ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian satellites: 2040ರ ವೇಳೆಗೆ ಉಡಾವಣೆಯಾಗಲಿವೆ 100ಕ್ಕೂ ಹೆಚ್ಚು ಭಾರತದ ಉಪಗ್ರಹಗಳು

ಭಾರತವು 2040ರ ವೇಳೆಗೆ ಭಾರತವು 100 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇವುಗಳಲ್ಲಿ ಸರಿಸುಮಾರು ಶೇ. 70ರಷ್ಟು ಸಣ್ಣ ಉಪಗ್ರಹಗಳಾಗಿವೆ. ಇವುಗಳನ್ನು ಖಾಸಗಿ ಸಂಸ್ಥೆಗಳು ಕೂಡ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

2040ರ ವೇಳೆಗೆ ಭಾರತದ 100ಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ

ನವದೆಹಲಿ: ಬಾಹ್ಯಾಕಾಶ ಪ್ರಯಾಣದಲ್ಲಿ (Space travel) ಭಾರತವು (India) ಹೊಸ ಹಾದಿಯನ್ನು ರೂಪಿಸುತ್ತಿದೆ. 2040ರ ವೇಳೆಗೆ 100ಕ್ಕೂ ಹೆಚ್ಚು ಉಪಗ್ರಹಗಳನ್ನು (indian satellites) ಉಡಾವಣೆ ಮಾಡುವ ಗುರಿಯನ್ನು ಭಾರತ ಹೊಂದಿದೆ. ಇದು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಹೆಚ್ಚಿನ ಸಹಯೋಗದ ಕಡೆಗೆ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಭಾರತ ಉಡಾವಣೆ ಮಾಡಲಿರುವ ಉಪಗ್ರಹಗಳ (satellites) ಪೈಕಿ ಸರಿಸುಮಾರು ಶೇ. 70ರಷ್ಟು ಸಣ್ಣ ಉಪಗ್ರಹಗಳಾಗಿವೆ. ಇವುಗಳನ್ನು ಖಾಸಗಿ ಸಂಸ್ಥೆಗಳು ಕೂಡ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ (Science and Technology Minister Jitendra Singh) ತಿಳಿಸಿದ್ದಾರೆ.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಪ್ರಯುಕ್ತ ಅವರು ಬಾಹ್ಯಾಕಾಶ ವಲಯಕ್ಕೆ ಸಮಗ್ರ 15 ವರ್ಷಗಳ ಮಾರ್ಗಸೂಚಿಯನ್ನು ಅನಾವರಣಗೊಳಿಸಿ ಮಾತನಾಡಿ, ರಾಷ್ಟ್ರೀಯ ಉದ್ದೇಶಗಳಿಗಾಗಿ ರೂಪಿಸಿರುವ ಈ ಮಾರ್ಗಸೂಚಿಯು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಾರ್ಯತಂತ್ರದ ಕ್ರಮವಾಗಿದೆ ಎಂದು ಹೇಳಿದರು.

ಆಹಾರ, ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಿಪತ್ತು ಅನ್ನು ಎದುರಿಸಲು, ಪರಿಸರ ಸುಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಯನ್ನು ಕಂಡು ಹಿಡಿಯಲು ಇದು ಸಹಾಯ ಮಾಡುತ್ತದೆ ಎಂದ ಸಚಿವರು, ಸಣ್ಣ ಉಪಗ್ರಹಗಳ ಮೂಲಕ ಭಾರತವು ಮೂಲಸೌಕರ್ಯ ಮೇಲ್ವಿಚಾರಣೆ ಮಾಡುವುದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಭೂ ಮಾಲೀಕತ್ವದ ನಕ್ಷೆಯವರೆಗೆ ತನ್ನ ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಈ ಮಾರ್ಗಸೂಚಿಯು ಖಾಸಗಿ ವಲಯವನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬಾಹ್ಯಾಕಾಶ ವಲಯವು ಇನ್ನು ಮುಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಸೀಮಿತವಾಗಿಲ್ಲ, ಬದಲಾಗಿ ನೂರಾರು ನವೋದ್ಯಮಗಳು ಮತ್ತು ಖಾಸಗಿ ಕಂಪನಿಗಳೊಂದಿಗೆ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Airtel Network Issue: ಬೆಂಗಳೂರು ಸೇರಿದಂತೆ ಹಲವೆಡೆ ಮತ್ತೆ ಕೈ ಕೊಟ್ಟ ಏರ್ಟೆಲ್‌; ಬಳಕೆದಾರರ ಪರದಾಟ

ಇದು 100ಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸುವ ಗುರಿಯನ್ನು ಸಾಧಿಸಲು ನಿರ್ಣಾಯಕವಾಗಿದೆ. ಯೋಜಿತ ಉಡಾವಣೆಗಳಲ್ಲಿ ಸರಿಸುಮಾರು ಶೇ. 70ರಷ್ಟು ಸಣ್ಣ ಉಪಗ್ರಹಗಳಾಗಿವೆ. ಇವುಗಳನ್ನು ಖಾಸಗಿ ಸಂಸ್ಥೆಗಳು ಕೂಡ ಅಭಿವೃದ್ಧಿ ಮಾಡಬಹುದಾಗಿದೆ ಎಂದರು.