ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಐಪಿಎಲ್‌ನಲ್ಲಿ ತಾನು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಆರಿಸಿದ ರವಿ ಬಿಷ್ಣೋಯ್!

ಭಾರತ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಸ್ಪಿನ್ನರ್‌ ರವಿ ಬಿಷ್ಣೋಯ್‌ ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಾವು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಹೆಸರಿಸಿದ್ದಾರೆ.

ತಾನು ಎದುರಿಸಿದ ಕಠಿಣ ಬ್ಯಾಟರ್‌ ಆರಿಸಿದ ರವಿ ಬಿಷ್ಣೋಯ್‌!

ಅಭಿಷೇಕ್‌ ಶರ್ಮ ಅವರನ್ನು ಶ್ಲಾಘಿಸಿದ ರವಿ ಬಿಷ್ಣೋಯ್‌. -

Profile Ramesh Kote Sep 1, 2025 1:53 PM

ನವದೆಹಲಿ: ಭಾರತ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ (Luckow Super Ginatsn) ತಂಡದ ಸ್ಪಿನ್ನರ್‌ ರವಿ ಬಿಷ್ಣೋಯ್‌ (Ravi Bishnoi) ಅವರು ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ತಾನು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಅವರು ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ ಅವರನ್ನು ಕಡೆಗಣಿಸಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಆರಿಸಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿಯೇ ಅಭಿಷೇಕ್‌ ಶರ್ಮಾ ಅವರು, ರವಿ ಬಿಷ್ಣೋಯ್‌ ಅವರಿಗೆ ಸತತವಾಗಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದರು.

ಒಟ್ಟಾರೆ ಕಳೆದ ಐಪಿಎಲ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಅವರು ಲೆಗ್‌ ಸ್ಪಿನ್ನರ್‌ ಎದುರು ಆಡಿದ 8 ಎಸೆತಗಳಲ್ಲಿ 37 ರನ್‌ಗಳನ್ನು ದಾಖಲಿಸಿದ್ದರು. ಅವರು ರವಿ ಬಿಷ್ಣೋಯ್‌ ಅವರ ವಿರುದ್ಧ 462.5ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳನ್ನು ಸಿಡಿಸಿದ್ದಾರೆ. ಸೋಮವಾರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ರವಿ ಬಿಷ್ಣೋಯ್‌ಗೆ ತಾವು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಕೇಳಲಾಯಿತು. ಇದಕ್ಕೆ ಲೆಗ್‌ ಸ್ಪಿನ್ನರ್‌ ಪ್ರತಿಕ್ರಿಯಿಸಿದ್ದಾರೆ.

Hockey Asia Cup 2025: ಜಪಾನ್‌ ವಿರುದ್ದ ಗೆದ್ದು ಸೂಪರ್‌ ಫೋರ್‌ಗೆ ಅರ್ಹತೆ ಪಡೆದ ಭಾರತ!

"ಪ್ರಸ್ತುತ ಅಭಿಷೇಕ್‌ ಶರ್ಮಾ ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರ ಎದುರು ಬೌಲಿಂಗ್‌ ಮಾಡುವಾಗ, ನಾನು ಹೆಚ್ಚುವರಿಯಾಗಿ ಏನಾದರೂ ಮಾಡಬೇಕೆಂದು ನನಗೆ ಅನಿಸುತ್ತಿತ್ತು. ಲೆಗ್‌ ಸ್ಪಿನ್ನರ್‌ ಆಗಿ ನಾನು ಹೇಳುವುದಾದರೆ, ಅವರು ಉತ್ತಮವಾಗಿ ಬ್ಯಾಟ್‌ ಮಾಡುತ್ತಾರೆ. ಆಫ್‌ ಸೀಸನ್‌ನಲ್ಲಿ ಅವರು ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಾರೆ. ಅದರಂತೆ ಅವರು ಪಂದ್ಯದಲ್ಲಿ ಏನು ಮಾಡುತ್ತಾರೆಂದು ನೀವು ನೋಡಬಹುದು. ಅವರ ವಿರುದ್ಧ ಬೌಲ್‌ ಮಾಡುವಾಗಲೆಲ್ಲಾ ನಾನು ಯಾವ ರೀತಿ ಸುಧಾರಿಸಿಕೊಳ್ಳಬೇಕೆಂದು ಯೋಚಿಸುತ್ತೇನೆ. ಈ ರೀತಿಯ ಬ್ಯಾಟ್ಸ್‌ಮನ್‌ಗಳ ಎದುರು ಹೇಗೆ ನಾನು ಉತ್ತಮವಾಗಬೇಕೆಂಬ ಕಡೆಗೆ ಸದಾ ಗಮನವನ್ನು ಹರಿಸುತ್ತೇನೆ," ಎಂದು ರವಿ ಬಿಷ್ಣೋಯ್‌ ತಿಳಿಸಿದ್ದಾರೆ.

ಅಭಿಷೇಕ್ ಶರ್ಮಾ ಭಾರತ ತಂಡವನ್ನು 17 ಟಿ20ಐಗಳಲ್ಲಿ ಪ್ರತಿನಿಧಿಸಿದ್ದಾರೆ ಹಾಗೂ 33.43ರ ಸರಾಸರಿ ಮತ್ತು 193.84 ಸ್ಟ್ರೈಕ್ ರೇಟ್‌ನಲ್ಲಿ 535 ರನ್ ಗಳಿಸಿದ್ದಾರೆ. ಅವರ ಗಳಿಕೆಯಲ್ಲಿ ಎರಡು ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿವೆ.

Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು

ಯಶಸ್ವಿ ಜೈಸ್ವಾಲ್‌ಗೆ ಬಿಷ್ಣೋಯ್‌ ಮೆಚ್ಚುಗೆ

ಇದೇ ಪಾಡ್‌ಕಾಸ್ಟ್‌ನಲ್ಲಿ ರವಿ ಬಿಷ್ಣೋಯ್‌ ಅವರು ಯಶಸ್ವಿ ಜೈಸ್ವಾಲ್‌ ಅವರನ್ನು ಶ್ಲಾಘಿಸಿದರು. ಸ್ಥಿರವಾಗಿ ರನ್‌ ಗಳಿಸುವ ಎಡಗೈ ಬ್ಯಾಟ್ಸ್‌ಮನ್‌ನ ಸಾಮರ್ಥ್ಯವನ್ನು ಲೆಗ್‌ ಸ್ಪಿನ್ನರ್‌ ಹೊಗಳಿದ್ದಾರೆ.

"ನೀವು ನೋಡಿರಬೇಕು, ಅಂಡರ್-19 ಟೂರ್ನಿಯಲ್ಲಿ ಅವರು ಯಾವಾಗಲೂ ಸರಣಿ ಶ್ರೇಷ್ಠ ಆಟಗಾರರಾಗಿದ್ದರು. ಅವರು ಆಡಿದ ರೀತಿ, ಫೈನಲ್‌ನಲ್ಲಿಯೂ ಸಹ ಅವರು ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದ್ದರು. ಈ ಇನಿಂಗ್ಸ್‌ ಅವರನ್ನು ಯಾವಾಗಲೂ ಎದ್ದು ಕಾಣುವಂತೆ ಮಾಡಿದೆ. ಏಕೆಂದರೆ ಅವರು ಆಡುವಾಗ, ನೀವು ಅವರನ್ನು ಮಾತ್ರ ನೋಡುತ್ತೀರಿ, ಅವರ ಸುತ್ತಲೂ ಬೇರೆ ಯಾರೂ ಇಲ್ಲ. ಅದು ಅವರ ಕಲೆ, ಮತ್ತು ಅವರ ಆಟದ ಮೇಲಿನ ಅವರ ನಿಯಂತ್ರಣ ಅತ್ಯುತ್ತಮವಾಗಿದೆ," ಎಂದು ರವಿ ಬಿಷ್ಣೋಯ್‌ ತಿಳಿಸಿದ್ದಾರೆ.