IND vs ZIM: ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಟಿ20ಐ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!
IND vs ZIM: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜುಲೈ ತಿಂಗಳ ಜಿಂಬಾಬ್ವೆ ಪ್ರವಾಸಕ್ಕೆ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಘೋಷಿಸಿದೆ. ಇಂಗ್ಲೆಂಡ್ ಪ್ರವಾಸವನ್ನು ಪೂರ್ಣಗೊಳಿಸಿದ ನಾಲ್ಕು ದಿನಗಳ ಬಳಿಕ ಭಾರತ ತಂಡ ಆಫ್ರಿಕಾದಲ್ಲಿ ಮೂರು ಟಿ20ಐ ಪಂದ್ಯಗಳನ್ನು ಆಡಲಿದೆ.
ಭಾರತ ತಂಡದ ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ. -
ನವದೆಹಲಿ: ಪ್ರಸಕ್ತ ವರ್ಷದ ಜುಲೈನಲ್ಲಿ ಭಾರತ ತಂಡ ಜಿಂಬಾಬ್ವೆ (IND vs ZIM) ಪ್ರವಾಸ ಹಮ್ಮಿಕೊಳ್ಳಲಿದ್ದು, ಇಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜುಲೈ 23, 25 ಹಾಗೂ 26 ರಂದು ಕ್ರಮವಾಗಿ ಮೂರು ಪಂದ್ಯಗಳು ನಡೆಯಲಿವೆ.
ಜಿಂಬಾಬ್ವೆ ಪ್ರವಾಸದ ಮೊದಲ ಪಂದ್ಯವನ್ನು ಇಂಗ್ಲೆಂಡ್ ಪ್ರವಾಸದ ಅಂತಿಮ ಪಂದ್ಯದಿಂದ ಕೇವಲ ನಾಲ್ಕು ದಿನಗಳ ಬಳಿಕ ನಡೆಯುವಂತೆ ವೇಳಾಪಟ್ಟಿ ಮಾಡಲಾಗಿದೆ. ಜುಲೈನಲ್ಲಿ ಐದು ಟಿ20ಐ ಮತ್ತು ಮೂರು ಒಡಿಐ ಪಂದ್ಯಗಳ ಸರಣಿಗಾಗಿ ಭಾರತದ ವೈಟ್-ಬಾಲ್ ತಂಡಗಳು ಇಂಗ್ಲೆಂಡ್‌ಗೆ ಪ್ರಯಾಣಿಸಲಿವೆ. ಈ ಸರಣಿ 2027ರ ಒಡಿಐ ವಿಶ್ವಕಪ್‌ಗೆ ತಂಡದ ಸಂಯೋಜನೆ ರೂಪಿಸಲು ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಒಡಿಐ ಮತ್ತು ಟಿ20ಐ ತಂಡಗಳ ವ್ಯವಸ್ಥೆಗಳು ಬಹುತೇಕ ಪ್ರತ್ಯೇಕವಾಗಿದ್ದರೂ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಮೊದಲಾದ ಪ್ರಮುಖ ಆಟಗಾರರು ಎರಡೂ ಸ್ವರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಈ ಸೀಸನ್‌ನಲ್ಲಿ ದ್ವಿಪಕ್ಷೀಯ ಟಿ20ಐ ಸರಣಿಗಳನ್ನು ತಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಆದರೆ ಅಕ್ಷರ್ ಪಟೇಲ್ ಮೊದಲಾದ ಆಟಗಾರರಿಗೆ ಇದು ಅನ್ವಯಿಸದೇ ಇರಬಹುದು.
ಚೆಂಡು ವಿರೂಪ ಪ್ರಕರಣ; ಪಾಕ್ ಆಟಗಾರನಿಗೆ 2 ಪಂದ್ಯ ನಿಷೇಧ
ಇದು ಎರಡು ವರ್ಷಗಳ ನಂತರ ಭಾರತ ತಂಡದ ಜಿಂಬಾಬ್ವೆಗೆ ಮರಳುವ ಪ್ರವಾಸವಾಗಿದೆ. ಭಾರತ ತಂಡವು ಕೊನೆಯ ಬಾರಿ 2024ರ ಜುಲೈನಲ್ಲಿ ಆಫ್ರಿಕಾ ರಾಷ್ಟ್ರಕ್ಕೆ ಭೇಟಿ ನೀಡಿದ್ದು, ಆ ಸರಣಿಯಲ್ಲಿ ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಭಾರತ ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಮುಂದಿನ ಪ್ರವಾಸಕ್ಕಾಗಿ ಘೋಷಿಸಲಿರುವ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿಯು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
🚨 News 🚨
— BCCI (@BCCI) April 1, 2026
Presenting the schedule for #TeamIndia's (Senior Men) Tour of Zimbabwe for a 3️⃣-match T20I series in July 2026! 🗓️
More details 🔽 | #ZIMvINDhttps://t.co/KsJRRqe4l8 pic.twitter.com/Tf21abYmTb
ಭಾರತ ತಂಡದ ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ
ಮೊದಲನೇ ಟಿ20ಐ ಪಂದ್ಯ: ಜುಲೈ 23, ಹರಾರೆ
ಎರಡನೇ ಟಿ20ಐ ಪಂದ್ಯ: ಜುಲೈ 25, ಹರಾರೆ
ಮೂರನೇ ಟಿ20ಐ ಪಂದ್ಯ: ಜುಲೈ 26, ಹರಾರೆ
ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ
ಟಿ20ಐ ಸರಣಿ
ಮೊದಲನೇ ಟಿ20ಐ ಪಂದ್ಯ: ಜುಲೈ 1, ದುರ್ಹ್ಯಾಮ್
ಎರಡನೇ ಟಿ20ಐ ಪಂದ್ಯ: ಜುಲೈ 4, ಮ್ಯಾಂಚೆಸ್ಟರ್
ಮೂರನೇ ಟಿ20ಐ ಪಂದ್ಯ: ಜುಲೈ 7, ನಾಟಿಂಗ್‌ಹ್ಯಾಮ್
ನಾಲ್ಕನೇ ಟಿ20ಐ ಪಂದ್ಯ: ಜುಲೈ 9, ಬ್ರಿಸ್ಟಲ್
ಐದನೇ ಟಿ20ಐ ಪಂದ್ಯ: ಜುಲೈ 11, ಸೌತಾಮ್ಟನ್
IPL 2026: ಶ್ರೇಯಸ್ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಯುಜ್ವೇಂದ್ರ ಚಹಲ್!
ಏಕದಿನ ಸರಣಿ
ಮೊದಲನೇ ಏಕದಿನ ಪಂದ್ಯ: ಜುಲೈ 14, ಬರ್ಮಿಂಗ್‌ಹ್ಯಾಮ್
ಎರಡನೇ ಏಕದಿನ ಪಂದ್ಯ: ಜುಲೈ 16, ಕಾರ್ಡಿಫ್
ಮೂರನೇ ಏಕದಿನ ಪಂದ್ಯ: ಜುಲೈ 19, ಲಂಡನ್