ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪಂಜಾಬ್‌ ಕಿಂಗ್ಸ್‌ನಲ್ಲಿರುವ ಜೂನಿಯರ್‌ ಧೋನಿಯನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್‌!

Matthew Hayden Praised on Prabhsimran Singh: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ 48 ಎಸೆತಗಳಲ್ಲಿ 91 ರನ್‌ಗಳನ್ನು ಬಾರಿಸಿ ಪಂಜಾಬ್‌ ಕಿಂಗ್ಸ್‌ ಗೆಲುವಿಗೆ ನೆರವಾದ ಪ್ರಭ್‌ಸಿಮ್ರನ್‌ ಸಿಂಗ್‌ ಅವರನ್ನು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಶ್ಲಾಘಿಸಿದ್ದಾರೆ.

ಐಪಿಎಲ್‌ ಆಡುತ್ತಿರುವ ಜೂನಿಯರ್‌ ಎಂಎಸ್‌ಡಿಯನ್ನು ಹೆಸರಿಸಿದ ಹೇಡನ್‌!

ಪ್ರಭ್‌ಸಿಮ್ರನ್‌ ಸಿಂಗ್‌ಗೆ ಮ್ಯಾಥ್ಯೂ ಹೇಡನ್‌ ಶ್ಲಾಘನೆ.

Profile Ramesh Kote May 5, 2025 11:03 AM

ಧರ್ಮಶಾಲಾ: ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ಧ ಸ್ಪೋಟಕ ಬ್ಯಾಟ್‌ ಮಾಡಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡದ 37 ರನ್‌ಗಳ ಗೆಲುವಿಗೆ ನೆರವಾದ ಆರಂಭಿಕ ಬ್ಯಾಟ್ಸ್‌ಮನ್‌ ಪ್ರಭ್‌ಸಿಮ್ರನ್‌ ಸಿಂಗ್‌ (Prabhsimran Singh) ಅವರನ್ನು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಶ್ಲಾಘಿಸಿದ್ದಾರೆ. ಅಲ್ಲದೆ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂಎಸ್‌ ಧೋನಿಗೆ ಪ್ರಭ್‌ಸಿಮ್ರನ್‌ ಅವರನ್ನು ಹೋಲಿಸಿದ್ದಾರೆ. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಪ್ರಭ್‌ಸಿಮ್ರನ್‌ ಕೇವಲ 48 ಎಸೆತಗಳಲ್ಲಿ 91 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

24ರ ಪ್ರಾಯದ ಪ್ರಭ್‌ಸಿಮ್ರನ್‌ ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 7 ಸಿಕ್ಸರ್‌ ಹಾಗೂ 6 ಬೌಂಡರಿಗಳನ್ನು ಬಾರಿಸಿದ್ದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 236 ರನ್‌ಗಳನ್ನು ಕಲೆ ಹಾಕಿತ್ತು. ಇದರೊಂದಿಗೆ ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ಗೆ 237 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

IPL 2025: ಈಡನ್‌ ಗಾಡರ್ನ್ಸ್‌ನಲ್ಲಿ 1000 ರನ್‌ ಪೂರ್ಣಗೊಳಿಸಿದ ಆಂಡ್ರೆ ರಸೆಲ್‌!

ಈ ಪಂದ್ಯದ ಇನಿಂಗ್ಸ್‌ ಬ್ರೇಕ್‌ ವೇಳೆ ಮಾತನಾಡಿದ್ದ ಮ್ಯಾಥ್ಯೂ ಹೇಡನ್, ಎಂಎಸ್‌ ಧೋನಿಯ 2010ರ ಇನಿಂಗ್ಸ್‌ವೊಂದನ್ನು ಸ್ಮರಿಸಿಕೊಂಡರು. ಪಂಜಾಬ್‌ ವಿರುದ್ಧ ಅಂದಿನ ಪಂದ್ಯದಲ್ಲಿ ಎಂಎಸ್‌ಡಿ, 26 ಎಸೆತಗಳಲ್ಲಿ ಅಜೇಯ 54 ರನ್‌ಗಳನ್ನು ಬಾರಿಸಿದ್ದರು. ಅಂತಿಮ ಓವರ್‌ನಲ್ಲಿ ಇರ್ಫಾನ್‌ ಪಠಾಣ್‌ಗೆ ಎಂಎಸ್‌ ಧೋನಿ 16 ರನ್‌ಗಳನ್ನು ಬಾರಿಸಿದ್ದರು. ಇದೀಗ ಪ್ರಭ್‌ಸಿಮ್ರನ್‌ ಕೂಡ ಎಂಎಸ್‌ ಧೋನಿ ರೀತಿ ಬ್ಯಾಟ್‌ ಬೀಸುತ್ತಿದ್ದಾರೆಂದು ಹೇಳಿದ್ದಾರೆ.

