ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಲ್‌ಒಸಿಯಲ್ಲಿ ಕಾಣಿಸಿಕೊಂಡ ಪಾಕಿಸ್ತಾನದ ಡ್ರೋನ್; ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಎಂದ ರಾಜೌರಿ ನಿವಾಸಿಗಳು

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ನೌಶೇರಾ- ರಾಜೌರಿ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಕೆಲವು ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಜಿಲ್ಲೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಎಂದು ರಾಜೌರಿ ನಿವಾಸಿಗಳು ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಎಲ್‌ಒಸಿಯಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆ ಸೇನೆಯೊಂದಿಗೆ ನಿಂತ ಸ್ಥಳೀಯರು

ಸಂಗ್ರಹ ಚಿತ್ರ -

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ (Jammu and kashmir) ಸಾಂಬಾ (samba) ಜಿಲ್ಲೆಯ ನೌಶೇರಾ- ರಾಜೌರಿ ವಲಯದಲ್ಲಿನ (Naushera-Rajouri sector) ಗಡಿ ನಿಯಂತ್ರಣ ರೇಖೆಯ (Line of Control) ಉದ್ದಕ್ಕೂ ಮಂಗಳವಾರ ರಾತ್ರಿ ಪಾಕಿಸ್ತಾನದ (Pakistan) ಹಲವಾರು ಡ್ರೋನ್‌ಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಸೇನೆ ಮತ್ತು ಸ್ಥಳೀಯರು ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಹಲವಾರು ಡ್ರೋನ್ ಗಳನ್ನು ನೋಡಿದ ಸ್ಥಳೀಯರು ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಮತ್ತು ನಮಗೆ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ರಾಜೌರಿಯಲ್ಲಿರುವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಡ್ರೋನ್ ಚಟುವಟಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಭಾರತೀಯ ಸೇನೆಯ ಚಟುವಟಿಕೆ ಹೆಚ್ಚಾಗಿದೆ. ನಾವು ಭಾರತೀಯ ಸೇನೆಯೊಂದಿಗೆ ನಿಲ್ಲುತ್ತೇವೆ. ಅವರಿಗೆ ಬೇಕಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇರಾನ್‌ನಲ್ಲಿ ‘ದೇವರ ವಿರುದ್ಧ ಯುದ್ಧ ನಡೆಸಿದ’ ಆರೋಪದಡಿ ಮರಣದಂಡನೆಗೆ ಗುರಿಯಾದ ಎರ್ಫಾನ್ ಸೊಲ್ತಾನಿ; ಯಾರಿವರು? ಇವರು ಸಿಡಿದೆದ್ದಿದ್ದು ಏಕೆ?

ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಾವು ವಾಸಿಸುತ್ತಿದ್ದೇವೆ. ಸಾಂಬಾ, ಜಮ್ಮು ಮತ್ತು ಅಖ್ನೂರ್ ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಚಟುವಟಿಕೆ ಸಾಮಾನ್ಯ ದೃಶ್ಯವಾಗಿದೆ. ಕಳೆದ 2- 3 ದಿನಗಳಿಂದ ನಾವು ಪಾಕಿಸ್ತಾನಿ ಡ್ರೋನ್ ಚಟುವಟಿಕೆಯನ್ನು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಲಂಡನ್‍ನಲ್ಲಿ ಮುಸ್ಲಿಂ ವ್ಯಕ್ತಿಯಿಂದ ಅಪಹರಿಸಲ್ಪಟ್ಟ ಹದಿಹರೆಯದ ಬಾಲಕಿಯನ್ನು ರಕ್ಷಿಸಿದ ಸಿಖ್‌ ಸಮುದಾಯ

ಕಥುವಾ ಜಿಲ್ಲೆಯಲ್ಲಿ ಮಂಗಳವಾರ ಗುಂಡಿನ ದಾಳಿಯಾಗಿದೆ. ಬಿಲ್ಲಾವರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರ್‌ಎಸ್ ಪುರ, ನೌಶೇರಾ ಮತ್ತು ಪೂಂಚ್ ಸೇರಿದಂತೆ ಇತರ ಗಡಿ ಭಾಗದಲ್ಲೂ ಡ್ರೋನ್ ಗಳು ಪತ್ತೆಯಾಗಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದರೂ ಮತ್ತೆ ಮತ್ತೆ ಅದು ಭಾರತವನ್ನು ಕೆಣಕುತ್ತಿದೆ. ಹೀಗಾಗಿ ಹಗಲು ರಾತ್ರಿ ಜಾಗರೂಕರಾಗಿದ್ದು ಪಾಕಿಸ್ತಾನದ ಚಟುವಟಿಕೆಗಳನ್ನು ಭಾರತೀಯ ಸೇನೆಯು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದರು.