ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರನ್‌ ಹೊಳೆ ಮುಂದುವರಿಸಿದ ಬಾಲಕ, 50 ಬಾಲ್‌ಗಳನ್ನು 96 ರನ್‌ ಚಚ್ಚಿದ ವೈಭವ್‌ ಸೂರ್ಯವಂಶಿ!

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ ವೈಭವ್‌ ಸೂರ್ಯವಂಶಿ ಅವರು ರನ್‌ ಹೊಳೆ ಹರಿಸುವುದನ್ನು ಮುಂದುವರಿಸಿದ್ದಾರೆ. ಅವರು ಸ್ಕಾಟ್ಲೆಂಡ್‌ ವಿರುದ್ಧದ ಐಸಿಸಿ ಅಂಡರ್‌- 19 ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ 96 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.

ಸ್ಕಾಟ್ಲೆಂಡ್‌ ವಿರುದ್ಧ 50 ಎಸೆತಗಳಲ್ಲಿ 96 ರನ್‌ ಸಿಡಿಸಿದ ವೈಭವ್‌!

50 ಎಸೆತಗಳಲ್ಲಿ 96 ರನ್‌ ಸಿಡಿಸಿದ ವೈಭವ್‌ ಸೂರ್ಯವಂಶಿ. -

Profile
Ramesh Kote Jan 10, 2026 6:15 PM

ನವದೆಹಲಿ: ಐಸಿಸಿ ಅಂಡರ್‌-19 ವಿಶ್ವಕಪ್‌ ಟೂರ್ನಿಗೂ (ICC U-19 World Cup 2026) ಮುನ್ನ ಭಾರತ ಕಿರಿಯರ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Suryavanshi) ತಮ್ಮ ಬ್ಯಾಟಿಂಗ್‌ ಅಬ್ಬರವನ್ನು ಮುಂದುವರಿಸಿದ್ದಾರೆ. ಅಭ್ಯಾಸದ ಪಂದ್ಯದಲ್ಲಿ ಮತ್ತೊಂದು ಸ್ಪೋಟಕ ಇನಿಂಗ್ಸ್‌ ಅನ್ನು ಆಡಿದ್ದಾರೆ. ಬುಲವಾಯೊದ ಅಥ್ಲೆಟಿಕ್‌ ಕ್ಲಬ್‌ನಲ್ಲಿ ಶನಿವಾರ ಸ್ಕಾಟ್ಲೆಂಟ್‌ (Scotland) ವಿರುದ್ಧದ ಅಭ್ಯಾಸದ ಪಂದ್ಯದಲ್ಲಿ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರು ಕೇವಲ 50 ಎಸೆತಗಳಲ್ಲಿ 96 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಕಿರಿಯರ ವಿಶ್ವಕಪ್‌ ಟೂರ್ನಿಗೂ ಮುನ್ನ ಎದುರಾಳಿ ತಂಡಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.

ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ವೈಭವ್‌ ಸೂರ್ಯವಂಶಿ 7 ಸಿಕ್ಸರ್‌ಗಳು ಹಾಗೂ 9 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ನಾಯಕ ಆಯುಷ್‌ ಮ್ಹಾತ್ರೆ ಅವರ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ ವೈಭವ್‌ ಸೂರ್ಯವಂಶಿ ಅವರು 70 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಮ್ಹಾತ್ರೆ 19 ಎಸೆತಗಳಲ್ಲಿ 22 ರನ್‌ಗಳನ್ನು ಗಳಿಸಿದ್ದರು. ಇದಾದ ಬಳಿಕ ಆರೋನ್‌ ಜಾರ್ಜ್‌ ಅವರ ಜೊತೆ 78 ರನ್‌ಗಳ ಜೊತೆಯಾಟವನ್ನು ಕೂಡ 14ರ ಬಾಲಕ ಆಡಿದ್ದರು.

IND vs NZ: ಒಡಿಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶ್ರೇಯಸ್‌ ಅಯ್ಯರ್‌!

ವೈಭವ್‌ ಸೂರ್ಯವಂಶಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಅತ್ಯುತ್ತಮ ಪ್ರದರ್ಶನ ನೀಡಿ ನೂತನ ಮೈಲುಗಲ್ಲು ತಲುಪಿದರು. ದುರದೃಷ್ಟವಶಾತ್ ಅವರು ಮನು ಸಾರಸ್ವತ್ ಎಸೆತದಲ್ಲಿ 96 ರನ್ ಗಳಿಸಿ ಔಟಾದ ಕಾರಣ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು.

ಇತ್ತೀಚೆಗೆ ಸೂರ್ಯವಂಶಿ ನಾಯಕತ್ವದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾ ಅಂಡರ್-19 ವಿರುದ್ಧದ ಸರಣಿಯನ್ನು 3-0 ಅಂತರದ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತ್ತು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಸರಣಿಯಲ್ಲಿ ಅವರು 68.66ರ ಸರಾಸರಿ ಮತ್ತು 187.27ರ ಸ್ಟ್ರೈಕ್ ರೇಟ್‌ನಲ್ಲಿ 206 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕವನ್ನು ಕೂಡ ಗಳಿಸಿದ್ದರು.



ಸ್ಕಾಟ್ಲೆಂಡ್‌ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ ನಷ್ಟಕ್ಕೆ 374 ರನ್‌ಗಳನ್ನು ಕಲೆ ಹಾಕಿತ್ತು. ವೈಭವ್‌ ಜತೆಗೆ ವಿಹಾನ್‌ ಮೆಲ್ಹೋತ್ರಾ 77 ರನ್‌ ಹಾಗೂ ಅಭಿಜ್ಞಾನ್‌ ಕುಂದು 55 ರನ್‌ ಗಳಿಸಿದರು. ಸ್ಕಾಟ್ಲೆಂಡ್‌ ಪರ ಒಲ್ಲಿ ಜೋಸ್‌ 70 ರನ್‌ ನೀಡಿ 4 ವಿಕೆಟ್‌ ಪಡೆದರು. ಜನವರಿ 15 ರಂದು ಯುಎಸ್‌ಎ ವಿರುದ್ಧ ತನ್ನ ಮೊದಲನೇ ಪಂದ್ಯವನ್ನು ಆಡುವ ಮೂಲಕ ಭಾರತ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ತಂಡ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಹಾಗೂ ಯುಎಸ್‌ಎ ತಂಡಗಳ ಜೊತೆಗೆ ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ.