ಭಾರತೀಯ ಕರಾವಳಿ ಕಾವಲು ಪಡೆ ಶಕ್ತಿ ಹೆಚ್ಚಿಸಿದ ಎಂಕೆ 3 ಹೆಲಿಕಾಪ್ಟರ್
ದೇಶದ ಕರಾವಳಿಯ ಕಾವಲು ಪಡೆಯ ಶಕ್ತಿಯನ್ನು ಈಗ ಮತ್ತಷ್ಟು ವೃದ್ಧಿಗೊಳಿಸಲಾಗಿದೆ. ಅತ್ಯಾಧುನಿಕ ಎಂಕೆ 3 ಹೆಲಿಕಾಪ್ಟರ್ ಇದೀಗ ಭಾರತೀಯ ಕರಾವಳಿ ಕಾವಲು ಪಡೆಯ ಭದ್ರತೆ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಿದ್ದ ಪಡಿಸಿರುವ ಎಂಕೆ 3 ಹೆಲಿಕಾಪ್ಟರ್ ಕುರಿತು ವಿಶೇಷ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ದೇಶದ ಕರಾವಳಿಯ ಭದ್ರತೆಯನ್ನು (Coastal security) ಹೆಚ್ಚಿಸಲು ಇದೀಗ ಎಂಕೆ 3 ಹೆಲಿಕಾಪ್ಟರ್ ( MK3 helicopters) ಭಾರತೀಯ ಕರಾವಳಿ ಕಾವಲು ಪಡೆಯನ್ನು (Indian Coast Guard) ಸೇರಿಕೊಂಡಿದೆ. ಬೆಂಗಳೂರಿನ (Bengaluru) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಸಿದ್ದ ಪಡಿಸಿರುವ ನಾಲ್ಕು ಎಎಲ್ ಹೆಚ್ ಎಂಕೆ III (ಎಂಆರ್ ) (ALH Mk III MR) ಹೆಲಿಕಾಪ್ಟರ್‌ಗಳನ್ನು 2024 ರ ಒಪ್ಪಂದದ ಅಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಯಿತು. ಈ ಹೆಲಿಕಾಪ್ಟರ್ ಗಳು ಕರಾವಳಿಯಲ್ಲಿ ನಿರಂತರ ಕಣ್ಗಾವಲು, ಹುಡುಕಾಟ ಮತ್ತು ರಕ್ಷಣೆ ಕಾರ್ಯಾಚರಣೆಗಳಿಗೆ ಹೆಚ್ಚು ಅನುಕೂಲಕರವಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಭಾರತೀಯ ಕರಾವಳಿ ಕಾವಲು ಪಡೆಗೆ (ICG) ನಾಲ್ಕು ಎಎಲ್ ಹೆಚ್ ಎಂಕೆ III ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಯಿತು.
ವಂತಾರದಿಂದ ವಿಶ್ವದ ಮೊದಲ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಜ್ಞಾನ ಜಾಗತಿಕ ವಿಶ್ವವಿದ್ಯಾಲಯ ಘೋಷಣೆ
ಏರೋನಾಟಿಕಲ್ ಗುಣಮಟ್ಟ ಭರವಸೆ (ORDAQA) ಪ್ರಾದೇಶಿಕ ನಿರ್ದೇಶಕರ ಕಚೇರಿ ಮತ್ತು ಹೆಲಿಕಾಪ್ಟರ್ ವಿಭಾಗದ ವತಿಯಿಂದ ಕೊಚ್ಚಿ ಮತ್ತು ಪೋರಬಂದರ್ ಮೂಲದ ಕೋಸ್ಟ್ ಗಾರ್ಡ್ ಸ್ಕ್ವಾಡ್ರನ್‌ಗಳಿಗೆ ಹೆಲಿಕಾಪ್ಟರ್ ಗಳ ದಾಖಲೆಗಳನ್ನು ಔಪಚಾರಿಕವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಹೆಚ್ ಎಎಲ್ ನ ಹೆಲಿಕಾಪ್ಟರ್ ಸಂಕೀರ್ಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಿ. ರಂಗ ರಾವ್, ಸಿಎಸ್ಒ (ವಾಯುಯಾನ) ಮತ್ತು ಕೋಸ್ಟ್ ಗಾರ್ಡ್ ಕಮಾಂಡರ್ (ಪಶ್ಚಿಮ ಸಮುದ್ರ ತೀರ) ಡಿಐಜಿ ರಾಜೇಶ್ ಮಕ್ವಾನಾ ಮತ್ತಿತರರು ಭಾಗವಹಿಸಿದ್ದರು.
Hindustan Aeronautics Limited (HAL) handed over four ALH Mk III Maritime Role (MR) helicopters to the Indian Coast Guard at an event held in Bengaluru today. pic.twitter.com/mQpWeuzDoR
— Defence Matrix (@Defencematrix1) April 10, 2026
2024ರ ಮಾರ್ಚ್ ತಿಂಗಳಲ್ಲಿ ಮಾಡಿರುವ ಒಪ್ಪಂದದ ಪ್ರಕಾರ ಒಟ್ಟು ಒಂಬತ್ತು ಹೆಲಿಕಾಪ್ಟರ್ ಭಾರತೀಯ ಕಾವಲು ಪಡೆಯನ್ನು ಸೇರಬೇಕಾಗಿದೆ. ಇದರಲ್ಲಿ ಈಗ ನಾಲ್ಕನ್ನು ಹಸ್ತಾಂತರಿಸಲಾಯಿತು. ಈ ಹಿಂದೆ 2022ರವರೆಗೆ 16 ಎಎಲ್ ಹೆಚ್ ಎಂಕೆ ಹೆಲಿಕಾಪ್ಟರ್‌ಗಳನ್ನು ಕೋಸ್ಟ್ ಗಾರ್ಡ್‌ಗೆ ತಲುಪಿಸಲಾಗಿತ್ತು. 2026ರ ಮಾರ್ಚ್ ನಲ್ಲಿ ಮತ್ತೆ ಆರು ಹೆಲಿಕಾಪ್ಟರ್‌ಗಳಿಗೆ ಹೆಚ್ಚುವರಿ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಕೈಗಾರಿಕಾ ವಲಯಗಳಿಗೆ ಎಲ್ಪಿಜಿ ಹಂಚಿಕೆಯ ವಿಸ್ತರಣೆ
ಏನು ವಿಶೇಷ?
ಎಎಲ್ ಹೆಚ್ ಎಂಕೆ III ಹೆಲಿಕಾಪ್ಟರ ಧ್ರುವ್ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ನ ಕಡಲ ರೂಪಾಂತರವಾಗಿದೆ. ಇದು ಅವಳಿ ಎಂಜಿನ್ ಹೊಂದಿದ್ದು, ಕಣ್ಗಾವಲು, ಹುಡುಕಾಟ ಮತ್ತು ರಕ್ಷಣೆಗೆ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತದೆ.
ಅಪಘಾತ, ಸ್ಥಳಾಂತರ, ಕರಾವಳಿ ಭದ್ರತೆ, ಕಾನೂನು ಜಾರಿ, ವಿಐಪಿ ಸಾರಿಗೆ, ಸೈನ್ಯದ ಚಲನೆ, ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ವೈವಿಧ್ಯಮಯ ಕಡಲ ಸನ್ನಿವೇಶಗಳಿಗೆ ಬಳಕೆಯಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.