ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್‌ ಕುಂಬ್ಳೆ!

ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ನಂತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಬಗ್ಗೆ ಪ್ರಶ್ನೆಗಳು ಕಾಡುತ್ತಿವೆ. ಇದರ ನಡುವೆ ಭಾರತದ ಸ್ಪಿನ್‌ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ, ವಿರಾಟ್‌ ಕೊಹ್ಲಿಯ ಸ್ಥಾನಕ್ಕೆ ಕನ್ನಡಿಗನ್ನು ಸೂಚಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಸ್ಥಾನಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್‌ ಕುಂಬ್ಳೆ!

ಕೊಹ್ಲಿಯ ಸ್ಥಾನಕ್ಕೆ ಕರುಣ್‌ ನಾಯರ್‌ರನ್ನು ಆರಿಸಿದ ಕುಂಬ್ಳೆ.

Profile Ramesh Kote May 14, 2025 5:28 PM

ನವದೆಹಲಿ: ಕಳೆದ 33 ವರ್ಷಗಳಿಂದ ಭಾರತ ಟೆಸ್ಟ್‌ ತಂಡದ ನಾಲ್ಕನೇ ಕ್ರಮಾಂಕವನ್ನು ಸಚಿನ್‌ ತೆಂಡೂಲ್ಕರ್‌ (Sachin Tendulkr) ಮತ್ತು ವಿರಾಟ್‌ ಕೊಹ್ಲಿ(Virat KOhli) ತುಂಬಿದ್ದಾರೆ. ಹಾಗಾಗಿ ನಾಲ್ಕನೇ ಕ್ರಮಾಂಕಕ್ಕೆ ಒಂದು ದೀರ್ಘ ಪರಂಪರೆ ಇದೆ. ತೆಂಡೂಲ್ಕರ್‌ಗಿಂತಲೂ ಮುಂಚೆ ಜಿ ಆರ್‌ ವಿಶ್ವನಾಥ್‌ (G R Vishwanath) ಮತ್ತು ದಿಲೀಪ್‌ ವೆಂಗ್‌ಸರ್ಕಾರ್‌ (Dileep veng sarkar) ಆ ಸ್ಥಾನವನ್ನು ತುಂಬಿದ್ದರು. ಆದರೆ ಇದೀಗ ಕೊಹ್ಲಿ ನಿವೃತ್ತಿ ನಂತರ ಈ ಪರಂಪರೆಯನ್ನು ಮುಂದುವರಿಸುವವರು ಯಾರು ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ. ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಭಾರತ ಟೆಸ್ಟ್‌ ತಂಡದ ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕರುಣ್‌ ನಾಯರ್‌ ಅವರನ್ನು ಸೂಚಿಸಿದ್ದಾರೆ.

ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿಯಂತಹ ಹಿನ್ನೆಲೆಯನ್ನು ಕರುಣ್‌ ನಾಯರ್‌ ಹೊಂದಿಲ್ಲದೇ ಇದ್ದರೂ ಅವರಿಗೆ ರನ್‌ ಗಳಿಸುವ ಸಾಮರ್ಥ್ಯ ಇದೆ. ವಿಶೇಷವಾಗಿ ಕಳೆದ 2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರುಣ್‌ ನಾಯರ್‌ ಅತ್ಯುತ್ತಮ ಪ್ರದರ್ಶನ ತೋರಿದ್ದು, 9 ಪಂದ್ಯಗಳನ್ನಾಡಿ 863 ರನ್‌ ಗಳಿಸಿದ್ದರು. ಅವರು ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ಕೂಡ ಅವರು 779 ರನ್‌ಗಳನ್ನು ಕಲೆ ಹಾಕಿದದಾರೆ. ಪ್ರಸ್ತುತ ಅವರು ಡೆಲ್ಲಿ ಕ್ಯಾಪಿಟಲ್ಸ್‌ ಪರ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಆಡುತ್ತಿದಾರೆ. ಇದಾದ ಬಳಿಕ ಭಾರತ ಎ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿದ್ದಾರೆ.

IND vs ENG: ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

ನಾಲ್ಕನೇ ಕ್ರಮಾಂಕದ ಬಗ್ಗೆ ಕುಂಬ್ಳೆ ಹೇಳಿದ್ದೇನು?

