ಇತಿಹಾಸ ಸೃಷ್ಟಿಸಿದ ʻಕುಣಿಗಲ್ ಉತ್ಸವʼ; 35 ಸಾವಿರ ಜನರ ಎದುರು ʻಕಿಚ್ಚʼ ಸುದೀಪ್‌ಗೆ ಸನ್ಮಾನಿಸಿದ ಡಿ.ಕೆ. ಶಿವಕುಮಾರ್
ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ' ನಡೆಯಿತು. ಸಿನಿಮಾ ಸೆಟ್‌ಗಿಂತಲೂ ಅದ್ದೂರಿಯಾಗಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ ಶಾಸಕ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭವು ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್ ಗೌಡ್ರು ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.
-
Avinash GR
Jan 12, 2026 7:01 PM
1/9
ಕುಣಿಗಲ್ ಇತಿಹಾಸದಲ್ಲಿ ಮೊದಲ ಬಾರಿಗೆ 35 ಸಾವಿರ ಜನರ ಬೃಹತ್ ಸಮ್ಮಿಲನ
2/9
ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಕಿಚ್ಚ ಸುದೀಪ್‌ಗೆ ನಡೆಯಿತು ಅದ್ಧೂರಿ ಸನ್ಮಾನ
3/9
ಸಿನಿಮಾ ಸೆಟ್ ಮೀರಿಸುವ ಅದ್ದೂರಿ ವೇದಿಕೆಯಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ತಾರೆಯರ ದಂಡು
4/9
ಶಾಸಕ ರಂಗನಾಥ್ ಮಾತನಾಡಿ, "ನಾವು 10 ಸಾವಿರ ಜನರನ್ನು ನಿರೀಕ್ಷಿಸಿದ್ದೆವು, ಆದರೆ 35 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಕುಣಿಗಲ್ ಉತ್ಸವ ಹೊಸ ದಾಖಲೆ ಬರೆದಿದೆ" ಎಂದರು.
5/9
ಉತ್ಸವದ ಭಾಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ, ನಾಳೆ ಕುಣಿಗಲ್ನ ಎಲ್ಲರ ಮನೆಗಳಿಗೆ 70 ಸಾವಿರ ಲಾಡು ಪ್ರಸಾದ ತಲುಪಲಿದೆ ಎಂದು ಘೋಷಿಸಲಾಯಿತು.
6/9
ನವೀನ್ ಸಜ್ಜು ಹಾಗೂ ಚಂದನ್ ಶೆಟ್ಟಿ ಗಾಯನಕ್ಕೆ ಮೈಮರೆತ ಕುಣಿಗಲ್ ಜನತೆ
7/9
ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಕಾಟೇರ ನಟಿ ಆರಾಧನಾಗೆ ಸನ್ಮಾನ
8/9
ನಟಿ ಮಾಲಾಶ್ರೀ ಅವರನ್ನು ಸನ್ಮಾನಿಸಿದ ಡಿಸಿಎಂ ಡಿಕೆ ಶಿವಕುಮಾರ್
9/9
ನಟಿ ಅನು ಪ್ರಭಾಕರ್ ಅವರನ್ನು ಸನ್ಮಾನಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್