ಮಗಳಿಗೆ ʻಕುವೀರʼ ಎಂದು ನಾಮಕರಣ ಮಾಡಿ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ ರಿಷಿ; ಈ ಹೆಸರಿನ ಅರ್ಥ ಏನು?
'ಆಪರೇಷನ್ ಅಲಮೇಲಮ್ಮ' ಮತ್ತು 'ಕವಲುದಾರಿ'ಯಂತಹ ಹಿಟ್ ಸಿನಿಮಾಗಳ ಮೂಲಕ ಮನೆಮಾತಾಗಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಿಷಿ (Rishi) ಅವರು ಕಳೆದ ವರ್ಷ ಹೆಣ್ಣು ಮಗುವಿನ ತಂದೆಯಾಗಿದ್ದರು. ರಿಷಿ ಅವರು ತಮ್ಮ ಪತ್ನಿ ಸ್ವಾತಿ ಅವರೊಂದಿಗೆ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಮಗುವಿನ ಆಗಮನದ ಸುದ್ದಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದ ರಿಷಿ, ಇದೀಗ ತಮ್ಮ ಮುದ್ದಾದ ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತು ಮಗಳಿಗೆ ಇಟ್ಟಿರುವ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ.
-
Avinash GR
Jan 12, 2026 5:16 PM
1/5
2019ರಲ್ಲಿ ಚೆನ್ನೈನಲ್ಲಿ ಸ್ವಾತಿ ಪರಶುರಾಮನ್ ಅವರೊಂದಿಗೆ ರಿಷಿ ವಿವಾಹವಾಗಿದ್ದರು. 2024ರಲ್ಲಿ ಮಗುವಿನ ಬರುವಿಕೆಯಲ್ಲಿದ್ದೇವೆ ಎಂದು ದಂಪತಿ ಹೇಳಿದ್ದರು. 2025ರ ಜನವರಿಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಸ್ವಾತಿ ಜನ್ಮ ನೀಡಿದ್ದರು
2/5
ಮಗಳಿಗೆ ಕುವಿರಾ ಪರಶುರಾಮ್ ನಾಗ್ ಎಂಬ ಹೆಸರನ್ನು ಇಟ್ಟಿದ್ದಾರೆ ರಿಷಿ ಮತ್ತು ಸ್ವಾತಿ ದಂಪತಿ
3/5
"ನಮ್ಮ ಪುಟ್ಟ ರಾಜಕುಮಾರಿಯನ್ನು ಅವಳ ಮೊದಲ ಹುಟ್ಟುಹಬ್ಬದಂದು ಪರಿಚಯಿಸುತ್ತಿದ್ದೇವೆ, ಕುವಿರಾ ಎಂದರೆ ಧೈರ್ಯಶಾಲಿ" ಎಂದು ಸ್ವಾತಿ ರಿಷಿ ದಂಪತಿ ಹೇಳಿದ್ದಾರೆ
4/5
ಪರಶುರಾಮ್ ನಾಗ್ ಎಂಬುದು ಮಗುವಿನ ಅಜ್ಜಂದಿರ ಹೆಸರಾಗಿದೆ. ಈ ಮೂಲಕ ತಮ್ಮ ತಂದೆಯಂದಿರನ್ನು ಈ ದಂಪತಿ ನೆನಪು ಮಾಡಿಕೊಂಡಿದ್ದಾರೆ
5/5
"ಕುವಿರಾ ಪ್ರತಿದಿನ ನಮ್ಮೆಲ್ಲರಿಗೂ ಸಂತೋಷ ಮತ್ತು ಸಂತೋಷವನ್ನು ತರುವ ಸುಂದರ ಆಶೀರ್ವಾದ" ಎಂದ ಸ್ವಾತಿ ರಿಷಿ ದಂಪತಿ