ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಸೆಕೆಗೆ ಜನ ಹೈರಾಣು; ಎಸಿ ಗಾಳಿಗಾಗಿಯೇ ಹೋಟೆಲ್ ರೂಮ್ ಬುಕ್ ಮಾಡಿದ ಯುವತಿ!

Viral Video: ದಿನದಿಂದ ದಿನಕ್ಕೆ ಬಿಸಿಯಾ ತಾಪ ಮಾನ ಏರಿಕೆಯಾಗುತ್ತಲೇ ಇದೆ. ಬೆಂಗಳೂರಿನಂತಹ ತಂಪಾದ ಪ್ರದೇಶದಲ್ಲೂ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಈ ಉರಿ ಸೆಕೆಯನ್ನು ತಡೆಯಲು ಆಗದೆ ಮಹಿಳೆ ಯೊಬ್ಬರು ಏಸಿಗಾಗಿಯೇ ಹೋಟೆಲ್ ಬುಕ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ‌ ಭಾರೀ ವೈರಲ್ ಆಗುತ್ತಿದೆ

ಬಿಸಿಲು ತಡೆಯಲಾರದೆ ಎಸಿಗಾಗಿ ಹೋಟೆಲ್ ಬುಕ್ ಮಾಡಿದ ಬೆಂಗಳೂರಿನ ಮಹಿಳೆ

ಎಸಿಗಾಗಿ ಹೋಟೆಲ್ ಬುಕ್ ಮಾಡಿದ ಮಹಿಳೆ -

Profile
Pushpa Kumari Apr 24, 2026 3:44 PM

ಬೆಂಗಳೂರು,ಏ.24: ರಾಜ್ಯದೆಲ್ಲೆಡೆ ಬಿಸಿಲಿನ ದಗೆ ಜೋರಾಗಿದ್ದು ಜನ ಬೇಸೆತ್ತು ಹೋಗಿದ್ದಾರೆ. ದಿನದಿಂದ ದಿನಕ್ಕೆ ಬಿಸಿಯಾ ತಾಪ ಮಾನ ಏರಿಕೆಯಾಗುತ್ತಲೇ ಇದೆ. ಬೆಂಗಳೂರಿನಂತಹ ತಂಪಾದ ಪ್ರದೇಶದಲ್ಲೂ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಈ ಉರಿ ಸೆಕೆಯನ್ನು ತಡೆಯಲು ಆಗದೆ ಯುವತಿಯೊಬ್ಬಳು ಎಸಿಗಾಗಿಯೇ ಹೋಟೆಲ್ ಬುಕ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ‌ ಭಾರೀ ವೈರಲ್ (Viral News) ಆಗುತ್ತಿದೆ.

ಬೆಂಗಳೂರಿನ ಯುವತಿಯೊಬ್ಬರು ಹೆಚ್ಚುತ್ತಿರುವ ಬಿಸಿಲಿನ ನಡುವೆ ಹವಾನಿಯಂತ್ರಣವನ್ನು ಆನಂದಿಸಲು ಒಂದು ದಿನದ ಮಟ್ಟಿಗೆ ಏಸಿ ಹೋಟೆಲ್ ಬುಕ್ ಮಾಡಿದ್ದಾರೆ. ಬೆಂಗಳೂರು ನಿವಾಸಿ ಪ್ರಿಯಾ ಪಾಲ್, ಏಸಿ ಹೋಟೆಲ್ ಕೋಣೆಯಲ್ಲಿ ತನ್ನ ದಿನವನ್ನು ಹೇಗೆ ಕಳೆದರು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ:

ಹೊರಗಿನ ಶಾಖ ತೀವ್ರವಾಗಿದ್ದು ಅವರು ಒಳಾಂಗಣದಲ್ಲಿ ಆರಾಮವಾಗಿ ವಿಶ್ರಾಂತಿ ಪಡೆ ಯುವುದನ್ನು ಕ್ಲಿಪ್ ತೋರಿಸುತ್ತದೆ. ಹೋಟೆಲ್ ತನ್ನ ಮನೆಗೆ ಹತ್ತಿರದಲ್ಲಿದೆ ಎಂದಿದ್ದಾರೆ. ಮನೆಯಲ್ಲಿ ಸರಿಯಾದ ಕೂಲಿಂಗ್ ಇಲ್ಲದೆ ನಿರ್ವಹಿಸುವುದು ಅನೇಕರಿಗೆ ಎಷ್ಟು ಕಷ್ಟಕರವಾಗಿದೆ ಎಂಬುದು ಇಲ್ಲಿ ತಿಳಿಯಬಹುದು.

Viral Video: ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್​ಫ್ಲುಯೆನ್ಸರ್‌

ಹೋಟೆಲ್ ರೂಮ್‌ನಲ್ಲಿ ಎಸಿ ಆನ್ ಮಾಡಿಕೊಂಡು ಆರಾಮವಾಗಿ ವಿಶ್ರಾಂತಿ ಪಡೆದಿದ್ದಾರೆ "ಅಬ್ಬಾ.. ಎಸಿ ಇಲ್ಲದೆ ಬದುಕಲು ನನ್ನಿಂದ ಸಾಧ್ಯವಿಲ್ಲ"ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದ್ದಾರೆ. ಪ್ರಿಯಾ ತನ್ನ ನಿರ್ಧಾರದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. . ಅವರು ಕೂಲರ್ ಅಥವಾ ಎಸಿ ಖರೀದಿಸಲು ಪ್ರಯತ್ನಿಸಿದಾಗ, ಸ್ಟಾಕ್‌ ಇರಲಿಲ್ಲ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೂ ಮನೆಗೆ ಬರಲು ಕನಿಷ್ಠ ಒಂದು ವಾರ ಸಮಯ ಬೇಕಿತ್ತು ಎಂದಿದ್ದಾರೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈ ವರ್ಷ ಬೆಂಗಳೂರಿನಲ್ಲಿ ತುಂಬಾ ಬಿಸಿಯಾಗಿದೆ, ಕಳೆದ 15 ವರ್ಷಗಳಲ್ಲಿ ನಗರದಲ್ಲಿ ಇಷ್ಟೊಂದು ಬಿಸಿಲು ಎಂದಿಗೂ ಅನುಭವಿಸಿರಲಿಲ್ಲ ಎಂದಿದ್ದಾರೆ.