ಜೂನಿಯರ್‌ ಎಂಎಸ್‌ ಧೋನಿ: ಹೇಡನ್‌

"ಅವರಲ್ಲಿ (ಪ್ರಭ್‌ಸಿಮ್ರಾನ್‌) ಅದ್ಭುತ ಶಕ್ತಿ ಇದೆ. 2010ರಲ್ಲಿ ಯಂಗ್‌ ಎಂಎಸ್‌ ಧೋನಿ ಇದ್ದರು ಹಾಗೂ ಕೊನೆಯ ಓವರ್‌ನಲ್ಲಿ ಚೆಂಡನ್ನು ಎಲ್ಲಾ ಕಡೆಗೂ ಹೊಡೆಯುತ್ತಿದ್ದರು. ಪ್ರಭ್‌ಸಿಮ್ರನ್‌ ಸಿಂಗ್‌ ಕೂಡ ಅದೇ ಮಾದರಿಯ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಬ್ಯಾಟ್‌ ವೇಗ ಅದ್ಭುತವಾಗಿದೆ. ಅವರು ಜಾಸ್ತಿ ಎತ್ತರ ಇಲ್ಲವಾದರೂ ಗ್ಯಾಪ್‌ಗಳನ್ನು ಚೆಂಡನ್ನು ಭಯಮುಕ್ತಿವಾಗಿ ಕಳುಹಿಸುತ್ತಾರೆ. ಲಖನೌ ಸೂಪರ್‌ ಜಯಂಟ್ಸ್‌ ತಂಡದಲ್ಲಿ ಅವರಿಂದ ಮೂಡಿಬಂದ ಇನಿಂಗ್ಸ್‌ ಅನ್ನು ನೀವು ನೋಡಬಹುದು. ಅವರು ತಮ್ಮ ಆಟದಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಕಾಣುತ್ತಿದ್ದರು. ಆ ಮೂಲಕ ಬೌಲರ್‌ಗಳು ತಪ್ಪು ಮಾಡುವಂತೆ ಪ್ರೇರೇಪಿಸುತ್ತಿದ್ದರು," ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಮ್ಯಾಥ್ಯೂ ಹೇಡನ್‌ ತಿಳಿಸಿದ್ದಾರೆ.

IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ 8 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

437 ರನ್ ಕಲೆ ಹಾಕಿರುವ ಪ್ರಭ್‌ಸಿಮ್ರನ್‌

ಪಂಜಾಬ್‌ ಕಿಂಗ್ಸ್‌ ಪರ ಇನಿಂಗ್ಸ್‌ ಆರಂಭಿಸುತ್ತಿರುವ ಪ್ರಭ್‌ಸಿಮ್ರನ್‌ ಈ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 437 ರನ್‌ಗಳನ್ನು ಬಾರಿಸಿದ್ದಾರೆ. ಲೀಗ್‌ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಪಂಜಾಬ್‌ಗೆ ಬಾಕಿ ಇವೆ. ಈ ಸೀಸನ್‌ನಲ್ಲಿ ಅವರು ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಲು ಎದುರು ನೋಡುತ್ತಿದ್ದಾರೆ. ಅವರು 20 ಅಥವಾ 30 ರನ್‌ ಗಳಿಸುವ ಮೂಲಕ ಅವರು ದೀರ್ಘಾವಧಿ ಇನಿಂಗ್ಸ್‌ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.



ಪ್ರಭ್‌ಸಿಮ್ರನ್‌ ಹೇಳಿದ್ದೇನು?

ನಾನು ನನ್ನ ಆರಂಭ ಉತ್ತಮವಾಗಿತ್ತು ಹಾಗೂ ನನ್ನ ಕೊನೆಯ ಇನಿಂಗ್ಸ್‌ನಿಂದ ನನಲ್ಲಿ ಜಾಸ್ತಿ ವಿಶ್ವಾಸ ಉಂಟಾಗಿತ್ತು. ನನಗೆ ಆರಂಭದಲ್ಲಿ ಅವಕಾಶ ಸಿಕ್ಕಿದ್ದರೆ, ಆ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುತ್ತಿದ್ದೆ. ನನ್ನ ಬ್ಯಾಟಿಂಗ್‌ನಲ್ಲಿ ಯಾವುದೇ ಯೋಜನೆ ಇಲ್ಲ. ನೆಟ್ಸ್‌ನಲ್ಲಿಆಡುವ ರೀತಿ ಬ್ಯಾಟ್‌ ಮಾಡಿದ್ದೇನೆ ಅಷ್ಟೆ. ನನ್ನನ್ನು ಬೆಂಬಲಿಸಿದಕ್ಕಾಗಿ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದ ಅರ್ಪಿಸುತ್ತೇನೆ. ಪವರ್‌ಪ್ಲೇ ಬಳಿಕ ನಾನು ಸ್ವಲ್ಪ ಸಮಯವನ್ನು ತೆಗೆದುಕೊಂಡಿದ್ದೇನೆ. ನೀವು ಒಮ್ಮೆ ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡು 30-35 ರನ್‌ ಗಳಿಸಿದ್ದರೆ, ಅದನ್ನು ನೀವು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕಾಗುತ್ತದೆ. ಶ್ರೇಯಸ್‌ ಅಯ್ಯರ್‌ ಕೂಡ ಉತ್ತಮವಾಗಿ ಆಡಿದರು. ಇದು ಒಳ್ಳೆಯ ಸಂಗತಿ. ಪ್ರಿಯಾಂಶ್‌ ಕೂಡ ಉತ್ತಮವಾಗಿ ಆಡುತ್ತಿದ್ದಾರೆ.