮೊದಲ ಹಂತದ ಮತದಾನ (First phase of voting) ಪೂರ್ಣಗೊಂಡಿದ್ದು, ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದೆ. ಆದರೆ ಸಮೀಕ್ಷೆ ಫಲಿತಾಂಶದಲ್ಲಿ ಅನಿಶ್ಚಿತತೆ ಕಂಡು ಬಂದಿದೆ. ಯಾಕೆಂದರೆ ಚುನಾವಣಾ ಆಯೋಗ (Election Commission) ನಡೆಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯು (voter roll Special Intensive Revision) ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಅಂದರೆ ಶೇಕಡಾ 92.89 ರಷ್ಟು ಮತದಾನವಾಗಿದೆ. ಇದು ಹಿಂದಿನ ಸಾಲಿಗೆ ಅಂದರೆ 2021ಕ್ಕೆ ಹೋಲಿಸಿದರೆ ಶೇಕಡಾ 10.5 ರಷ್ಟು ಹೆಚ್ಚಾಗಿದೆ.

2026ರ ವಿಧಾನ ಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಿತ್ತು. ಈ ಮೂಲಕ ಮೃತ, ನಕಲಿ ಮತ್ತು ಅಕ್ರಮ ಮತದಾರರು, ಗುರುತಿಸಿರುವ ಸ್ಥಳದಲ್ಲಿ ವಾಸಿಸದೇ ಇರುವ ಮತದಾರರ ಹೆಸರನ್ನು ತೆಗೆದು ಹಾಕಲಾಗಿತ್ತು. ಇದನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ನಾಗರಿಕ ಕಾರ್ಯಕರ್ತರು ಪ್ರಶ್ನಿಸಿದರು. ಚುನಾವಣೆ ಪ್ರಚಾರದ ಭಾಗವಾಗಿಯೂ ಮಾಡಿಕೊಂಡಿದ್ದರು. ಆದರೆ ಸುಪ್ರೀಂ ಕೋರ್ಟ್‌ನಿಂದ ಚುನಾವಣಾ ಆಯೋಗಕ್ಕೆ ಬೆಂಬಲ ನೀಡಿದ್ದರಿಂದ ಪರಿಷ್ಕರಣೆ ಕಾರ್ಯ ಮುಂದುವರಿದಿತ್ತು.

ಕೇರಳದಲ್ಲಿ ಕೋವಿಡ್ ಮಾದರಿಯ ಸ್ವಯಂ-ಲಾಕ್‌ಡೌನ್ ಘೋಷಣೆ; ಕಾರಣವೇನು?

ಇದರ ಪರಿಣಾಮ ಮತದಾನ ನಡೆಯುವ ಕೆಲವು ದಿನಗಳ ಮೊದಲು ಅಂದಾಜು 90.8 ಲಕ್ಷ ಮತದಾರರನ್ನು ಅಳಿಸಿ ಹಾಕಲಾಯಿತು. ಇದರಿಂದ ಶೇಕಡಾ 12ರಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದ ಒಟ್ಟು ಮತದಾರರು 6.75 ಕೋಟಿ ಎಂದು ಗುರುತಿಸಲಾಯಿತು. ಆದರೆ ಇದು ಈಗ ಚುನಾವಣಾ ಫಲಿತಾಂಶಗಳ ಮೇಲೆ ಬೀರಿರುವ ಪರಿಣಾಮಗಳ ಕುರಿತು ಚರ್ಚೆಗೆ ಕಾರಣವಾಗಿದೆ.

ಮೊದಲ ಹಂತದ ಮತದಾನ

ಪಶ್ಚಿಮ ಬಂಗಾಳದ ಮೊದಲನೇ ಹಂತದ ಮತದಾರರ ಸಂಖ್ಯೆ 3.61 ಕೋಟಿ. ಒಟ್ಟು ಚಲಾವಣೆಯಾದ ಮತಗಳು 3.35 ಕೋಟಿ. ಇದರಿಂದ ಶೇಕಡಾವಾರು ಮತದಾನದ ಪ್ರಮಾಣ 92.8 ಆಗಿದೆ. ಇದನ್ನು ಚುನಾವಣಾ ಆಯೋಗ ಮತ್ತು ಭಾರತೀಯ ಜನತಾ ಪಕ್ಷ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಸಹ ಶ್ಲಾಘಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಬರೆದಿರುವ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳದ ಜನರು ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಎತ್ತಿ ತೋರಿಸಿದರು. ಹೆಚ್ಚಿನ ಮತದಾನ = ಸರ್ಕಾರದಲ್ಲಿ ಬದಲಾವಣೆ ಎಂದು ಹೇಳಿರುವ ಅವರು ತೃಣಮೂಲದ ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಸೂರ್ಯ ಮುಳುಗಿದೆ. ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದ ಅಕ್ರಮ ವಲಸಿಗರ ಮತಗಳನ್ನು ಅವಲಂಬಿಸಿರುವ ತೃಣಮೂಲ ಪಕ್ಷ ಇದರಿಂದ ಅಧಿಕಾರದಲ್ಲಿ ಉಳಿಯುವುದು ಅಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿ ತಮ್ಮ ಪಕ್ಷಕ್ಕೆ ಮತ ಹಾಕಬಹುದಾದವರನ್ನು ನಿರ್ಮೂಲನೆ ಮಾಡಲು ಎಸ್‌ಐಆರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆದರೂ ಹೆಚ್ಚಿನ ಮತದಾನವು ವಾಸ್ತವವಾಗಿ ಜನರು ತಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ಬಿಜೆಪಿಯನ್ನು ತಿರಸ್ಕರಿಸಲು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಎರಡನೇ ಹಂತದಲ್ಲೂ ಹೆಚ್ಚಿನ ಮತದಾನವಾಗುವ ನಿರೀಕ್ಷೆ ಎರಡೂ ಪಕ್ಷಗಳಿಗೆ ಇದೆ ಎಂಬ ವಿಶ್ವಾಸವನ್ನು ರಾಜಕೀಯ ನಾಯಕರು ವ್ಯಕ್ತಪಡಿಸಿದ್ದಾರೆ.

ಏನು ಬದಲಾವಣೆ ?

ಮೊದಲ ಹಂತದ ಮತದಾನದಲ್ಲಿ ಗುರುವಾರ ಮತ ಚಲಾಯಿಸಿದ ಒಟ್ಟು 152 ಕ್ಷೇತ್ರಗಳ ಮತದಾರರಲ್ಲಿ 2021ರ ಚುನಾವಣೆಗೆ ಹೋಲಿಸಿದರೆ ಸುಮಾರು 37 ಲಕ್ಷ ಜನರ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಹೆಸರು ತೆಗೆದು ಹಾಕಿದ್ದರೂ ಇದು ಮತದಾನದ ಶೇಕಡಾವಾರು ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ ಹೆಚ್ಚಿನ ಮತದಾನವು ಆಡಳಿತ ವಿರೋಧಿತ್ವವನ್ನು ಸೂಚಿಸುವುದಿಲ್ಲ. ಅಳಿಸಲಾದ ಹೆಸರುಗಳಲ್ಲಿ ಸುಮಾರು 27 ಲಕ್ಷ ಜನರು ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮಂಡಳಿಗಳ ಮುಂದೆ ಬಾಕಿ ಉಳಿದಿವೆ. ಅವರ ಪ್ರಕರಣಗಳು ಇತ್ಯರ್ಥವಾಗುವವರೆಗೆ ಮತ ಚಲಾಯಿಸಲು ಸಾಧ್ಯವಿಲ್ಲ.

ಏನು ಪರಿಣಾಮ ?

ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ. 2021 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಸ್ವಲ್ಪ ಅಂದರೆ ಸರಿಸುಮಾರು ಶೇಕಡಾ 1.85 ರಷ್ಟು ಹೆಚ್ಚಾಗಿದೆ. ಹೆಸರು ಅಳಿಸುವಿಕೆಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಗೆಲುವಿನ ಅಂತರದ ಮೇಲೆ ಪರಿಣಾಮ ಬೀರಬಹುದು. ಹಿಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಬಿಜೆಪಿಗಿಂತ ಶೇಕಡಾ 9.87ರಷ್ಟು ಹೆಚ್ಚು ಮತಗಳನ್ನು ಗಳಿಸಿತು.

ಹಿಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದ್ದ ಸ್ಥಾನಗಳಲ್ಲಿ ಶೇಕಡಾ 82.7 ರಷ್ಟು ಮತದಾರರನ್ನು ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಇದರಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದ ಪಶ್ಚಿಮ ಬುರ್ದ್ವಾನ್ ಮತ್ತು ದಕ್ಷಿಣ ದಿನಾಜ್‌ಪುರ ಕೂಡ ಸೇರಿದೆ. ಇನ್ನು ತೃಣಮೂಲ ಕಾಂಗ್ರೆಸ್ ಗೆ ಒಲವು ತೋರುವ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ನಾಲ್ಕು ಪ್ರಮುಖ ಜಿಲ್ಲೆಗಳಾದ ಮುರ್ಷಿದಾಬಾದ್ ನಲ್ಲಿ ಶೇಕಡಾ 66, ಮಾಲ್ಡಾದಲ್ಲಿ ಶೇಕಡಾ 51, ಉತ್ತರ 24 ಪರಗಣಗಳಲ್ಲಿ ಶೇಕಡಾ 26 ಮತ್ತು ದಕ್ಷಿಣ 24 ಪರಗಣಗಳಲ್ಲಿ ಶೇಕಡಾ 36 ಅಂದರೆ ಸರಿಸುಮಾರು 12.2 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. 2021ರ ಚುನಾವಣೆಯಲ್ಲಿ ತೃಣಮೂಲ ಪಕ್ಷವು ಈ ಜಿಲ್ಲೆಗಳಿಂದ ಬಹುಪಾಲು ಸ್ಥಾನಗಳನ್ನು ಗೆದ್ದಿತ್ತು.

ಬಿಜೆಪಿ ಮುನ್ನಡೆ ಸಾಧಿಸಿದ್ದ ಕ್ಷೇತ್ರಗಳಲ್ಲಿ 10,000 ಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ ಕೂಚ್ ಬೆಹಾರ್‌ನ ದಿನ್ಹಾಟಾ, ಪುರುಲಿಯಾ ಜಿಲ್ಲೆಯ ಬಲರಾಂಪುರ ಮತ್ತು ಪುರ್ಬಾ ಮೇದಿನಿಪುರದ ಮೊಯ್ನಾ ಕೂಡ ಸೇರಿದೆ. 2021ರ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿಯಾಗಿದ್ದ ಮತುವಾ ಸಮುದಾಯದ ಶೇ. 70ರಷ್ಟು ಜನರ ಹೆಸರು ಅಳಿಸಿ ಹಾಕುವ ನೋಟಿಸ್ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಸೆಕೆಗೆ ಜನ ಹೈರಾಣು; ಎಸಿ ಗಾಳಿಗಾಗಿಯೇ ಹೋಟೆಲ್ ರೂಮ್ ಬುಕ್ ಮಾಡಿದ ಯುವತಿ!

ಹೀಗಾಗಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯು ಎರಡೂ ಪಕ್ಷಗಳಿಗೂ ಅಪಾರ ನಷ್ಟವನ್ನು ಉಂಟು ಮಾಡಿದೆ. ಇದರಿಂದ ಸಮೀಕ್ಷೆಯ ಫಲಿತಾಂಶವನ್ನು ಅನಿಶ್ಚಿತಗೊಂಡಿದೆ. ಹೆಚ್ಚಿನವರು ಇದು ತೃಣಮೂಲ ಕಾಂಗ್ರೆಸ್ ಗೆ ಲಾಭದಾಯಕ ಎಂದಿದ್ದರೆ ಬಿಜೆಪಿಯ ವಿಮರ್ಶಕರು ಚುನಾವಣೆ ಪ್ರಾರಂಭವಾಗುವ ಮೊದಲೇ ತೃಣಮೂಲ ಕಾಂಗ್ರೆಸ್ ಸೋತಿದೆ. ಕಿರಿದಾದ ಗೆಲುವಿನ ಅಂತರವನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.