ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಒಂದು ವಾರದ ಬಳಿಕ ಐಪಿಎಲ್‌ ಪಂದ್ಯಗಳು ಪುನಾರಂಭʼ-ಬಿಸಿಸಿಐ ಸ್ಪಷ್ಟನೆ!

IPL 2025: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇನ್ನುಳಿದ ಭಾಗವನ್ನು ಕೇವಲ ಒಂದು ವಾರ ಮಾತ್ರ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದ ಭೀತಿ ಉಂಟಾಗಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ʻ2025ರ ಐಪಿಎಲ್‌ ರದ್ದು ಒಂದು ವಾರ ಮಾತ್ರʼ: ಬಿಸಿಸಿಐ ಸ್ಪಷ್ಟನೆ!

ಒಂದು ವಾರದ ಬಳಿಕ 2025ರ ಐಪಿಎಲ್‌ ಟೂರ್ನಿ ಪುನಾರಂಭವಾಗಲಿದೆ.

Profile Ramesh Kote May 9, 2025 3:54 PM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಭಾಗವನ್ನು ಕೇವಲ ಒಂದು ವಾರ ಮಾತ್ರ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಸ್ಪಷ್ಟಪಡಿಸಿದೆ. ಸಂಬಂಧಿತ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನದ ನಂತರ, ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ದಿನಾಂಕ, ಸ್ಥಳಗಳು ಸೇರಿದಂತೆ ಹೊಸ ವೇಳಾಪಟ್ಟಿ ಅತಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಟೂರ್ನಿಯ ಹೆಚ್ಚಿನ ತಂಡಗಳು ತಮ್ಮ ಆಟಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸಾರಕರು, ಪ್ರಾಯೋಜಕರು ಮತ್ತು ಅಭಿಮಾನಿಗಳು ಕೂಡ ಇದನ್ನೇ ಬಯಸಿದ್ದರು. ಬಿಸಿಸಿಐ ದೇಶದ ಸೇನೆಯ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದೆ. ಆದಾಗ್ಯೂ, ಎಲ್ಲರ ಹಿತದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದೆ. ಈ ಕಠಿಣ ಸಮಯದಲ್ಲಿ ಬಿಸಿಸಿಐ ದೇಶದೊಂದಿಗೆ ಇದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

IPL 2025 Suspended: ಉಳಿದ ಐಪಿಎಲ್‌ ಪಂದ್ಯ ನಡೆಸಲು ಬಿಸಿಸಿಐ ಮುಂದಿರುವ ಆಯ್ಕೆಗಳೇನು?

ನಿಗದಿಯಂತೆ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮೇ 25ರಂದು ಫೈನಲ್‌ ಮೂಲಕ ಮುಗಿಯಬೇಕಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ದ ಭೀತಿಯ ಕಾರಣ ಟೂರ್ನಿಯನ್ನು ಒಂದು ವಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಒಂದು ವಾರದಲ್ಲಿ ಸನ್ನಿವೇಶವನ್ನು ನೋಡಿಕೊಂಡು ಬಿಸಿಸಿಐ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಗುರುವಾರ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಣ ಪಂದ್ಯ ಹಠಾತ್‌ ನಿಲ್ಲಿಸಲಾಗಿತ್ತು. ಇಲ್ಲಿಯವರೆಗೂ 2025ರ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 57 ಪಂದ್ಯಗಳು ಮುಗಿದಿವೆ ಹಾಗೂ ಲೀಗ್‌ ಹಂತದಲ್ಲಿಇನ್ನೂ 13 ಪಂದ್ಯಗಳು ಬಾಕಿ ಇವೆ. ನಂತರ ಮೊದಲನೇ ಕ್ವಾಲಿ ಪೈಯರ್‌, ಎಲಿಮಿನೇಟರ್‌ ಪಂದ್ಯ, ಎರಡನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಕೂಡ ಇವೆ.



ಬಿಸಿಸಿಐಗೆ ಮುಂದಿನ ಸವಾಲು

ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಮುಗಿಸಲು ಬಿಸಿಸಿಐಗೆ ಇದೀಗ ಸವಾಲು ಎದುರಾಗಿದೆ. ಏಕೆಂದರೆ ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ದ ಭಾರತ ತಂಡ ಮೊದಲನೇ ಪಂದ್ಯದ ಮೂಲಕ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಎರಡು ವಾರಗಳ ಮೊದಲೇ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಭಾರತ ಟೆಸ್ಟ್‌ ತಂಡದ ಬಹುತೇಕ ಆಟಗಾರರು ಐಪಿಎಲ್‌ ಆಡುತ್ತಿದ್ದಾರೆ.

IPL 2025 Suspended: 'ದೇಶ ಮೊದಲು'; ಐಪಿಎಲ್‌ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ!

ಹಾಗಾಗಿ ಐಪಿಎಲ್‌ ಟೂರ್ನಿಯನ್ನು ಮೇ ಅಂತ್ಯದ ಒಳಗೆ ಅಥವಾ ಜೂನ್‌ ಮೊದಲ ವಾರದ ಒಳಗೆ ಮುಗಿಸಬೇಕಾಗುತ್ತದೆ. ಇಲವಾದಲ್ಲಿ ಭಾರತ ಸೇರಿದಂತೆ ವಿದೇಶಿ ತಂಡಗಳಿಗೂ ಕೂಡ ಅಂತಾರಾಷ್ಟ್ರೀಯ ವೇಳಾಪಟ್ಟಿಯ ನಿಮಿತ್ತ ಸಮಸ್ಯೆ ಎದುರಾಗಲಿದೆ. ನಂತರ ಐಪಿಎಲ್‌ ಟೂರ್ನಿಯನ್ನು ಮುಗಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಬಿಸಿಸಿಐ ಜೂನ್‌ ಮೊದಲ ವಾರದ ಒಳಗಾಗಿ ಐಪಿಎಲ್‌ ಟೂರ್ನಿಯನ್ನು ಮುಗಿಸಲು ಯೋಜನೆಯನ್ನು ರೂಪಿಸಬಹುದು.