Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಪಪ್ಪಾಯ ಗಿಡ ಇದ್ದರೆ ಒಳ್ಳೆಯದೇ..? ಇಲ್ಲಿದೆ ಉತ್ತರ
Vastu tips for plant: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಸಿಗಳನ್ನು ನೆಡುವುದು, ಬೆಳಸುವುದರಿಂದ ಶುಭಕರ ಫಲಗಳನ್ನು ಪಡೆಯಬಹುದು ಹೇಳಲಾಗುತ್ತದೆ. ಆದರೆ ಹೆಚ್ಚಿನವರಿಗೆ ಮನೆಯಲ್ಲಿ ಹಾಗೇ ಮನೆಯ ಸುತ್ತಮುತ್ತ ಯಾವ ಗಿಡಗಳನ್ನು ಬೆಳಸಬೇಕು ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಸಿಕ್ಕ ಗಿಡಗಳನೆಲ್ಲ ತಂದು ನೆಟ್ಟು ಬಿಡುತ್ತಾರೆ. ಆದ್ರೆ ಕೆಲವೊಂದು ಗಿಡಗಳನ್ನು ಮನೆಯ ಮುಂದೆ ಬೆಳೆಸುವುದು ಸಮಸ್ಯೆಗೆ ಆಹ್ವಾನ ಕೊಟ್ಟಾಗೆ ಇದ್ದು, ಇದಕ್ಕೆ ಪಪ್ಪಾಯಿ ಗಿಡ ಹೊರತಾಗಿಲ್ಲ. ಹಾಗಾದ್ರೆ ಮನೆಯ ಮುಂದೆ ಪಪ್ಪಾಯಿ ಗಿಡ ಬೆಳೆಸುವುದು ಒಳ್ಳೆಯದಾಲ್ಲವಾ..? ಬೆಳಸಿದ್ರೆ ಏನಾಗುತ್ತಾದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮನೆಯ ಸಂತೋಷ ಹಾಳು ಮಾಡುತ್ತದೆ ಪಪ್ಪಾಯ ಗಿಡ -
ಕಾಲ ಉರುಳಿ, ಜೀವನ ಶೈಲಿ ಬದಲಾದರೂ ಇಂದಿಗೂ ನಮ್ಮ ಆಚಾರ - ವಿಚಾರಗಳು ಹಾಗೇ ಉಳಿದಿವೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರಾದಾಯವನ್ನು ಅಳವಡಿಸಿಕೊಂಡು ಇಂದಿಗೂ ಆಚರಣೆ ಮಾಡುತ್ತಿದ್ದೇವೆ. ಅವರು ನಂಬಿಕೊಂಡ ನಡೆಸಿಕೊಂಡ ಸಂಸ್ಕೃತಿಯನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಈ ವಾಸ್ತು ಶಾಸ್ತ್ರ(Vastu Shasthra) ಹೊರತಾಗಿಲ್ಲ. ಬಹಳ ಹಿಂದಿನಿಂದಲೂ ನಮ್ಮ ಪೂರ್ವಜರು ವಾಸ್ತು(Vastu)ವಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಮನೆ ಕಟ್ಟುವುದರಿಂದ ಹಿಡಿದು, ಅದರ ವಿನ್ಯಾಸ, ಬಣ್ಣ, ಯಾವ ಮೂಲೆ ಎಲ್ಲಿರಬೇಕು. ಯಾವ ದಿಕ್ಕಿನಲ್ಲಿ ಏನು ಬರಬೇಕು, ಯಾವ ವಸ್ತು ಇಡಬೇಕು, ಇಡಬಾರದು ಹೀಗೆ ಪ್ರತಿಯೊಂದನ್ನು ವಾಸ್ತು ಶಾಸ್ತ್ರದ ನಿಯಮದ(Vastu Tips) ಅನುಸಾರವಾಗಿ ಮಾಡುತ್ತಾ ಬಂದಿದ್ದೇವೆ.
ಆದರೆ ಕೆಲವೊಮ್ಮೆ ಅರಿವಿಗೆ ಬಾರದೇ ಕೆಲ ಅಚಾತುರ್ಯಗಳು ನಡೆದುಹೋಗಿ ಬಿಡುತ್ತವೆ. ವಾಸ್ತುವನ್ನು ಕಡೆಗಣಿಸಿ ಮನೆಯ ಅಂದವನ್ನು ಹೆಚ್ಚಿಸಲು ಎಂದು ತಂದ ಎಷ್ಟೋ ವಸ್ತುಗಳು ಅಶಾಂತಿಯನ್ನು ಸೃಷ್ಟಿಸಿ ಬಿಡುತ್ತದೆ. ಇದಕ್ಕೆ ಮನೆಯಲ್ಲಿ ನೆಡುವ ಸಸ್ಯಗಳು, ಸುತ್ತ ಇರುವ ಮರಗಳು ಹೊರತಾಗಿಲ್ಲ.
