Astro Tips: ಪ್ರತಿದಿನ ಈ ಮಂತ್ರ ಪಠಿಸುವುದರಿಂದ ಒತ್ತಡದಿಂದ ಮುಕ್ತರಾಗುತ್ತೀರಿ
ನೀವು ಸಮಸ್ಯೆಗಳ ನಡುವೆ ಸಿಲುಕಿಕೊಂಡಿದ್ದರೆ, ಹಣಕಾಸಿನ ಒತ್ತಡ ಎದುರಿಸುತ್ತಿದ್ದರೆ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಎನ್ನುವ ಭಾವನೆ ನಿಮ್ಮನ್ನು ಕಾಡುತ್ತಿದ್ದರೆ, ನೀವು ಪಠಿಸುವ ಕೆಲ ಮಂತ್ರ ಜಪವು ಪರಿಣಾಮಕಾರಿ ಪರಿಹಾರವಾಗಬಹುದು. ವಿಶೇಷವಾಗಿ ಈ ಐದು ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ, ಸಂತೋಷ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿನ ಅನೇಕ ತೊಂದರೆಗಳು ನಿಧಾನವಾಗಿ ದೂರವಾಗುತ್ತವೆ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಸಲಹೆಯಂತೆ ಯಾವ ಮಂತ್ರ ಪಠಣ ಮಾಡಬೇಕು? ಅದರಿಂದಾಗುವ ಪ್ರಯೋಜನವೇನು ಎಂಬಿತ್ಯಾದಿ ಮಾಹಿತಿ ತಿಳಿಯೋಣ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜ. 11: ಸನಾತನ ಹಿಂದೂ ಧರ್ಮದಲ್ಲಿ (Santhana Hindu Dharma) ಮಂತ್ರ ಜಪಕ್ಕೆ ಅಪಾರ ಮಹತ್ವವಿದೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವು ಪೂಜೆ, ಯಾಗ, ಹವನ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಭಾಗವಾಗಿದೆ. ಮಂತ್ರಗಳ ಶುದ್ಧ ಪಠಣವು ದೇವತೆಗಳನ್ನು ಸಂತೋಷಪಡಿಸುವುದರ ಜತೆಗೆ ಮನಸ್ಸಿನಲ್ಲಿರುವ ನಕಾರಾತ್ಮಕ ಚಿಂತನೆಗಳು ಮತ್ತು ಗೃಹದ ಅಶಾಂತಿಯನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಇದೆ.
ಇಂದಿನ ಆಧುನಿಕ ಹಾಗೂ ವೇಗದ ಜೀವನದಲ್ಲಿ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಂತ್ರ ಜಪವು ಪರಿಣಾಮಕಾರಿ ಪರಿಹಾರವಾಗಿ ಪರಿಗಣಿಸಲಾಗುತ್ತಿದೆ. ವಿಶೇಷವಾಗಿ ಮನೆಯಲ್ಲಿ ನಕಾರಾತ್ಮಕತೆಯ ಛಾಯೆ ಇದೆ ಎಂಬ ಭಾವನೆ ಮೂಡಿದರೆ, ನಿಯಮಿತ ಮಂತ್ರ ಪಠಣದಿಂದ ಶಾಂತಿ ಮತ್ತು ಸಂತೋಷವನ್ನು ಮರಳಿ ಪಡೆಯಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.
ನೀವು ಸಮಸ್ಯೆಗಳ ನಡುವೆ ಸಿಲುಕಿಕೊಂಡಿದ್ದರೆ, ಹಣಕಾಸಿನ ಒತ್ತಡ ಎದುರಿಸುತ್ತಿದ್ದರೆ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಎನ್ನುವ ಭಾವನೆ ನಿಮ್ಮನ್ನು ಕಾಡುತ್ತಿದ್ದರೆ, ನೀವು ಪಠಿಸುವ ಕೆಲ ಮಂತ್ರ ಜಪವು ಪರಿಣಾಮಕಾರಿ ಪರಿಹಾರವಾಗಬಹುದು. ವಿಶೇಷವಾಗಿ ಈ ಐದು ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ, ಸಂತೋಷ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿನ ಅನೇಕ ತೊಂದರೆಗಳು ನಿಧಾನವಾಗಿ ದೂರವಾಗುತ್ತವೆ. ಆದರೆ ಮಂತ್ರ ಜಪ ಮಾಡುವಾಗ ಉಚ್ಚಾರಣೆ ಸ್ಪಷ್ಟವಾಗಿರಬೇಕು ಹಾಗೂ ಮನಸ್ಸು ಶುದ್ಧವಾಗಿರಬೇಕು. ಆಗ ಮಾತ್ರ ಮಂತ್ರಗಳ ಸಂಪೂರ್ಣ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ.
ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಸಲಹೆಯಂತೆ (Astro Tips) ಯಾವ ಮಂತ್ರ ಪಠಣ ಮಾಡಬೇಕು..? ಅದರಿಂದಾಗುವ ಪ್ರಯೋಜನವೇನು ಎಂಬಿತ್ಯಾದಿ ಮಾಹಿತಿ ತಿಳಿಯೋಣ...
ನೆಮ್ಮದಿ ಹಾಗೂ ಅಭಿವೃದ್ಧಿಗಾಗಿ ಈ ಮಂತ್ರಗಳನ್ನ ಪಠಿಸಿ
ಒತ್ತಡ ಮುಕ್ತ ಜೀವನ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಕೆಳಗಿನ ಮಂತ್ರಗಳನ್ನು ಪಠಿಸುವುದು ಫಲಪ್ರದ ಎಂದು ನಂಬಲಾಗಿದೆ:
ಓಂ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ
ಸ್ವಸ್ತಿ ನಃ ಪೂಷಾ ವಿಶ್ವವೇದಾಃ
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ
ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾಂತಿಃ ಶಾಂತಿಃ ಶಾಂತಿಃ
ಈ ಮಂತ್ರಗಳನ್ನು ಬೆಳಗ್ಗೆ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ, ದೇವರ ಪೂಜೆ ಮಾಡಿ ಈ ಮಂತ್ರ ಪಠಿಸುವುದು ಉತ್ತಮ. ಶುದ್ಧ ನೀರಿನಿಂದ ತುಂಬಿದ ಕಲಶವನ್ನು ಇಟ್ಟು ಮಂತ್ರ ಜಪ ಮಾಡಿದ ಬಳಿಕ ಆ ನೀರನ್ನು ಮನೆಯ ಎಲ್ಲ ದಿಕ್ಕುಗಳಲ್ಲಿ ಸಿಂಪಡಿಸಿದರೆ, ಧನಾತ್ಮಕ ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಕೌಟುಂಬಿಕ ಕಲಹಗಳು ಕಡಿಮೆಯಾಗುತ್ತವೆ ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಶನಿ ದೇವರ ಅನುಗ್ರಹಕ್ಕಾಗಿ ಏನು ಮಾಡಬೇಕು? ಇಲ್ಲಿದೆ ವಿವರ
ಬುದ್ಧಿ ವೃದ್ಧಿಗೆ ವಿಶೇಷ ಮಂತ್ರ
“ಓಂ ಬುದ್ಧಿಪ್ರದಾಯೇ ನಮಃ”
ಈ ಮಂತ್ರವನ್ನು ಗಣೇಶನ ಪೂಜೆಯ ಸಂದರ್ಭದಲ್ಲಿ 108 ಬಾರಿ ಜಪಿಸುವುದು ಅತ್ಯಂತ ಲಾಭದಾಯಕವಾಗಿದೆ. ಗಣೇಶನಿಗೆ ಮೋದಕ, ಕೆಂಪು ಹೂವು ಮತ್ತು ದುರ್ವಾ ಅರ್ಪಿಸಿ, ತುಪ್ಪದ ದೀಪ ಬೆಳಗಿಸಿದ ಬಳಿಕ ಈ ಮಂತ್ರವನ್ನು ಪಠಿಸಬೇಕು. ಇದರಿಂದ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉಪಯುಕ್ತ ಮಂತ್ರವಾಗಿದೆ.
ರಕ್ಷಣಾ ಮಂತ್ರದಿಂದ ಸರ್ವತೋಮುಖ ರಕ್ಷಣೆ
ಜಲೇ ರಕ್ಷತು ವರಹಾಃ ಸ್ಥಳೇ ರಕ್ಷತು ವಾಮನಃ |
ಅಟವ್ಯಾಂ ನಾರಸಿಂಹಶ್ಚ ಸರ್ವತಃ ಪಾತು ಕೇಶವಃ ||
ಈ ಮಂತ್ರವನ್ನು ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಮಲಗುವ ಮುನ್ನ ಪಠಿಸಬಹುದು. ಎಲ್ಲ ದಿಕ್ಕುಗಳಿಂದ ರಕ್ಷಣೆ ದೊರಕಲೆಂದು ದೇವರನ್ನು ಪ್ರಾರ್ಥಿಸುವ ಈ ಮಂತ್ರವು ಭಯ, ಅಶಾಂತಿ ಮತ್ತು ದುಷ್ಟ ಶಕ್ತಿಯಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ.
ಸರಳ ಆದರೆ ಶಕ್ತಿಶಾಲಿ ಶಿವ ಮಂತ್ರ
ಓಂ ನಮಃ ಶಿವಾಯ
ಇದು ಶಿವನ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಂತ್ರ. ಶಿವಲಿಂಗದ ಮೇಲೆ ಜಲಾಭಿಷೇಕ ಮಾಡುವಾಗ ಈ ಮಂತ್ರವನ್ನು ಪಠಿಸಿದರೆ, ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಜತೆಗೆ ಮಾನಸಿಕ ಶಾಂತಿ, ಉತ್ತಮ ಆರೋಗ್ಯ ಮತ್ತು ಒತ್ತಡ ಮುಕ್ತ ಜೀವನಕ್ಕೆ ಇದು ಸಹಕಾರಿ.
ಶಾಸ್ತ್ರಗಳ ಪ್ರಕಾರ, ಮಂತ್ರಗಳನ್ನು ಸ್ಪಷ್ಟ ಉಚ್ಚಾರಣೆಯೊಂದಿಗೆ ಮತ್ತು ಶುದ್ಧ ಮನಸ್ಸಿನಿಂದ ಜಪಿಸಿದರೆ ಮಾತ್ರ ಅದರ ಪೂರ್ಣ ಫಲ ದೊರೆಯುತ್ತದೆ. ನಿಯಮಿತ ಮಂತ್ರ ಜಪವು ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮತೋಲನವನ್ನು ತರುವ ಮಾರ್ಗವೆಂದು ಸನಾತನ ಧರ್ಮ ವಿವರಿಸುತ್ತದೆ.