IND vs ENG: ʻಇಂಗ್ಲೆಂಡ್ ಪರ ವೀರೇಂದ್ರ ಸೆಹ್ವಾಗ್ಗೆ ಬೆನ್ ಡಕೆಟ್ ಉತ್ತರ ನೀಡಿದ್ದಾರೆʼ-ಡೇವಿಡ್ ಲಾಯ್ಡ್!
David Lloyd praises Ben Duckett: ಭಾರತದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಬೆನ್ ಡಕೆಟ್ ಅವರನ್ನು ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಮುಕ್ತಕಠದಿಂದ ಗುಣಗಾನ ಮಾಡಿದ್ದಾರೆ. ಶತಕ ಸಿಡಿಸುವ ಮೂಲಕ ಡಕೆಟ್, ಇಂಗ್ಲೆಂಡ್ ಪರ ವೀರೇಂದ್ರ ಸೆಹ್ವಾಗ್ಗೆ ಉತ್ತರ ನೀಡಿದ್ದಾರೆ ಎಂದು ಲಾಯ್ಡ್ ತಿಳಿಸಿದ್ದಾರೆ.

ಬೆನ್ ಡಕೆಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೇವಿಡ್ ಲಾಯ್ಡ್.

ಲೀಡ್ಸ್: ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡದ ವಿರುದ್ದ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಬೆನ್ ಡಕೆಟ್ (Ben Duckett) ಅವರನ್ನು ಮಾಜಿ ಆರಂಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ಗೆ ದಿಗ್ಗಹ ಡೇವಿಡ್ ಲಾಯ್ಡ್ (David Lloyd) ಹೋಲಿಕೆ ಮಾಡಿದ್ದಾರೆ. ಮಂಗಳವಾರ ಮೊದಲನೇ ಟೆಸ್ಟ್ ಪಂದ್ಯದ ಐದನೇ ದಿನ ಡಕೆಟ್ ತಮ್ಮ ವೃತ್ತಿ ಜೀವನದ ಸ್ಮರಣೀಯ ಇನಿಂಗ್ಸ್ ಅನ್ನು ಆಡಿದರು. ಅವರು 170 ಎಸತೆಗಳಲ್ಲಿ 149 ರನ್ಗಳು ಹಾಗೂ ಮುರಿಯದ ಮೊದಲನೇ ವಿಕೆಟ್ಗೆ ಝ್ಯಾಕ್ ಕ್ರಾವ್ಲಿ ಅವರ ಜೊತೆ 188 ರನ್ಗಳ ಐತಿಹಾಸಿಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಇಂಗ್ಲೆಂಡ್ ತಂಡದ ಸಕ್ಸಸ್ ಚೇಸ್ಗೆ ಆಸರೆಯಾಗಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಈ ಹಿಂದೆ ಇಂಗ್ಲೆಂಡ್ನಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಯಾವ ರೀತಿಯ ಪ್ರದರರ್ಶವನ್ನು ತೋರುತ್ತಿದ್ದರೂ, ಅದೇ ರೀತಿಯ ಪ್ರದರ್ಶನವನ್ನು ಬೆನ್ ಡಕೆಟ್ ಅವರು ತೋರಿದ್ದಾರೆ. ರಿವರ್ಸ್ ಸ್ವೀಪ್ ಬೆನ್ ಡಕೆಟ್ ಅವರ ಸ್ವಾಭವಿಕ ಹೊಡೆತ ಎಂದು ಇಂಗ್ಲೆಂಡ್ ಮಾಜಿ ಆಟಗಾರ ತಾವು ಬರೆದಿರುವ ಅಂಕಣದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs ENG: ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮೊಹಮ್ಮದ್ ಕೈಫ್ ಅಭಿಪ್ರಾಯ!
ಇಂಗ್ಲೆಂಡ್ಗೆ ಬೆನ್ ಡಕೆಟ್ ಸೆಹ್ವಾಗ್ ರೀತಿ ಎಂದ ಲಾಯ್ಡ್
"ಆಶಷ್ ಪ್ರವಾಸದಲ್ಲಿ ಜೇಮ್ಸ್ ಆಂಡರ್ಸನ್ಗೆ ನೀರು ನೀಡುವ ಮೂಲಕ ಬಂದಿದ್ದ ಬೆನ್ ಡಕೆಟ್ ರಾಷ್ಟ್ರೀಯ ತಂಡದಲ್ಲಿ ಬಹಳ ದೂರ ಸಾಗಿದ್ದಾರೆ. ಅವರು ಈಗ ವೀರೇಂದ್ರ ಸೆಹ್ವಾಗ್ಗೆ ಇಂಗ್ಲೆಂಡ್ ತಂಡದ ಪರ ಉತ್ತರ ಮತ್ತು ನಿಮ್ಮ ವಿಶ್ವ XI ತಂಡದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ರಿವರ್ಸ್ ಸ್ವೀಪ್ ಅವರಿಗೆ ನೈಸರ್ಗಿಕ ಶಾಟ್ ಆಗಿದೆ. ಅವರು ಅದನ್ನು ಮೋಜಿಗಾಗಿ ಆಡುತ್ತಾರೆ. ಅವರು ಶಾಲೆಯಲ್ಲಿ ಉತ್ತಮ ಹಾಕಿ ಆಟಗಾರರಾಗಿದ್ದರು ಎಂದು ತಿಳಿದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ಅದು ಹಾಕಿ ಶಾಟ್ನಂತೆ ಇರುತ್ತದೆ," ಎಂದು ಡೇವಿಡ್ ಲಾಯ್ಡ್ ಗುಣಗಾನ ಮಾಡಿದ್ದಾರೆ.
IND vs ENG: ಹೆಡಿಂಗ್ಲೆ ಟೆಸ್ಟ್ ಸೋಲಿನ ಬಳಿಕ ಗೌತಮ್ ಗಂಭೀರ್ಗೆ ರವಿ ಶಾಸ್ತ್ರಿ ಮಹತ್ವದ ಸಲಹೆ!
ಇಂಗ್ಲೆಂಡ್ ವಿರುದ್ದ ಸೆಹ್ವಾಗ್ಗೆ ಟೆಸ್ಟ್ ಅಂಕಿಅಂಶ
ವೀರೇಂದ್ರ ಸೆಹ್ವಾಗ್ ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರು, ವಿಶೇಷವಾಗಿ ಇಂಗ್ಲೆಂಡ್ ವಿರುದ್ಧ. 2008 ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು 68 ಎಸೆತಗಳಲ್ಲಿ 86 ರನ್ ಗಳಿಸಿದ್ದು ಅವರ ಅತ್ಯಂತ ಸ್ಮರಣೀಯ ಇನ್ನಿಂಗ್ಸ್ ಆಗಿತ್ತು. ಸೆಹ್ವಾಗ್ ಬ್ಯಾಟಿಂಗ್ ಬಲದಿಂದ ಭಾರತ ತಂಡ, 387 ರನ್ಗಳನ್ನು ಚೇಸ್ ಮಾಡಲು ಸಾಧ್ಯವಾಗಿತ್ತು. ಇಂಗ್ಲೆಂಡ್ ವಿರುದ್ಧ 17 ಟೆಸ್ಟ್ಗಳಲ್ಲಿ ಸೆಹ್ವಾಗ್, 75.39ರ ಸ್ಟ್ರೈಕ್ ರೇಟ್ನಲ್ಲಿ 821 ರನ್ ಗಳಿಸಿದ್ದಾರೆ ಹಾಗೂ ಇದರಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.
ಜುಲೈ 2 ರಂದು ಎರಡನೇ ಟೆಸ್ಟ್ ಆರಂಭ
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 5 ವಿಕೆಟ್ಗಳ ಗೆಲುವು ಪಡೆದಿರುವ ಇಂಗ್ಲೆಂಡ್ ತಂಡ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಇದೀಗ ಜುಲೈ 2 ರಂದು ಬರ್ಮಿಂಗ್ಹ್ಯಾಮ್ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.