ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಗುರುವಾರ ಸಂಜೆ ಈ ಪರಿಹಾರಗಳನ್ನು ಮಾಡಿದರೆ ವಿಷ್ಣು-ಗುರುವಿನ ಕೃಪೆ ದೊರೆತು, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ!

ಗುರುವಾರವನ್ನು ಭಗವಾನ್ ವಿಷ್ಣು ಮತ್ತು ಬೃಹಸ್ಪತಿ ದೇವರಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಕೆಲವು ವಿಶೇಷ ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ, ಸುಖ-ಶಾಂತಿ, ಸಮೃದ್ಧಿ ಹಾಗೂ ದೇವರ ಅನುಗ್ರಹ ದೊರೆಯುತ್ತದೆ ಎನ್ನುವ ನಂಬಿಕೆ ಇದೆ.

ಗುರುವಾರ ಸಂಜೆ ತಪ್ಪದೇ ಮಾಡಿ ಈ ಕೆಲಸ ಮಾಡಿ!

ಜ್ಯೋತಿಷ್ಯ ಶಾಸ್ತ್ರ -

Profile
Sushmitha Jain Jun 25, 2026 10:21 AM

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Dharma) ಗುರುವಾರಕ್ಕೆ (Thursday) ವಿಶೇಷ ಮಹತ್ವವಿದೆ. ಈ ದಿನವನ್ನು ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಭಕ್ತಿಯಿಂದ ಪೂಜೆ, ಉಪವಾಸ ಹಾಗೂ ಕೆಲವು ಧಾರ್ಮಿಕ ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗಿ, ಸುಖ-ಶಾಂತಿ, ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಗುರುವಾರ ಸಂಜೆ ಮಾಡುವ ಕೆಲವು ಸರಳ ಉಪಾಯಗಳು ವಿಷ್ಣು ಹಾಗೂ ಗುರುವಿನ ಅನುಗ್ರಹವನ್ನು ಪಡೆಯಲು ಸಹಕಾರಿ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಶುಭಕರ ಪರಿಹಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಇಷ್ಟಾರ್ಥ ಸಿದ್ಧಿಗೆ ಈ ಉಪಾಯ

ಬಹಳ ದಿನಗಳಿಂದ ಯಾವುದಾದರೂ ಆಸೆ ನೆರವೇರದೆ ಇದ್ದರೆ, ಗುರುವಾರ ಸಂಜೆ ಒಂದು ರೂಪಾಯಿ ನಾಣ್ಯ, ಒಂದು ಬೆಲ್ಲದ ತುಂಡು ಹಾಗೂ ಏಳು ಅರಿಶಿನ ಉಂಡೆಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ದಾನ ಮಾಡುವ ಅಥವಾ ಪವಿತ್ರ ಸ್ಥಳದಲ್ಲಿ ಇರಿಸುವ ಪದ್ಧತಿ ಇದೆ. ಇದರಿಂದ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

ಬಾಳೆ ಗಿಡದ ಬಳಿ ನಾಣ್ಯ ಅರ್ಪಿಸಿ

ಗುರುವಾರ ಸೂರ್ಯಾಸ್ತದ ಬಳಿಕ ಬಾಳೆ ಗಿಡದ ಬುಡದಲ್ಲಿ ಒಂದು ಅಥವಾ ಐದು ರೂಪಾಯಿಯ ನಾಣ್ಯವನ್ನು ಸಮರ್ಪಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದು ಆರ್ಥಿಕ ಸ್ಥಿರತೆಗೆ ಸಹಾಯಕವಾಗುತ್ತದೆ ಎನ್ನಲಾಗುತ್ತದೆ.

ಗುರುವಿಗೆ ಬೆಲ್ಲ ಸಮರ್ಪಿಸಿ

ಗುರುವಾರದಂದು ಬೆಲ್ಲವನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಇದರಿಂದ ಗುರು ಗ್ರಹದ ಅನುಗ್ರಹದ ಜೊತೆಗೆ ಸೂರ್ಯ ಹಾಗೂ ಮಂಗಳನ ಆಶೀರ್ವಾದವೂ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಗೋಧಿ ಮತ್ತು ಬೆಲ್ಲ ದಾನ ಮಾಡಿ

ಗುರುವಾರ ದೇವಸ್ಥಾನದಲ್ಲಿ ಗೋಧಿ ಹಾಗೂ ಬೆಲ್ಲವನ್ನು ದಾನ ಮಾಡುವುದರಿಂದ ನಿಂತುಹೋಗಿರುವ ಕಾರ್ಯಗಳು ಮತ್ತೆ ವೇಗ ಪಡೆಯುತ್ತವೆ ಎನ್ನಲಾಗುತ್ತದೆ. ಇದು ಪುಣ್ಯಕರ ಕಾರ್ಯವಾಗಿಯೂ ಪರಿಗಣಿಸಲಾಗಿದೆ.

Astro Tips: ಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸುವುದಕ್ಕೂ ಇದೆ ನಿಯಮ; ಯಾವ ದೇವರಿಗೆ ಹೇಗೆ ಸಮರ್ಪಿಸಬೇಕು?; ಇಲ್ಲಿದೆ ಮಾಹಿತಿ

ಅಗತ್ಯವಿರುವವರಿಗೆ ಬೆಲ್ಲ ನೀಡಿ

ಮನೆ ನಿರ್ಮಾಣ ಅಥವಾ ಇತರ ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ, ಗುರುವಾರದಂದು ಬಡವರಿಗೆ ಅಥವಾ ಅಗತ್ಯವಿರುವವರಿಗೆ ಬೆಲ್ಲವನ್ನು ದಾನ ಮಾಡುವುದರಿಂದ ಶುಭಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

ಬಾಳೆಗಿಡದ ಬೇರುಗಳಿಗೆ ಬೆಲ್ಲ ಮತ್ತು ಬೇಳೆ ಅರ್ಪಿಸಿ

ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವವರು ಗುರುವಾರ ಬೆಳಗ್ಗೆ ಸ್ನಾನಾದಿಗಳ ನಂತರ ನೆನೆಸಿದ ಬೇಳೆ ಹಾಗೂ ಸ್ವಲ್ಪ ಬೆಲ್ಲವನ್ನು ಬಾಳೆಗಿಡದ ಬೇರುಗಳಿಗೆ ಅರ್ಪಿಸಬಹುದು. ಈ ಕ್ರಮವನ್ನು ನಿರಂತರವಾಗಿ ಕೆಲವು ಗುರುವಾರಗಳವರೆಗೆ ಮಾಡಿದರೆ ಹಣಕಾಸಿನ ತೊಂದರೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ

ಹಸುವಿಗೆ ಬೆಲ್ಲ ಮಿಶ್ರಿತ ಆಹಾರ ನೀಡಿ

ವೈವಾಹಿಕ ಜೀವನದಲ್ಲಿ ಅಡೆತಡೆಗಳು ಅಥವಾ ವಿವಾಹ ವಿಳಂಬವಾಗುತ್ತಿದ್ದರೆ, ಗುರುವಾರದಂದು ಹಿಟ್ಟಿನಲ್ಲಿ ಬೆಲ್ಲ ಬೆರೆಸಿ ಹಸುವಿಗೆ ತಿನ್ನಿಸುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ದಾಂಪತ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.