ಇಂಧನ ಕೊರತೆ: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕೊಚ್ಚಿಗೆ ಮರಳಿದ ಏರ್ ಇಂಡಿಯಾ ವಿಮಾನ
ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಘಟನೆ ಆಗಸ್ಟ್ 31ರಂದು ನಡೆದಿದೆ. ಕೊಚ್ಚಿಯಿಂದ ಅಬುಧಾಬಿಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 ವಿಮಾನದಲ್ಲಿ ತೈಲ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದನ್ನು ಕಂಡ ಪೈಲೆಟ್ ಗಳು ವಿಮಾನವನ್ನು ಮರಳಿ ಕೊಚ್ಚಿ ನಿಲ್ದಾಣಕ್ಕೆ ಮರಳಿ ಕರೆ ತಂದರು.
ಸಂಗ್ರಹ ಚಿತ್ರ -
ಕೊಚ್ಚಿ: ವಿಮಾನದಲ್ಲಿ ತೈಲ ಪ್ರಮಾಣ ವೇಗವಾಗಿ ಕುಸಿಯುತ್ತಿದ್ದುದರಿಂದ ಅಬುಧಾಬಿಗೆ ತೆರಳುತ್ತಿದ್ದ ವಿಮಾನ ಕೊಚ್ಚಿಗೆ ಮರಳಿರುವ ಘಟನೆ ಆಗಸ್ಟ್ 31ರಂದು ನಡೆದಿದೆ. ವಿಮಾನ ಹಾರಾಟ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿತ್ತು. ಕೊಚ್ಚಿಯಿಂದ ಅಬುಧಾಬಿಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 ವಿಮಾನ IX 415 ಟೇಕ್ ಆಫ್ ಆದ ಸ್ವಲ್ಪ ಸಮಯದ ಅನಂತರ ನಿಲ್ದಾಣಕ್ಕೆ ಮರಳಿ ಬಂದಿದೆ. ಎಂಜಿನ್ 1ರಲ್ಲಿ ತೈಲ ಪ್ರಮಾಣದಲ್ಲಿ ವೇಗವಾಗಿ ಕುಸಿಯುತ್ತಿರುವುದರಿಂದ ಪೈಲೆಟ್ ಗಳು ಸುರಕ್ಷಿತ ಕ್ರಮವಾಗಿ ವಿಮಾನವನ್ನು ಕೊಚ್ಚಿನ್ ಗೆ ಮರಳಿ ಕರೆ ತಂದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 ವಿಮಾನವು ಹಾರಾಟ ಆರಂಭಿಸಿದ ಸುಮಾರು 50 ನಿಮಿಷಗಳ ಬಳಿಕ 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಇದರ ತೈಲ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದನ್ನು ಪೈಲಟ್ ಮತ್ತು ಸಹ-ಪೈಲಟ್ ಗಳು ಗಮನಿಸಿದರು. ಈ ಕುರಿತು ಫಾರ್ ಡೆಕ್ ಮೌಲ್ಯಮಾಪನ ನಡೆಸಿ ತೈಲ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದನ್ನು ಕಂಡು ಅಬುಧಾಬಿಗೆ ತೆರಳುವುದನ್ನು ನಿಲ್ಲಿಸಿ ಕೊಚ್ಚಿಗೆ ಹಿಂದಿರುಗಲು ನಿರ್ಧರಿಸಿದರು.
36,000 ಅಡಿ ಎತ್ತರದಲ್ಲಿ ತೈಲ ಒತ್ತಡ ಅಪಾಯ ಉಂಟಾದ ತಕ್ಷಣ ಸಿಬ್ಬಂದಿ ಎಂಜಿನ್ 1 ಅನ್ನು ಸ್ಥಗಿತಗೊಳಿಸಿ ವಿಮಾನವನ್ನು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿ ಲ್ಯಾಂಡಿಂಗ್ ಅನುಮತಿ ಪಡೆದು ವಿಮಾನವನ್ನು ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.
An Air India Express Boeing 737 operating flight IX 415 from Cochin to Abu Dhabi was forced to return to Cochin after the crew detected a rapid drop in Engine 1 oil quantity. pic.twitter.com/CEMU0DQcml
— Bhaskar English (@BhaskarEnglish_) September 7, 2026
ಕೆಲವು ದಿನಗಳ ಹಿಂದೆ ವಾರಣಾಸಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಲಕ್ನೋಗೆ ಹಿಂದಿರುಗಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಮಾರ್ಗದಲ್ಲಿ ಬದಲಾವಣೆ ಮಾಡಲು ಸಿಬ್ಬಂದಿ ನಿರ್ಧರಿಸಿದರು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಎಲ್ಲಾ ಅತಿಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ಯಲು ಆದ್ಯತೆಯ ಮೇಲೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿಕ ತೊಂದರೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ತಪ್ಪಿದ ಭಾರಿ ದುರಂತ; ಬಿಹಾರದಲ್ಲಿ ಹಳಿ ತಪ್ಪಿದ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲು
ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಬಳಿಕ ಅದು ಗೋವಾಕ್ಕೆ ಮರಳಿತ್ತು. ಸೆಪ್ಟೆಂಬರ್ 6 ರಂದು ಬೆಂಗಳೂರಿನಿಂದ ಲಂಡನ್‌ಗೆ ಹೋಗುವ ವರ್ಜಿನ್ ಅಟ್ಲಾಂಟಿಕ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ಅನಂತರ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿತ್ತು.