ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

ಗುಜರಾತ್‌ ಟೈಟನ್ಸ್‌ ತಂಡದ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮಾರ್ಟೆಸ್ಟ್‌ ಕ್ರಿಕೆಟ್‌ ಮೈಂಡ್‌ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಯೀನ್‌ ಅಲಿ ಆರಿಸಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್‌ ಅನ್ನು ಅಗ್ರ ಸ್ಥಾನ ಏರಿಸಿದ್ದ ಎಂಎಸ್‌ ಧೋನಿಯನ್ನು ಕಡೆಗಣಿಸಿದ್ದಾರೆ.

ಭಾರತೀಯ ಕ್ರಿಕೆಟ್‌ನ ಸ್ಮಾರ್ಟೆಸ್ಟ್‌ ಮೈಂಡ್‌ ಹೆಸರಿಸಿದ ಮೊಯೀನ್‌ ಅಲಿ!

ಭಾರತೀಯ ಕ್ರಿಕೆಟ್‌ನ ಸ್ಟಾರ್ಟೆಸ್ಟ್‌ ಮೈಂಡ್‌ ಹೆಸರಿಸಿದ ಮೊಯೀನ್‌ ಅಲಿ. -

Profile
Ramesh Kote Aug 3, 2026 6:05 PM

ನವದೆಹಲಿ: ಭಾರತದ ಮಾಜಿ ವೇಗಿ ಹಾಗೂ ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್ ಆಶಿಶ್‌ ನೆಹ್ರಾ (Ashish Nehra) ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಸ್ಮಾರ್ಟೆಸ್ಟ್‌ ಮೈಂಡ್‌ ಎಂದು ಇಂಗಲೆಂಡ್‌ ಮಾಜಿ ಆಲ್‌ರೌಂಡರ್‌ ಮೊಯೀನ್‌ ಅಲಿ (Moeen Ali) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ಮೂಲಕ ಎಂಎಸ್ ಧೋನಿ (MS Dhoni) ಸೇರಿದಂತೆ ಕ್ರಿಕೆಟ್‌ನ ಹಲವು ದಿಗ್ಗಜರನ್ನು ಕೈಬಿಟ್ಟ ಅಲಿ, ಕೇವಲ ಟೀಮ್‌ ಇಂಡಿಯಾ ಮಾಜಿ ವೇಗಿ ಆಶಿಶ್‌ ನೆಹ್ರಾ ಅವರನ್ನು ಆರಿಸುವ ಮೂಲಕ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಂಎಸ್ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಹಾಗೂ ತಮ್ಮ ವೃತ್ತಿಜೀವನದಲ್ಲಿ ಹಲವು ಖ್ಯಾತ ನಾಯಕರು ಮತ್ತು ಕೋಚ್‌ಗಳ ಮಾರ್ಗದರ್ಶನದಲ್ಲಿ ಆಡಿದ್ದ ಮೊಯೀನ್ ಅಲಿ, ಆಟದ ಬಗ್ಗೆ ನೆಹ್ರಾ ಹೊಂದಿರುವ ಆಳವಾದ ಅರಿವು ಮತ್ತು ಪ್ರತಿಯೊಂದು ಪಂದ್ಯದ ಪರಿಸ್ಥಿತಿಯನ್ನು ನಿಖರವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಲ್ಲರಿಗಿಂತ ವಿಭಿನ್ನವಾಗಿದೆ ಎಂದು ಗುಣಗಾನ ಮಾಡಿದ್ದಾರೆ.

2018 ಮತ್ತು 2019ರಲ್ಲಿ ಎರಡು ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಮೊಯೀನ್‌ ಅಲಿ ಹಾಗೂ ಆಶಿಶ್‌ ನೆಹ್ರಾ ಇಬ್ಬರೂ ಕಾರ್ಯನಿರ್ವಹಿಸಿದ್ದರು. ಮೊಯೀನ್‌ ಅಲಿ ಆಟಗಾರನಾಗಿ ಆಡಿದ್ದರೆ, ನೆಹ್ರಾ ಬೌಲಿಂಗ್‌ ಕೋಚ್‌ ಜೊತೆಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಆಶಿಶ್‌ ಅವರ ಕಾರ್ಯತಂತ್ರ ಹಾಗೂ ಆಟಗಾರರ ನಿರ್ವಹಣೆಯ ಕೌಶಲವನ್ನು ಇಂಗ್ಲೆಂಡ್‌ ಮಾಜಿ ಆಲ್‌ರೌಂಡರ್‌ ಅತ್ಯಂತ ಸನಿಹದಲ್ಲಿ ಕಂಡಿದ್ದರು.

ʻಮಗ ಡಾಕ್ಟರ್‌ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್‌ ನಬಿ ಯಾರು?

"ಪಂದ್ಯದ ಪ್ರತಿಯೊಂದು ಸನ್ನಿವೇಶವನ್ನು ಚೆನ್ನಾಗಿ ಅರಿತುಕೊಂಡಿರುವ ವ್ಯಕ್ತಿ ನನ್ನ ಪ್ರಕಾರ ಕ್ರಿಕೆಟ್‌ ಅತ್ಯಂತ ಸ್ಮಾರ್ಟೆಸ್ಟ್‌ ಮೈಂಡ್‌," ಎಂದು ಪಾಡ್‌ಕಾಸ್ಟ್‌ವೊಂದರಲ್ಲಿ ಮೊಯೀನ್‌ ಅಲಿ ಹೇಳಿಕೊಂಡಿದ್ದಾರೆ.

"ಯಾವುದೇ ಪರಿಸ್ಥಿತಿ ಬಂದರೂ ಅದಕ್ಕೆ ಉತ್ತರ ಅಥವಾ ಒಂದು ಸ್ಪಷ್ಟವಾದ ಆಲೋಚನೆ ಅವರ ಬಳಿ ಇರುತ್ತದೆ. ಆಟದ ಪ್ರತಿಯೊಂದು ಅಂಶದ ಬಗ್ಗೆ ಅವರು ಆಳವಾಗಿ ಚರ್ಚಿಸುತ್ತಾರೆ. ಒಬ್ಬ ಆಟಗಾರ ಏಕೆ ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಮತ್ತೊಬ್ಬ ಏಕೆ ಯಶಸ್ವಿಯಾಗಿದ್ದಾನೆ, ನಿರ್ದಿಷ್ಟ ಸಂದರ್ಭದಲ್ಲೇನು ಮಾಡಬೇಕು, ಮುಂದೆ ಏನಾಗಬಹುದು ಎಂಬುದರ ಬಗ್ಗೆ ಅವರು ಅತ್ಯಂತ ಸ್ಪಷ್ಟವಾದ ವಿಶ್ಲೇಷಣೆ ನೀಡುತ್ತಾರೆ," ಎಂದು ಆಶಿಶ್‌ ನೆಹ್ರಾ ಅವರನ್ನು ಮೊಯೀನ್ ಅಲಿ ಶ್ಲಾಘಿಸಿದ್ದಾರೆ.

ಆಶಿಶ್‌ ನೆಹ್ರಾ ಅವರ ಅಭಿಪ್ರಾಯಗಳು ಕೇವಲ ಊಹೆಗಳ ಮೇಲೆ ಆಧಾರಿತವಾಗಿರುವುದಿಲ್ಲ. ಅವುಗಳ ಹಿಂದೆ ಅಂಕಿಅಂಶಗಳು, ಸಾಕ್ಷ್ಯಗಳು ಹಾಗೂ ಅಪಾರ ಅನುಭವ ಇರುತ್ತದೆ ಎಂದು ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಮೊಯೀನ್ ಅಲಿ ಹೇಳಿದ್ದಾರೆ.

IND vs SL ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪರ ಕುಲ್ದೀಪ್‌ ಯಾದವ್‌ ಆಡಬೇಕೆಂದ ದೀಪ್‌ ದಾಸ್‌ಗುಪ್ತಾ!

"ಅವರಲ್ಲಿ ವಿಶೇಷವಾದ ಗುಣವಿದೆ. ಅವರು ಹೇಳುವ ಪ್ರತಿಯೊಂದು ವಿಚಾರದ ಹಿಂದೆಯೂ ಅಂಕಿಅಂಶ ಅಥವಾ ಸ್ಪಷ್ಟವಾದ ಸಾಕ್ಷ್ಯ ಇರುತ್ತದೆ. ಈ ಹಿಂದೆ ಏನಾಯಿತು, ಅದರಿಂದ ಏನು ಕಲಿಯಬಹುದು ಮತ್ತು ಅದೇ ಕಾರಣಕ್ಕೆ ಮುಂದೇನು ಸಂಭವಿಸಬಹುದು ಎಂಬುದನ್ನು ಅವರು ತಾರ್ಕಿಕವಾಗಿ ವಿವರಿಸುತ್ತಾರೆ," ಎಂದು ಆರ್‌ಸಿಬಿ ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

"ಆದ್ದರಿಂದ ನಾನು ಹೇಳುವ ಹೆಸರು ಆಶೀಷ್ ನೆಹ್ರಾ. ಅವರು ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್. ನಾನು ಆರ್‌ಸಿಬಿಯಲ್ಲಿ ಎರಡು ವರ್ಷ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕ್ರಿಕೆಟ್ ಬುದ್ಧಿವಂತಿಕೆಯ ವಿಷಯಕ್ಕೆ ಬಂದರೆ, ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ಸಂಪೂರ್ಣವಾಗಿ ಗೊತ್ತಿದೆ. ಉತ್ತಮ ತಂಡದ ವಾತಾವರಣವನ್ನು ಹೇಗೆ ನಿರ್ಮಿಸಬೇಕು, ಆಟಗಾರರು, ಕೋಚ್‌ಗಳು ಹಾಗೂ ಇತರರೊಂದಿಗೆ ಹೇಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಅತ್ಯುತ್ತಮ ಅರಿವು ಇದೆ. ಅವರು ನಿಜಕ್ಕೂ ಅದ್ಭುತ ಕ್ರಿಕೆಟ್ ಮೈಂಡ್‌," ಎಂದು ಮೊಯೀನ್ ಅಲಿ ಗುಣಗಾನ ಮಾಡಿದ್ದಾರೆ.

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಭುವನೇಶ್ವರ್‌ ಕುಮಾರ್‌!

ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆಶಿಶ್‌ ನೆಹ್ರಾ ಅವರು ಕೋಚಿಂಗ್‌ ವೃತ್ತಿ ಜೀವನದಲ್ಲಿ ಹಂತ ಹಂತವಾಗಿ ಯಶಸ್ವಿಯಾಗುತ್ತಾ ಬಂದಿದ್ದಾರೆ. ಅವರು ಮೊದಲ ಬಾರಿ ಆರ್‌ಸಿಬಿ ತಂಡದಲ್ಲಿ ಕೋಚಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ, 2022ರಿಂದ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಅವರು ಗಮನಾರ್ಹ ಕೆಲಸವನ್ನು ಮಾಡುತ್ತಿದ್ದಾರೆ. ಅವರೆ ಮಾರ್ಗದರ್ಶನದಲ್ಲಿ ಜಿಟಿ, ತನ್ನ ಮೊದಲ ಆವೃತ್ತಿಯಲ್ಲಿಯೇ ಚೊಚ್ಚಲ ಚಾಂಪಿಯನ್‌ ಆಗಿತ್ತು.