ʻಈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗಿಂತ ಜಾಸ್ತಿ ರನ್ ಗಳಿಸುತ್ತಾರೆʼ: ಸುರೇಶ್ ರೈನಾ ಭವಿಷ್ಯ!
ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಶ್ಲಾಘಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಜಡೇಜಾ ಮುರಿಯಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ.

ರವೀಂದ್ರ ಜಡೇಜಾಗೆ ಸುರೇಶ್ ರೈನಾ ಮೆಚ್ಚುಗೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುರೇಶ್ ರೈನಾ (Suresh Raina) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಮುಗಿದಿದ್ದ ಮೂರನೇ ಟೆಸ್ಟ್ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಿ ರವೀಂದ್ರ ಜಡೇಜಾ 181 ಎಸೆತಗಳಲ್ಲಿ ಅಜೇಯ 61 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡದ ಕಾರಣ ಭಾರತ ತಂಡ ಈ ಪಂದ್ಯದಲ್ಲಿ 22 ರನ್‌ಗಳಿಂದ ಸೋಲು ಅನುಭವಿಸಿತ್ತು.
ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ರವೀಂದ್ರ ಜಡೇಜಾ ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದರು. ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಅಂದಹಾಗೆ ರವೀಂದ್ರ ಜಡೇಹಾ ಆಟವನ್ನು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಸುರೇಶ್ ರೈನಾ ಹೋಲಿಕೆ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಹೆಚ್ಚು ರನ್‌ಗಳನ್ಜು ರವೀಂದ್ರ ಜಡೇಜಾ ಕಲೆ ಹಾಕಲಿದ್ದಾರೆಂದು ರೈನಾ ಭವಿಷ್ಯ ನುಡಿದಿದ್ದಾರೆ.
ENG vs IND: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ 19 ವರ್ಷದ ಏಷ್ಯನ್ ದಾಖಲೆ ಮೇಲೆ ಕಣ್ಣಿಟ್ಟ ಶುಭ್‌ಮನ್ ಗಿಲ್
ಸ್ಪೋರ್ಟ್ಸ್ ತಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ,"ಅವರು (ರವೀಂದ್ರ ಜಡೇಜಾ) ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ನೀವು ಅವರು ಗಳಿಸಿದ ಅರ್ಧಶತಕಗಳನ್ನು ನೋಡಿ. ಅಲ್ಲದೆ, ಅವರು ಟೆಸ್ಟ್‌ನಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಅವರು ತಮ್ಮ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೊಡುಗೆ ನೀಡುತ್ತಾರೆ. ಅವರು ಯಾವುದೇ ಪರಿಸ್ಥಿತಿಯಿಂದ ತಂಡವನ್ನು ರಕ್ಷಿಸಬಲ್ಲರು. ಒಂದು ಹಂತದಲ್ಲಿ ನಾವು 100 ರನ್‌ಗಳಿಂದ ಸೋಲುತ್ತೇವೆ ಎಂದು ತೋರುತ್ತಿತ್ತು, ಆದರೆ ಅವರಲ್ಲಿ ಆ ಹೋರಾಟದ ಮನೋಭಾವವಿದೆ."
ಇಂಗ್ಲೆಂಡ್ ನೆಲದಲ್ಲಿ ರವೀಂದ್ರ ಜಡೇಜಾ ಆಡಿದ 29 ಇನಿಂಗ್ಸ್‌ಗಳಲ್ಲಿ 969 ರನ್‌ಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಆಡಿದ 33 ಟೆಸ್ಟ್ ಇನಿಂಗ್ಸ್‌ಗಳಿಂದ 1096 ರನ್‌ಗಳನ್ನು ಕಲೆ ಹಾಕಿದ್ದಾರೆ. ಅಂದ ಹಾಗೆ ರವೀಂದ್ರ ಜಡೇಜಾ ಇಂಗ್ಲೆಂಡ್‌ನಲ್ಲಿ ಒಂದು ಶತಕ ಹಾಗೂ ಏಳು ಶತಕಗಳನ್ನು ಬಾರಿಸಿದ್ದರೆ, ಕೊಹ್ಲಿ ಎರಡು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಜಡ್ಡು 109ರ ಸರಾಸರಿಯಲ್ಲಿ 327 ರನ್‌ಗಳನ್ನು ಗಳಿಸಿದ್ದಾರೆ.
ENG vs IND: ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ; ಆಲ್‌ರೌಂಡರ್ ಸರಣಿಯಿಂದ ಔಟ್!
1-0 ಹಿನ್ನಡೆಯಲ್ಲಿರುವ ಭಾರತ
ಮೂರು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಟೆಸ್ಟ್ ಸರಣಿಯಲ್ಲಿ 1-3 ಹಿನ್ನಡೆಯನ್ನು ಅನುಭವಿಸಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಎರಡನೇ ಟೆಸ್ಟ್ ಪಂದ್ಯದಲ್ಲಿ 336 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಈ ಸರಣಿಯಲ್ಲಿ ಮೊದಲು ಗೆಲುವು ದಖಲಿಸಿತ್ತು. ಆದರೆ, ಮೂರನೇ ಟೆಸ್ಟ್‌ನಲ್ಲಿ ಭಾರತ ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇದೀಗ ಜುಲೈ 23 ರಂದು ಲಂಡನ್ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿದೆ.