ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಂದೂ ಕುಟುಂಬ ಮೂರು ಮಕ್ಕಳನ್ನು ಹೊಂದಲೇಬೇಕು ಎಂದ ಮೋಹನ್ ಭಾಗವತ್

ಹಿಂದೂ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೂರು ಮಕ್ಕಳ ನೀತಿಯನ್ನು ಬೆಂಬಲಿಸಿದ್ದಾರೆ. ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಸಭೆಯಲ್ಲಿ ಮಾತನಾಡಿದ ಅವರು ಹಿಂದೂ ಸಮಾಜವನ್ನು ಒಗ್ಗೂಡಿಸಲು ಮತ್ತು ಸಬಲೀಕರಣಗೊಳಿಸಲು ಕರೆ ನೀಡಿದ್ದಾರೆ.

ಮೂರು ಮಕ್ಕಳ ನೀತಿಗೆ ಮೋಹನ್ ಭಾಗವತ್ ಬೆಂಬಲ

ಮೋಹನ್ ಭಾಗವತ್ (ಸಂಗ್ರಹ ಚಿತ್ರ) -

ಲಕ್ನೋ: ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು. ಹಿಂದೂ ಸಮಾಜವನ್ನು ಒಗ್ಗೂಡಿಸಲು ಮತ್ತು ಸಬಲೀಕರಣಗೊಳಿಸಲು ಯಾವುದೇ ಬೆದರಿಕೆ ಇಲ್ಲ ಆದರೆ ಜಾಗರೂಕತೆ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ( Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದರು. ಅವರು ಮಂಗಳವಾರ ಲಕ್ನೋದ (Lucknow) ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಸಭೆಯಲ್ಲಿ ಮಾತನಾಡಿ, ಕ್ಷೀಣಿಸುತ್ತಿರುವ ಹಿಂದೂ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಹಿಂದೂಗಳನ್ನು ಒಗ್ಗೂಡಿಸಿ ಸಬಲೀಕರಣಗೊಳಿಸುವ ಅವಶ್ಯಕತೆಯಿದೆ ಎಂದ ಅವರು, ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು. ಸರಾಸರಿ ಫಲವತ್ತತೆ ದರ ಮೂರಕ್ಕಿಂತ ಕಡಿಮೆ ಇರುವ ಸಮಾಜಗಳು ಭವಿಷ್ಯದಲ್ಲಿ ಕಣ್ಮರೆಯಾಗಬಹುದು ಎಂದು ಅವರು ವೈಜ್ಞಾನಿಕ ಕಾರಣಗಳನ್ನು ಉಲ್ಲೇಖಿಸಿದರು.

ಅರುಣಾಚಲ ಪ್ರದೇಶದ ಗಡಿಯಲ್ಲಿ ಮೊದಲ ಬಾರಿಗೆ ಚೀನಾ ನಡೆ ಮೇಲೆ ಕಣ್ಣಿಟ್ಟ ಎಐ

ನವವಿವಾಹಿತ ದಂಪತಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದ ಅವರು ಮದುವೆಯ ಉದ್ದೇಶವು ಸೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯುವುದು, ಕೇವಲ ವೈಯಕ್ತಿಕ ಆಸೆಗಳನ್ನು ಈಡೇರಿಸುವುದು ಅಲ್ಲ. ದೇಶದ ಒಳನುಸುಳುವವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಬೇಕು. ಅವರಿಗೆ ದೇಶದಲ್ಲಿ ಉದ್ಯೋಗ ನೀಡಬಾರದು ಎಂದು ತಿಳಿಸಿದರು.

ಅಮೆರಿಕ ಮತ್ತು ಚೀನಾದಲ್ಲಿನ ಕೆಲವು ಅಂಶಗಳು ಭಾರತದ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಎಲ್ಲಾ ನಾಗರಿಕರು ಒಂದೇ ದೇಶ ಮತ್ತು ಒಂದೇ ಮಾತೃಭೂಮಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ಸಾಮರಸ್ಯದ ಕೊರತೆಯು ತಾರತಮ್ಯಕ್ಕೆ ಕಾರಣವಾಗುತ್ತಿದೆ. ಸನಾತನ ಚಿಂತನೆಯು ಸಾಮರಸ್ಯದ ತತ್ವಶಾಸ್ತ್ರ ಎಂದು ಅವರು, ವ್ಯತ್ಯಾಸಗಳನ್ನು ತಿಳುವಳಿಕೆ ಮತ್ತು ಆಚರಣೆಯ ಮೂಲಕ ಪರಿಹರಿಸಬೇಕು ಎಂದು ಹೇಳಿದರು.

ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಮೇಲೆ ಬೀದಿನಾಯಿಗಳ ಏಕಾಏಕಿ ದಾಳಿ; ಭಯಾನಕ ವಿಡಿಯೊ ವೈರಲ್!

ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು. ದೋಷಪೂರಿತ ಕಾನೂನುಗಳನ್ನು ಸಾಂವಿಧಾನಿಕ ವಿಧಾನಗಳ ಮೂಲಕ ಬದಲಾಯಿಸಬಹುದು ಎಂದ ಅವರು, ಜಾತಿ ವಿಭಜನೆಗಳು ಸಂಘರ್ಷಕ್ಕೆ ಕಾರಣವಾಗಬಾರದು. ಭಾರತವು ಮುಂದಿನ ದಿನಗಳಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಅನೇಕ ಜಾಗತಿಕ ಸಮಸ್ಯೆಗಳಿಗೆ ದೇಶದ ನಾಗರಿಕತೆಯ ನೀತಿಯಲ್ಲಿ ಪರಿಹಾರಗಳಿವೆ ಎಂದು ತಿಳಿಸಿದರು.