ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಣೆಯಲ್ಲಿ ಹಳಿ ತಪ್ಪಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು

ವಂದೇ ಭಾರತ್ ರೈಲು ಹಳಿ ತಪ್ಪಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮುಂಬೈ- ಸೋಲಾಪುರ ವಂದೇ ಭಾರತ್ ರೈಲು ಸೋಮವಾರ ಸಂಜೆ ಪುಣೆ ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸುವಾಗ ಹಾಲಿ ತಪ್ಪಿದೆ. ರೈಲಿನ ಒಂದು ಕೋಚ್ ಮಾತ್ರ ಹಳಿ ತಪ್ಪಿದ್ದು, ಹೆಚ್ಚಿನ ಅಪಾಯವಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿ  ಹಳಿ ತಪ್ಪಿದ ರೈಲು

ಸಂಗ್ರಹ ಚಿತ್ರ -

ಪುಣೆ: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲೊಂದು (Vande Bharat train) ಹಳಿ ತಪ್ಪಿರುವ ಘಟನೆ ಸೋಮವಾರ ಪುಣೆಯಲ್ಲಿ ನಡೆದಿದೆ. ಮುಂಬೈ- ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (Mumbai-Solapur Vande Bharat Express train) ಸೋಮವಾರ ಸಂಜೆ 7.30ರ ಸುಮಾರಿಗೆ ಪುಣೆ ರೈಲ್ವೆ ನಿಲ್ದಾಣಕ್ಕೆ (Pune railway station) ಪ್ರವೇಶಿಸುವಾಗ ಹಳಿ ತಪ್ಪಿದೆ. ರೈಲು ನಿಲ್ದಾಣದಲ್ಲಿ ಯಾರ್ಡ್ ಪುನರ್ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನವೀಕರಣಕ್ಕೆ ನಿಗದಿಪಡಿಸಲಾದ ಡೈಮಂಡ್ ಕ್ರಾಸಿಂಗ್‌ನಲ್ಲಿ ರೈಲು ಹಳಿ ತಪ್ಪಿದೆ. ರೈಲಿನ ಒಂದು ಕೋಚ್ ಮಾತ್ರ ಹಳಿ ತಪ್ಪಿದ್ದು, ಹೆಚ್ಚಿನ ಅಪಾಯವಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ ರೈಲು ನಿಲ್ದಾಣಕ್ಕೆ ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ ಪುಣೆ ನಿಲ್ದಾಣದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿ ನವೀಕರಣಕ್ಕೆ ನಿಗದಿಪಡಿಸಿದ್ದ ಪ್ರಮಾಣಿತವಲ್ಲದ ಡೈಮಂಡ್ ಕ್ರಾಸಿಂಗ್‌ನಲ್ಲಿ ರೈಲು ಹಳಿ ತಪ್ಪಿದೆ.

ವಾಷಿಂಗ್ ಮೆಷಿನ್ ಬಳಸುವಾಗ ಶಾಕ್‌ ತಗುಲಿ ಮಹಿಳೆ ಬಲಿ; ಅಳಿಯನೇ ಮಗಳನ್ನು ಕೊಂದ ಎಂದ ಪೋಷಕರು

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಂದು ಕೋಚ್ ಪುಣೆ ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸುವಾಗ ಹಳಿ ತಪ್ಪಿದೆ. ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಾಲ್ಕನೇ ಕೋಚ್‌ನ ಒಂದು ಟ್ರಾಲಿ ಹಳಿ ತಪ್ಪಿದೆ. ಘಟನೆಯಲ್ಲಿ ಹೆಚ್ಚಿನ ಅಪಾಯವಾಗಿಲ್ಲ. ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳುತ್ತಿತ್ತು. ಅಪಘಾತದ ಬಳಿಕ ಅಧಿಕಾರಿಗಳು ಹಳಿ ತಪ್ಪಿದ ಟ್ರಾಲಿಯನ್ನು ಪರಿಶೀಲಿಸಿ ಪ್ರಯಾಣಿಕರು ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿಕೊಂಡರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರೈಲು ಹಳಿ ತಪ್ಪಿದ ಬಳಿಕ ಅದನ್ನು ನೋಡಲು ಅಪಾರ ಜನರು ಸ್ಥಳದಲ್ಲಿ ಸೇರಿಕೊಂಡರು.

ರಾಜ್ಯದಲ್ಲಿ ಹಿಟ್ ಸ್ಟ್ರೋಕ್‌ಗೆ ಮತ್ತೊಂದು ಬಲಿ; ಬಿಸಿಲ ತಾಪಕ್ಕೆ ಕಾರ್ಮಿಕ ಸಾವು

ಪ್ರಯಾಣಿಕರಿಗೆ ಆದ ತೊಂದರೆಯನ್ನು ನಿವಾರಿಸಲು ಪ್ರಯಾಣಿಕರನ್ನು ಮತ್ತೊಂದು ರೇಕ್‌ಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿರುವ ಭಾರತದ ಮೊದಲ ಅರೆ-ಹೈ-ಸ್ಪೀಡ್ ರೈಲು ಆಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2019 ರಲ್ಲಿ ಪರಿಚಯಿಸಲಾಗಿತ್ತು. ಇದು ಸಾಂಪ್ರದಾಯಿಕ ರೈಲುಗಳಿಗಿಂತ ಹೆಚ್ಚು ವೇಗ, ಆರಾಮದಾಯಕ ಮತ್ತು ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ.