''2024ರ ಲೋಕಸಭಾ ಚುನಾವಣೆ ಕಾನೂನು ಬಾಹಿರವಾಗಿತ್ತುʼʼ: ದೆಹಲಿ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹೊಸ ಬಾಂಬ್
Delhi Rally: 2024ರ ಚುನಾವಣೆ ಕಾನೂನು ಬಾಹಿರವಾಗಿತ್ತು ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ರಾಮ್ಲೀಲಾ ಮೈದಾನದಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ದೆಹಲಿ ರ್ಯಾಲಿಯಲ್ಲಿ ಅವರು ಮಾತನಾಡಿದರು.
ದೆಹಲಿ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ -
ದೆಹಲಿ, ನ. 1: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಬಂಧಿಸಬೇಕು. ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (EVM) ಹಾಗೂ ಮತದಾರರ ಪಟ್ಟಿಯನ್ನು ತಿರುಚುವ ಮೂಲಕ ಮತಗಳನ್ನು ಕದಿಯಲು ಸಹಾಯ ಮಾಡಿದ್ದಾರೆ. 2024ರ ಚುನಾವಣೆ ಕಾನೂನು ಬಾಹಿರವಾಗಿತ್ತು ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ರಾಮ್ಲೀಲಾ ಮೈದಾನದಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ದೆಹಲಿ ರ್ಯಾಲಿಯಲ್ಲಿ ಅವರು ಮಾತನಾಡಿದರು. ʼʼಮತ ಕಳವು ಸಾಮಾನ್ಯ ಅಪರಾಧವಲ್ಲ. ಇದು ಭಾರತೀಯರ ಧ್ವನಿ ಹತ್ತಿಕ್ಕುವ ಪ್ರಯತ್ನ. ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಅಮಿತ್ ಶಾ ಅವರಿಗೆ ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ರಾಹುಲ್ ಗಾಂಧಿ ಭಾಷಣ:
#WATCH | INDIA bloc mega rally | Delhi: Lok Sabha LoP Rahul Gandhi says, "Listen to me. What I say always turns out to be true, doesn't it? I am telling every citizen and every youth of India: Gyanesh Kumar will be removed from the post of Chief Election Commissioner. Gyanesh Kumar will go to jail." "Without Gyanesh Kumar, neither Narendra Modi would have become Prime Minister nor Amit Shah would have become Home Minister." "The farmer is not getting his rights. The youth are not getting employment. The labourer is not getting his rights, and the entire wealth has gone into the hands of two or three people. We do not want such an India, and we will not accept such an India." (Source: ANI/Congress)
— ANI (@ANI) November 1, 2026
ʼʼ2024ರ ಲೋಕಸಭಾ ಚುನಾವಣೆಯಲ್ಲಿ ಮತಕಳವು ನಡೆದಿದೆ. ಇವಿಎಂ ಮತ್ತು ಮತದಾರರ ಪಟ್ಟಿಯನ್ನು ತಿರುಚುವ ಮೂಲಕ ಮತ ಕಳವು ನಡೆದಿದೆ. 2024ರ ಚುನಾವಣೆ ನಂತರ ಶೇಕಡಾ 15ರಷ್ಟು ಮತದಾರರ ಹೆಸರನ್ನು ಅಳಿಸಲಾಗಿದೆ. 2024ರಲ್ಲಿ ನಮ್ಮ (ಇಂಡಿಯಾ ಒಕ್ಕೂಟ) ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ನಡುವೆ ಶೇಕಡಾ 3ರಷ್ಟು ವ್ಯತ್ಯಾಸವಿತ್ತು. 2024ರ ಚುನಾವಣೆ ಕಾನೂನುಬಾಹಿರವಾಗಿತ್ತು. ಚುನಾವಣಾ ಆಯೋಗದ ದತ್ತಾಂಶವೇ ಇದನ್ನು ಹೇಳುತ್ತಿದೆ" ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇದ್ದ ಬಸ್ ಟೈರ್ ಪಂಕ್ಚರ್
"ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ತೆಗೆದುಹಾಕಬೇಕು. ಜ್ಞಾನೇಶ್ ಕುಮಾರ್ ಜೈಲಿಗೆ ಹೋಗಬೇಕುʼʼ ಎಂದು ಹೇಳಿದರು. ಇದೇ ವೇಳೆ ಅವರು ಆರ್ಎಸ್ಎಸ್ ವಿರುದ್ಧವೂ ಕಿಡಿಕಾರಿದರು. ಆರ್ಎಸ್ಎಸ್ ದೇಶವನ್ನು ನಿಯಂತ್ರಿಸುತ್ತಿದೆ ಎಂದರು. ʼʼಶಿಕ್ಷಣದಿಂದ ಹಿಡಿದು ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ಆರ್ಎಸ್ಎಸ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹೀಗಾಗಿ ರೈತರು, ಕಾರ್ಮಿಕರು, ಜನಸಾಮಾನ್ಯರಿಗೆ ತಮ್ಮ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲʼʼ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ತಮ್ಮ ಕಲ್ಪನೆಯ ಭಾರತವನ್ನು ವಿವರಿಸಲು ಹಿಂದೂ ಪುರಾಣವನ್ನು ಉಲ್ಲೇಖಿಸಿ, "ಯಾರು ಬೇಕಾದರೂ ಶಿವನ ಮದುವೆಯ ಮೆರವಣಿಗೆ ಪಾಲ್ಗೊಳ್ಳಬಹುದು. ಯಾರನ್ನೂ ತಡೆಯಲಾಗುವುದಿಲ್ಲ. ನಮಗೆ ಅಂತಹ ಭಾರತ ಬೇಕು. ನಾವು ಪ್ರಜಾಪ್ರಭುತ್ವವನ್ನು ಅಂತ್ಯಗೊಳ್ಳಲು ಬಿಡುವುದಿಲ್ಲ. ಸಂವಿಧಾನವನ್ನು ನಾಶವಾಗಲು ಬಿಡುವುದಿಲ್ಲ. ನಿಮ್ಮ ಬಳಿ ಎಷ್ಟೇ ಹಣವಿದ್ದರೂ, ನೀವು ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನವೇ ನಿಮಗಿಂತ ದೊಡ್ಡದು" ಎಂದು ಹೇಳಿದರು. ಚುನಾವಣಾ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಮೇಲೆ ಪ್ರಭಾವ ಬೀರಲು ಬಿಜೆಪಿ ಹಣವನ್ನು ಬಳಸುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಆರೋಪ
ಇದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಸರ್ಕಾರ ವೋಟ್ ಕಳವು ಮೂಲಕ ಅಧಿಕಾರಕ್ಕೆ ಬಂದಿದೆ ಎಂದರು. ʼʼಅವರಿಗಾಗಿ ಯಾರು ಮತ ಚಲಾಯಿಸುತ್ತಾರೆ? ಅವರನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸಾರ್ವಜನಿಕರು ಅವರಿಗೆ ಮತ ಹಾಕಲ್ಲ. ಸದ್ಯದ ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಸರ್ಕಾರ ರೂಪುಗೊಂಡಿದ್ದು ಮತ ಕಳವಿನಿಂದ. ಈ ಕಳ್ಳರನ್ನು ನಾವು ಕಿತ್ತೊಗೆಯಬೇಕು. ನರೇಂದ್ರ ಮೋದಿ ಅಧಿಕಾರದಿಂದ ಇಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆʼʼ ಎಂದರು.
ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ
ಇಂಡಿಯಾ ಒಕ್ಕೂಟದ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್ ಮತ್ತಿತರರು ದೆಹಲಿ ರ್ಯಾಲಿಯಲ್ಲಿ ಪಾಲ್ಗೊಂಡರು. ಜಾನ್ಞೇಶ್ ಕುಮಾರ್ ಮತ್ತು ಎಸ್ಐಆರ್ ವಿರೋಧಿಸಿ ಈ ಬೃಹತ್ ಪ್ರತಿಭಟನೆ ಅಯೋಜಿಸಲಾಗಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.