ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Anvay Dravid: ಭಾರತ ಅಂಡರ್‌-19 ತಂಡದ ಪರ 87 ರನ್‌ ಸಿಡಿಸಿದ ಜೂನಿಯರ್‌ ರಾಹುಲ್‌ ದ್ರಾವಿಡ್‌!

ಶ್ರೀಲಂಕಾ ಅಂಡರ್‌-19 ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಪುತ್ರ ಅನ್ವಯ್‌ ದ್ರಾವಿಡ್‌ ಅವರು ಕೇವಲ 67 ಎಸೆತಗಳಲ್ಲಿ 87 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಸಿದ್ದಾರೆ. ಅವರು ತಮ್ಮ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳನ್ನು ಬಾರಿಸಿದ್ದಾರೆ.

ಭಾರತ ಅಂಡರ್‌-19 ತಂಡದ ಪರ 87 ರನ್‌ ಸಿಡಿಸಿದ ಅನ್ವಯ್‌ ದ್ರಾವಿಡ್‌!

ಅಂಡರ್‌-19 ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಜೂನಿಯರ್‌ ದ್ರಾವಿಡ್‌. -

Profile
Ramesh Kote Jul 6, 2026 5:02 PM

ನವದೆಹಲಿ: ಭಾರತ ಅಂಡರ್‌-19 ತಂಡದ (India U-18 Team) ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಹಾಗೂ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಪುತ್ರ ಅನ್ವಯ್‌ ದ್ರಾವಿಡ್‌ (Anvay Dravid) ಅವರು ಅರ್ಧಶತಕವನ್ನು ಬಾರಿಸಿದ್ದಾರೆ. ಅವರು ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಕೇವಲ 67 ಎಸೆತಗಳಲ್ಲಿ 87 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡ 285 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಇವರು 129ರ ಸ್ಟ್ರೈಕ್‌ ರೇಟ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳನ್ನು ಸಿಡಿಸಿದ್ದರು.

ಇವರು ತಮ್ಮ ಬ್ಯಾಟಿಂಗ್‌ ಜೊತೆಗೆ ಐದನೇ ವಿಕೆಟ್‌ಗೆ ಅರುಣ್‌ ರಜಪುತ್‌ ಅವರೊಂದಿಗೆ 144 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದ್ದರು. ಅರುಣ್‌ ರಜಪುತ್‌ ಅವರು 81 ಎಸೆತಗಳಲ್ಲಿ 76 ರನ್‌ಗಳನ್ನು ಬಾರಿಸಿದ್ದಾರೆ. ಈ ಜೋಡಿಯ ದೊಡ್ಡ ಜೊತೆಯಾಟದ ಬಲದಿಂದ ಭಾರತ ಅಂಡರ್‌-19 ತಂಡ 250ರ ಗಡಿ ದಾಟಲು ಸಾಧ್ಯವಾಯಿತು. ಅಂದಹಾಗೆ ಅನ್ವಯ್‌ ದ್ರಾವಿಡ್‌ ತಮ್ಮ ಭರ್ಜರಿ ಇನಿಂಗ್ಸ್‌ ಮೂಲಕ ತಮ್ಮ ತಂದೆ ಹಾಗೂ ಕುಟುಂಬದ ಪರಂಪರೆಯನ್ನು ಮುಂದುವರಿಸಿದ್ದಾರೆ.

ಇನ್ನು ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿರುವ ಅನ್ವಯ್‌ ದ್ರಾವಿಡ್‌ ಮೊದಲನೇ ಪಂದ್ಯದಲ್ಲಿ 19 ಎಸೆತಗಳಲ್ಲಿ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇದೀಗ ಅವರು ಚೊಚ್ಚಲ ಅರ್ಧಶತಕ ಬಾರಿಸುವ ಮೂಲಕ ತಮ್ಮ ಫಾರ್ಮ್‌ ಕಂಡುಕೊಂಡಿದ್ದಾರೆ.

ಮೂರನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ 3 ಸ್ಟಾರ್‌ಗಳು!

2026ರ ಅಂಡರ್‌-19 ತಂಡಕ್ಕೆ ಆಯ್ಕೆಯಾಗದ ಅನ್ವಯ್‌

ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ 2026ರ ಅಂಡರ್-19 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಕಿರಿಯರ ವಿಶ್ವಕಪ್‌ಗೆ ಮುನ್ನ ನಡೆದ ಅಂಡರ್-19 ತ್ರಿಕೋನ ಸರಣಿಗೆ ಅವರನ್ನು ಭಾರತ 'ಬಿ' ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ ಅವರು, ಬಳಿಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಪ್ರಸ್ತುತ 17 ವರ್ಷದ ಅನ್ವಯ್, 2028ರ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಹೊಂದಿದ್ದಾರೆ.

ಅನ್ವಯ್ ಅವರ ಹಿರಿಯ ಸಹೋದರ ಸಮಿತ್ ದ್ರಾವಿಡ್ ಕೂಡ ಕ್ರಿಕೆಟಿಗರಾಗಿದ್ದಾರೆ. 2024ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡಕ್ಕೆ ಅವರು ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಚೊಚ್ಚಲ ಪಂದ್ಯವಾಡುವ ಅವಕಾಶದಿಂದ ವಂಚಿತರಾಗಿದ್ದರು.

IND vs ENG: ತಮಾಷೆ ಮಾಡುತ್ತಿದ್ದೀರಾ? ಸಂಜು ಸ್ಯಾಮ್ಸನ್‌ಗೆ ಕೊಕ್‌ ನೀಡಿದ್ದಂತೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

ಅಂಡರ್‌-19 ಭಾರತ ತಂಡದಲ್ಲಿ ಆಡಿದ್ದ ರಾಹುಲ್‌ ದ್ರಾವಿಡ್‌

ರಾಹುಲ್ ದ್ರಾವಿಡ್ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 1996ರಲ್ಲಿ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಅವರು, ಆಟಗಾರನಾಗಿ ಯಶಸ್ವಿ ವೃತ್ತಿಜೀವನದ ಬಳಿಕ ತರಬೇತುದಾರರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. 2015ರಲ್ಲಿ ಭಾರತ ಅಂಡರ್-19 ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು.

ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ಅಂಡರ್-19 ತಂಡ 2016ರ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿತಾದರೂ, ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತು. ಬಳಿಕ 2018ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ಗೆಲ್ಲುವ ಮೂಲಕ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಭಾರತ ಅಂಡರ್-19 ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.