ಹೌದು ಕೆಲವರು ಶೋಪೀಸ್ ಆಗಿ ಕಳ್ಳಿ, ಕ್ಯಾಕ್ಟಸ್ ಮೊದಲಾದ ಮುಳ್ಳಿನ ಗಿಡಗಳನ್ನು ತರುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಸಸ್ಯಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಇದು ಮನೆಯ ಸಂತೋಷ ಮತ್ತು ಶಾಂತಿಯನ್ನು ಹಾಳು ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗುಲಾಬಿ ಗಿಡಗಳನ್ನು ಇರುವುದು ಅಶುಭವಾಗಿದೆ. ಇದನೆಲ್ಲಾ ಗಮನಿಸಿದಾಗ ಮತ್ಯಾವ ಗಿಡಗಳು ಇದೇ ಸಾಲಿಗೆ ಸೇರುತ್ತದೆ ಎಂಬ ಯೋಚನೆ ಬರುತ್ತದೆ. ಇದಕ್ಕೆ ಮಧುಮೇಹಕ್ಕೆ ರಾಮಬಾಣವಾಗಿರುವ ಪಪ್ಪಾಯಿ ಗಿಡವೂ(Papaya Tree) ಹೊರತಾಗಿಲ್ಲ. ಹಾಗಾಗಿ ನಾವಿಂದು ಮನೆಯಲ್ಲಿ ಪಪ್ಪಾಯಿ ಗಿಡ ನೆಡಬಹುದೇ..? ಇದ್ದರೇ ಯಾವ ದಿಕ್ಕಿನಲ್ಲಿರ ಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಈ ಸುದ್ದಿಯನ್ನೂ ಓದಿ: Vastu Tips: ಮನೆಯಲ್ಲಿ ಗೂಬೆ ವಿಗ್ರಹ ಇಡಬಹುದೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಈ ದಿಕ್ಕುಗಳಲ್ಲಿ ನೆಡಬಹದು
ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಅದನ್ನು ಬೆಳೆಸೋದು ಶುಭಕರ. ಸರಿಯಾದ ದಿಕ್ಕಿನಲ್ಲಿ ಪಪ್ಪಾಯ ಗಿಡ ಬೆಳೆಸಿದ್ರೆ ಸಕಾರಾತ್ಮಕ ಶಕ್ತಿ ಕಡಿಮೆ ಆಗೋದಿಲ್ಲ ಜೊತೆಗೆ ಕುಟುಂಬಸ್ಥರ ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ. ಹಾಗಾಗಿ ಪಪ್ಪಾಯ ಗಿಡ ಬೆಳೆಸುವ ಮುನ್ನ ನೀವು, ಅದರ ದಿಕ್ಕು, ವಾಸ್ತು ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳುವುದು ಉತ್ತಮ
ಎಲ್ಲಿ ಬೆಳಸಬಹುದು..?
ಇನ್ನು ಮೇಲೆ ಹೇಳಿದ್ದ ದಿಕ್ಕುಗಳ ಹೊರತಾಗಿ ಪಪ್ಪಾಯ ಗಿಡವನ್ನು ಬೆಳೆಸಲು ಇಚ್ಚಿಸುವವರು ಮನೆಯ ಹಿಂದೆ ಅಥವಾ ತೋಟದಲ್ಲಿ ಅದನ್ನು ಬೆಳಸಬಹುದು. ಇದರ ಹೊರತಾಗಿ ನಿಮ್ಮ ಮನೆ ಮುಂದೆ ಅದಾಗಿಯೇ ಪಪ್ಪಾಯ ಗಿಡ ಚಿಗುರಲು ಆರಂಭಿಸಿದ್ದರೆ ಅದನ್ನು ಹಿಂದು ಮುಂದೆ ಯೋಚಿಸದೇ ತಕ್ಷಣ ಕಿತ್ತು ಹಾಕಿ. ಯಾಕೆಂದರೆ ಪಪ್ಪಾಯ ಗಿಡದಲ್ಲಿ ಹಿರಿಯರು, ಪೂರ್ವಕರು ವಾಸ ಶುರು ಮಾಡುತ್ತಾರೆ ಎನ್ನುವ ನಂಬಿಕೆ ಇದ್ದು, ಪಿತೃಗೆ ಸಂಬಂಧಿಸಿದ ವಸ್ತು ಮನೆ ಮುಂದೆ ಇದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿಯೂ ಮನಸ್ತಾಪ - ಅಶಾಂತಿ ಮೂಡಲಿದೆ.
ಇದನ್ನೂ ಓದಿ: Vastu Tips: : ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಎಲ್ಲಿಡಬೇಕು ಗೊತ್ತಾ..?
ಮನೆ ಮುಂದೆ ಇರುವುದು ಶುಭ ಸಂಕೇತವಲ್ಲ
ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದೆ ಪಪ್ಪಾಯ ಗಿಡ ಇರುವುದು ಶುಭ ಸಂಕೇತವಲ್ಲ. ಪಪ್ಪಾಯ ಗಿಡ ಮನೆ ಮುಂದೆ ಇದ್ರೆ ಅನಿರೀಕ್ಷಿತ ಸಮಸ್ಯೆಗಳು ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಲಿದ್ದು, ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂಬ ನಂಬಿಕೆ ಇದೆ. ಇದು ಮನೆಯ ಶಾಂತಿ ಹಾಗೂ ಸಮೃದ್ಧಿ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಲಿದ್ದು, . ಮನೆಯಲ್ಲಿ ಸದಾ ಕಲಹ, ಅಶಾಂತಿ ಮನೆ ಮಾಡಿರುತ್ತದೆ. ಮನೆ ಮುಂದಿರುವ ಪಪ್ಪಾಯ ಗಿಡ, ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತದೆ.
ಇನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಪಪ್ಪಾಯ ಗಿಡವಿದ್ರೆ, ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಇದು ರೋಗವನ್ನು ಆಕರ್ಷಿಸುತ್ತದೆ. ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗ್ತಾರೆ.