ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2008ರ ರಾಂಪುರ ಸಿಆರ್‌ಪಿಎಫ್‌ ಕ್ಯಾಂಪ್‌ ದಾಳಿಯ ಮಾಸ್ಟರ್‌ ಮೈಂಡ್‌ ಉಗ್ರ ಮೊಹಮ್ಮದ್‌ ಶರೀಫ್‌ ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿಗೆ ಬಲಿ

2008 Rampur CRPF camp attack: 2008ರಲ್ಲಿ ಉತ್ತರ ಪ್ರದೇಶದ ರಾಂಪುರ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ನಡೆದ ಉಗ್ರ ದಾಳಿದ ಮುಖ್ಯ ಆರೋಪಿ ಮೊಹಮ್ಮದ್‌ ಶರೀಫ್‌ನನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆಗೈದಿದ್ದಾನೆ. ಖಜುರಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಉಗ್ರ ಮೊಹಮ್ಮದ್‌ ಶರೀಫ್‌ನ ಹತ್ಯೆ

ಮೊಹಮ್ಮದ್‌ ಶರೀಫ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 10, 2026 11:07 PM

ಲಖನೌ, ನ. 10: ಮಹತ್ವದ ಬೆಳವಣಿಗೆಯೊಂದರಲ್ಲಿ 2008ರಲ್ಲಿ ಉತ್ತರ ಪ್ರದೇಶದ ರಾಂಪುರ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ನಡೆದ ಉಗ್ರ ದಾಳಿದ (2008 Rampur CRPF camp attack) ಮುಖ್ಯ ಆರೋಪಿ ಮೊಹಮ್ಮದ್‌ ಶರೀಫ್‌ನನ್ನು (Mohammad Sharif) ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆಗೈದಿದ್ದಾನೆ. ಖಜುರಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಮಗನೊಂದಿಗೆ ಸಂಚರಿಸುತ್ತಿದ್ದ ಮೊಹಮ್ಮದ್‌ ಶರೀಫ್‌ನ ಮೇಲೆ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡ ಆತನನ್ನುಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಮೂಲಗಳ ಪ್ರಕಾರ, ದಾಳಿಕೋರ ಸಮೀಪದಿಂದ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಬರೇಲಿ ಸೆಂಟ್ರಲ್‌ ಜೈಲಿನಿಂದ ಬಿಡುಗಡೆಯಾದ ಸುಮಾರು 1 ವರ್ಷದ ಬಳಿಕ ಈ ಹತ್ಯೆ ನಡೆದಿದೆ. ಹತ್ಯೆ, ಭಯೋತ್ಪಾದನೆ ಮತ್ತು ಪಿತೂರಿ ಆರೋಪಗಳಲ್ಲಿನ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದ ನಂತರ 2025ರಲ್ಲಿ ಶರೀಫ್‌ನನ್ನು ಬಿಡುಗಡೆ ಮಾಡಲಾಗಿತ್ತು.

ಉಗ್ರನ ಹತ್ಯೆ:



ಯಾರು ಈ ಮೊಹಮ್ಮದ್‌ ಶರೀಫ್‌?

ಸುಹೈಲ್, ಸಾಜಿದ್, ಅನ್ವರ್ ಮತ್ತು ಅಲಿ ಸೇರಿ ಹಲವು ಹೆಸರಿಂದ ಗುರುತಿಸಲ್ಪಡುತ್ತಿದ್ದ ಶರೀಫ್ ರಾಂಪುರದ ನಿವಾಸಿ. 2007ರ ಡಿಸೆಂಬರ್ 31ರ ರಾತ್ರಿ ಹಾಗೂ 2008ರ ಜನವರಿ 1ರಂದು ರಾಂಪುರ ಜಿಲ್ಲೆಯಲ್ಲಿರುವ ಸಿಆರ್‌ಪಿಎಫ್ ಗ್ರೂಪ್ ಸೆಂಟರ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಆತ ಭಾಗಿಯಾಗಿದ್ದ.

ಆಪರೇಷನ್ ಸಿಂದೂರ್‌ನಲ್ಲಿ 5 ಭಯೋತ್ಪಾದಕರ ಹತ್ಯೆ; ಪಾಕಿಸ್ತಾನದ ಸೇನೆ-ಭಯೋತ್ಪಾದಕರ ಸಂಬಂಧ ಬಯಲು

ಈ ದಾಳಿಯಲ್ಲಿ 7 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ರಿಕ್ಷಾ ಚಾಲಕ ಸೇರಿ 8 ಮಂದಿ ಪ್ರಾಣ ಕಳೆದುಕೊಂಡಿದ್ದರು ಮತ್ತು ಐವರು ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಈ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿತ್ತು. ನಂತರ ನಡೆದ ತನಿಖೆ ವೇಳೆ ಶರೀಫ್‌ ಸೇರಿ ಹಲವರನ್ನು ಬಂಧಿಸಲಾಗಿತ್ತು.

2019ರಲ್ಲಿ ರಾಂಪುರದ ನ್ಯಾಯಾಲಯ ಶರೀಫ್‌ ಹಾಗೂ ಇತರ ಮೂವರು ಆರೋಪಿಗಳಾದ ಸಬಾವುದ್ದೀನ್, ಇಮ್ರಾನ್ ಶಹಜಾದ್ ಮತ್ತು ಮೊಹಮ್ಮದ್ ಫಾರೂಖ್‌ಗೆ ಮರಣದಂಡನೆ ವಿಧಿಸಿತು. ಮತ್ತೊಬ್ಬ ಆರೋಪಿ ಜಂಗ್ ಬಹದ್ದೂರ್ ಖಾನ್‌ಗೆ ಜೀವಾವಧಿ ಶಿಕ್ಷೆ ನೀಡಿತು.

ಖುಲಾಸೆ

2025ರ ಅಕ್ಟೋಬರ್ 29ರಂದು ಈ ಪ್ರಕರಣವು ಮಹತ್ವದ ತಿರುವು ಪಡೆಯಿತು. ತನಿಖೆಯಲ್ಲಿ ಗಂಭೀರ ಲೋಪದೋಷಗಳಿವೆ ಎಂದು ಉಲ್ಲೇಖಿಸಿ ಅಲಹಾಬಾದ್ ಹೈಕೋರ್ಟ್ ಕೊಲೆ, ಭಯೋತ್ಪಾದನೆ ಮತ್ತು ಅಪರಾಧ ಪಿತೂರಿ ಆರೋಪಗಳಡಿ ಶರೀಫ್ ಹಾಗೂ ಇತರ ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು.

ಹತ್ಯೆಗೀಡಾದ ಮೂವರೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು-ಅಮಿತ್ ಶಾ

17 ವರ್ಷ, 8 ತಿಂಗಳು ಮತ್ತು 10 ದಿನ ಜೈಲುವಾಸ ಅನುಭವಿಸಿದ ಶರೀಫ್ 2025ರ ನವೆಂಬರ್‌ನಲ್ಲಿ ಬರೇಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ. ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್‌ನ ತೀರ್ಪನ್ನು ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲ್ಮನವಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಮಧ್ಯೆಯೇ ಶರೀಫ್‌ ಹತ್ಯೆ ನಡೆದಿದ್ದು, ತನಿಖೆ ಆರಂಭಗೊಂಡಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