ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ENG vs PAK: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಿಂದ ಬಾಬರ್‌ ಆಝಮ್‌ ಔಟ್‌!

ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ನಲ್ಲಿ ನಡೆಯಲಿರುವ ಮೊದಲನೇ ಟೆಸ್ಟ್‌ ಪಂದ್ಯದಿಂದ ಪಾಕಿಸ್ತಾನ ನಾಯಕ ಬಾಬರ್‌ ಆಝಮ್‌ ಹೊರಬಿದ್ದಿದ್ದಾರೆ. ಅವರ ಬದಲು ಮೊದಲನೇ ಪಂದ್ಯದಲ್ಲಿ ತಂಡವನ್ನು ಸಲ್ಮಾನ್‌ ಆಘಾ ಮುನ್ನಡೆಸಲಿದ್ದಾರೆ. ಈ ಬಗ್ಗೆ ಸರ್ಫರಾಝ್‌ ಖಾನ್‌ ಅವರು ಮಾಹಿತಿಯನ್ನು ನೀಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ನಿಂದ ಬಾಬರ್‌ ಆಝಮ್‌ ಔಟ್‌!

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ನಿಂದ ಬಾಬರ್‌ ಆಝಮ್‌ ಔಟ್‌. -

Profile
Ramesh Kote Aug 19, 2026 1:35 PM

ಲೀಡ್ಸ್‌: ಗಾಯದಿಂದ ಬಳಲುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಝಮ್‌ (Babar Azam) ಅವರು ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಿಂದ (ENG vs PAK) ಹೊರ ನಡೆದಿದ್ದಾರೆ. ಅವರು ಬೆಕೆನ್ಹ್ಯಾಮ್‌ನಲ್ಲಿ ಪ್ರೊಫೆಷನಲ್‌ ಕೌಂಟಿ ಕ್ಲಬ್‌ ಸೆಲೆಕ್ಟ್‌ ಇಲೆವೆನ್‌ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಬಾಬರ್‌ ಆಝಮ್‌ ಅವರ ಬಲಗೈಗೆ ಗಾಯವಾಗಿತ್ತು. ಇದರ ಪರಿಣಾಮ ಅವರು ಬ್ಯಾಟಿಂಗ್‌ನಿಂದ ರಿಟೈರ್‌ ಹರ್ಟ್‌ ಆಗಿದ್ದರು ಹಾಗೂ ತದನಂತರ ಪಂದ್ಯದಿಂದ ಹೊರ ನಡೆದಿದ್ದರು. ಅವರು ಇನ್ನೂ ಗುಣಮುಖರಾಗದ ಕಾರಣ ಮೊದಲನೇ ಟೆಸ್ಟ್‌ ಪಂದ್ಯದಿಂದ ಹೊರ ನಡೆದಿದ್ದಾರೆ.

ಬಾಬರ್‌ ಆಝಮ್‌ ಅವರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ತಂಡವನ್ನು ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಸಲ್ಮಾನ್‌ ಅಲಿ ಆಘಾ ಅವರು ಮುನ್ನಡೆಸಲಿದ್ದಾರೆ. ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್‌ ಹೆಡ್‌ ಕೋಚ್‌ ಸರ್ಫರಾಝ್‌ ಖಾನ್‌ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

"ಪಾಕಿಸ್ತಾನ ನಾಯಕ ಬಾಬರ್‌ ಆಝಮ್‌ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗಾಗಿ ಮೊದಲನೇ ಪಂದ್ಯದಲ್ಲಿ ತಂಡವನ್ನು ಸಲ್ಮಾನ್‌ ಆಘಾ ಅವರು ಮುನ್ನಡೆಸಲಿದ್ದಾರೆ," ಎಂದು ಸರ್ಫರಾಝ್‌ ಖಾನ್‌ ಅವರು ತಿಳಿಸಿದ್ದಾರೆ.

IND vs SL: ಔಟ್‌ or ನಾಟ್‌ಔಟ್‌? ವಿವಾದ ಹುಟ್ಟು ಹಾಕಿದ ಧ್ರುವ್‌ ಜುರೆಲ್‌ ಪಡೆದ ಲೋ ಕ್ಯಾಚ್‌!

31ರ ವಯಸ್ಸಿನ ಬಾಬರ್‌ ಆಝಮ್‌ ಸೋಮವಾರ ಹೆಡಿಂಗ್ಲಿಯಲ್ಲಿ ಸ್ವಲ್ಪ ಸಮಯ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಆದರೆ ನೆಟ್ಸ್‌ನಲ್ಲಿ ಅವರು ಕಳೆದ ಸೀಮಿತ ಸಮಯವು ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ಫಿಟ್ ಎಂದು ಘೋಷಿಸಲು ಸಾಧ್ಯವಾಗಲಿಲ್ಲ. ಟೀಮ್‌ ಮ್ಯಾನೇಜ್‌ಮೆಂಟ್‌ ಅವರ ವೈದ್ಯಕೀಯ ಸ್ಥಿತಿಯನ್ನು ಮತ್ತೊಂದು ದಿನ ಪರಿಶೀಲಿಸಲು ಬಯಸಿತ್ತು. ಅವರನ್ನು ಪರಿಶೀಲಿಸಿದ ಬಳಿಕ ಅವರನ್ನು ಕಣಕ್ಕಿಳಿಸುವ ಅಪಾಯ ತೆಗೆದುಕೊಳ್ಳದಿರಲು ನಿರ್ಧರಿಸಲಾಗಿದೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಾಬರ್‌ ಆಝಮ್‌ ಸ್ಥಾನಕ್ಕೆ ಯಾರು?

ಸೌದ್ ಶಕೀಲ್ ಮತ್ತು ಅವೈಸ್ ಜಫರ್ ಪಾಕಿಸ್ತಾನದ ಮಧ್ಯಮ ಕ್ರಮಾಂಕಕ್ಕೆ ಪ್ರಮುಖ ಆಯ್ಕೆಗಳಾಗಿ ಉಳಿದಿದ್ದಾರೆ. ಶಕೀಲ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರೆ, ಜಫರ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಚೊಚ್ಚಲ ಪಂದ್ಯವಾಡಿದ್ದರು. ಇದಾದ ಬಳಿಕ ಬೆಕೆನ್ಹ್ಯಾಮ್‌ನಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಜಫರ್ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಅವರ ಉತ್ತಮ ಫಾರ್ಮ್, ಬಾಬರ್ ಆಝಮ್‌ ಅವರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ತಂಡದ ಸಂಯೋಜನೆ ರೂಪಿಸುವಾಗ ಅವರಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ರಾಹುಲ್‌ ದ್ರಾವಿಡ್‌ ಜತೆ ಎಲೈಟ್‌ ಪಟ್ಟಿ ಸೇರಿದ ದೇವದತ್ ಪಡಿಕ್ಕಲ್

ಇದರ ನಡುವೆ ಶಾನ್ ಮಸೂದ್ ಅವರ ಆಯ್ಕೆಯೂ ಮತ್ತೊಂದು ಗೊಂದಲದ ವಿಷಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಚೆಂಡಿನ ಹೊಡೆತಕ್ಕೆ ಸಿಲುಕಿ ಮಸೂದ್ ಅವರ ಬೆರಳು ಮುರಿದಿತ್ತು. ಹೀಗಾಗಿ ಅವರು ಎರಡನೇ ಟೆಸ್ಟ್ ಪಂದ್ಯವನ್ನಷ್ಟೇ ಅಲ್ಲದೆ, ಬೆಕೆನ್ಹ್ಯಾಮ್‌ನಲ್ಲಿ ನಡೆದ ಅಭ್ಯಾಸ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು. ಅವರ ಫಿಟ್‌ನೆಸ್ ಮತ್ತು ಲಭ್ಯತೆಯನ್ನು ಪರಿಗಣಿಸಿ ಪಾಕಿಸ್ತಾನ ತಂಡದ ಆಯ್ಕೆ ಮಂಡಳಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.