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಅನಿಲ್‌ ಕಂಬ್ಳೆ, "ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ರೋಹಿತ್‌ ಆಡಿರಲಿಲ್ಲ. ಆಗ ರೋಹಿತ್‌ ಶರ್ಮಾ ಅವರ ಓಪನಿಂಗ್ ಸ್ಥಾನವನ್ನು ಕನ್ನಡಿಗ ಕೆ ಎಲ್‌ ರಾಹುಲ್‌ ತುಂಬಿದ್ದರು. ರಾಹುಲ್‌ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿದ ಮೇಲೆ ಆ ಸ್ಥಾನದಲ್ಲಿ ಅವರೇ ಮುಂದುವರಿದ ಕಾರಣ ರೋಹಿತ್‌ ಶರ್ಮಾ ಕೆಳ ಕ್ರಮಾಂಕಕ್ಕೆ ಇಳಿದಿದ್ದರು. ನಂತರ ಕೊನೆಯ ಟೆಸ್ಟ್‌ ಪಂದ್ಯದ ಪ್ಲೇಯಿಂಗ್‌ XIನಿಂದ ಹೊರಗುಳಿದಿದ್ದರು. ಹಾಗಾಗಿ ಭಾರತ ಟೆಸ್ಟ್‌ ತಂಡಕ್ಕೆ ಬ್ಯಾಕಪ್‌ ಓಪನರ್‌ ಯಾರು ಎಂದು ತಿಳಿದಿದೆ. ಆದರೆ ಕೊಹ್ಲಿಯವರ 4ನೇ ಸ್ಥಾನ ತುಂಬುವ ಆಟಗಾರ ಯಾರೆಂಬುದುನ್ನು ಕಾದು ನೋಡಬೇಕಿದೆ," ಎಂದು ಹೇಳಿದ್ದಾರೆ.

IND vs ENG: ವಿರಾಟ್‌ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ? ಚೇತೇಶ್ವರ್‌ ಫುಜಾರ ಅಭಿಪ್ರಾಯ!

ಕರುಣ್‌ ನಾಯರ್‌ಗೆ ಮಣೆ ಹಾಕಿದ ಸ್ಪಿನ್‌ ದಿಗ್ಗಜ

"ಕರುಣ್‌ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ, ಹಾಗಾಗಿ ಅವರು ಭಾರತ ಟೆಸ್ಟ್‌ ತಂಡ ಸೇರಿಕೊಳ್ಳಲು ಅರ್ಹರು. ಭಾರತ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಅವರನ್ನು ನೀವು ಆಡಿಸಬಹುದು. ಏಕೆಂದರೆ ನೀವು ಸ್ವಲ್ಪ ಅನುಭವಿ ಆಟಗಾರನನ್ನು ಈ ಜಾಗದಲ್ಲಿ ನೋಡಬೇಕಾಗುತ್ತದೆ. ಇಂಗ್ಲೆಂಡ್‌ನಲ್ಲಿ ಆಡಿದ ಅನುಭವವನ್ನು ಹೊಂದಿರುವವರನ್ನು ನೀವು ಪರಿಗಣಿಸಬೇಕಾಗುತ್ತದೆ. ಕರುಣ್‌ ನಾಯರ್‌ ಇಂಗ್ಲೆಂಡ್‌ನಲ್ಲಿ ಕೌಂಟಿ ಆಡಿದ ಅನುಭವವನ್ನು ಹೊಂದಿದ್ದಾರೆ ಹಾಗೂ ಅಲ್ಲಿನ ಕಂಡೀಷನ್ಸ್‌ ಬಗ್ಗೆ ಗೊತ್ತಿದೆ. ಅವರಿಗೆ 30 ವರ್ಷ ವಯಸ್ಸಾದರೂ ಇನ್ನೂ ಯುವ ಆಟಗಾರನ ರೀತಿ ಇದ್ದಾರೆ. ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ದೇಶಿ ಕ್ರಿಕೆಟ್‌ ಆಡಲು ಯುವ ಆಟಗಾರರಿಗೆ ಭರವಸೆ ಸಿಕ್ಕಂತಾಗುತ್ತದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ರಾಷ್ಟ್ರೀಯ ತಂಡಕ್ಕೆ ಪ್ರಾಶಸ್ತ್ಯ ಸಿಕ್ಕಿಲ್ಲವಾದರೆ, ಅದು ಸ್ವಲ್ಪ ಸವಾಲುದಾಯಕವಾಗಿ ಕೂಡಿರುತ್ತದೆ," ಎಂದು ಸ್ಪಿನ್‌ ದಿಗ್ಗಜ ಎಚ್ಚರಿಕೆ ನೀಡಿದ್ದಾರೆ.

Virat Kohli: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳು!

ಜೂನ್‌ 20ರಂದು ಟೆಸ್ಟ್‌ ಸರಣಿ ಆರಂಭ

ಜೂನ್‌ 20 ರಂದು ಭಾರತ ತಂಡ, ಇಂಗ್ಲೆಂಡ್‌ ವಿರುದ್ದ ಮೊದಲನೇ ಟೆಸ್ಟ್‌ ಆಡಲಿದೆ. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ. ಈ ಸರಣಿಯ ನಿಮಿತ್ತ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಅತಿ ಶೀಘ್ರದಲ್ಲಿ ಭಾರತ ಟೆಸ್ಟ್‌ ತಂಡವನ್ನು ಪ್ರಕಟಿಸಲಿದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಕರುಣ್‌ ನಾಯರ್‌ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ.