ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಳು ವರ್ಷಗಳ ನಂತರ ಇರಾನ್‌ನಿಂದ ಭಾರತಕ್ಕೆ ತೈಲ ಆಮದು ಆರಂಭ: ಚೀನಾದತ್ತ ಸಾಗುತ್ತಿದ್ದ ಹಡಗು ಭಾರತದತ್ತ ಪ್ರಯಾಣ

7 ವರ್ಷಗಳ ವಿರಾಮದ ನಂತರ ಭಾರತವು ಇರಾನ್‌ನಿಂದ ಕಚ್ಚಾ ತೈಲವನ್ನು ಮರು ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ನಿರ್ಬಂಧಗಳಲ್ಲಿ ತಾತ್ಕಾಲಿಕ ಸಡಿಲಿಕೆ ಹಾಗೂ ಜಾಗತಿಕ ಪೂರೈಕೆ ಸಮಸ್ಯೆಗಳ ನಡುವೆ ಈ ಬೆಳವಣಿಗೆ ಸಂಭವಿಸಿದೆ. ಇಂಡಿಯನ್ ಆಯಿಲ್ ಖರೀದಿಸಿದ ತೈಲ ಸಾಗಿಸುತ್ತಿದ್ದ ಹಡಗು ದಿಕ್ಕು ಬದಲಿಸಿ ಭಾರತದತ್ತ ಬರುತ್ತಿದೆ. ಇದು ಭಾರತದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ.

7 ವರ್ಷಗಳ ಬಳಿಕ ಇರಾನ್ ತೈಲ ಭಾರತಕ್ಕೆ..!

ಇರಾನ್ ತೈಲ ಭಾರತಕ್ಕೆ -

Profile
Sushmitha Jain Apr 8, 2026 8:42 PM

ನವದೆಹಲಿ: ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತ (India)ವು ಇರಾನ್‌ (Iran)ನಿಂದ ಕಚ್ಚಾ ತೈಲದ ಮೊದಲ ಸರಕನ್ನು ಈ ವಾರ ಸ್ವೀಕರಿಸಲು ಸಜ್ಜಾಗಿದೆ. ಜಾಗತಿಕ ಪೂರೈಕೆಯನ್ನು ಸ್ಥಿರಗೊಳಿಸಲು ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಅಮೆರಿಕ (America) ತಾತ್ಕಾಲಿಕವಾಗಿ ಸಡಿಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಶೇಷವೆಂದರೆ, ಮೊದಲು ಚೀನಾ (Chaina)ದತ್ತ ಸಾಗುತ್ತಿದ್ದ ತೈಲ ಟ್ಯಾಂಕರ್ ಹಡಗು ಈಗ ಮಾರ್ಗ ಬದಲಿಸಿ ಭಾರತದ ತೀರಕ್ಕೆ ಬರುತ್ತಿದೆ.

ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ (London Stock Exchange Group) ಮತ್ತು ಕೆಪ್ಲರ್‌ (Kepler)ನ ಹಡಗು ಸಂಚಾರ ದತ್ತಾಂಶಗಳ ಪ್ರಕಾರ, 'ಜಯಾ (Jaya)' ಎಂಬ ಬೃಹತ್ ಕಚ್ಚಾ ತೈಲವಾಹಕ ನೌಕೆಯು ಇರಾನ್‌ (Iran)ನ ತೈಲವನ್ನು ಭಾರತದ ಪೂರ್ವ ಕರಾವಳಿಗೆ ತಲುಪಿಸಲು ಸಜ್ಜಾಗಿದೆ. ಈ ಹಡಗು ಮೊದಲು ಆಗ್ನೇಯ ಏಷ್ಯಾದ ಜಲಪ್ರದೇಶದ ಮೂಲಕ ಚೀನಾದತ್ತ ಸಾಗುತ್ತಿತ್ತು, ಆದರೆ ನಂತರ ಹಠಾತ್ತಾಗಿ ಭಾರತದತ್ತ ತನ್ನ ದಿಕ್ಕನ್ನು ಬದಲಿಸಿದೆ. ಈ ತೈಲವನ್ನು 'ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation)' ಖರೀದಿ ಮಾಡಿದ್ದು, ಇದರ ಬೆನ್ನಲ್ಲೇ 'ಜೋರ್ಡಾನ್ (Jordan)' ಎಂಬ ಇನ್ನೊಂದು ಟ್ಯಾಂಕರ್ ಕೂಡ ಭಾರತದತ್ತ ಬರುತ್ತಿದೆ ಎಂದು ವರದಿಯಾಗಿದೆ.

''ಇರಾನ್‌ನಿಂದ ಕೂಡಲೇ ನಿರ್ಗಮಿಸಿ'': ಕದನ ವಿರಾಮದ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಭಾರತವು ಕೊನೆಯದಾಗಿ ಮೇ 2019 ರಲ್ಲಿ ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು. ಆಗ ಅಮೆರಿಕ ಹೇರಿದ್ದ ನಿರ್ಬಂಧಗಳಿಂದಾಗಿ ತೈಲ ಖರೀದಿಯನ್ನು ಸ್ಥಗಿತಗೊಳಿಸಬೇಕಾಯಿತು. ಈಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಪೂರೈಕೆ ವ್ಯತ್ಯಯದಿಂದಾಗಿ ಜಾಗತಿಕವಾಗಿ ತೈಲದ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ನೀಡಿದೆ.

ಕಳೆದ ವಾರವಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ಈ ತೈಲ ಖರೀದಿಯು ಅದಕ್ಕಿಂತ ಮೊದಲೇ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಪಾವತಿ ಪ್ರಕ್ರಿಯೆಯಲ್ಲಿ ಸದ್ಯಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಭಾರತೀಯ ತೈಲ ಸಚಿವಾಲಯ ಸ್ಪಷ್ಟಪಡಿಸಿದೆ. ಏರುತ್ತಿರುವ ತೈಲ ಬೆಲೆ ಮತ್ತು ಪೂರೈಕೆಯ ಅನಿಶ್ಚಿತತೆಯಿಂದ ಕಂಗೆಟ್ಟಿದ್ದ ಭಾರತೀಯ ಸಂಸ್ಕರಣಾಗಾರಗಳಿಗೆ ಇರಾನ್‌ನ ಈ ಅಗ್ಗದ ದರದ ತೈಲವು ದೊಡ್ಡ ಮಟ್ಟದ ನಿರಾಳತೆಯನ್ನು ತಂದುಕೊಡುವ ನಿರೀಕ್ಷೆಯಿದೆ. ಇದು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಮಹತ್ವದ ಹಂತವಾಗಿದೆ.