SRH vs RR: ತಂಡದ ಹೋಟೆಲ್‌ನಲ್ಲಿ ಅಭಿಷೇಕ್ ಶರ್ಮಾ ಕೈ ಎಳೆದ ಯುವತಿ! ವಿಡಿಯೊ
ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾಗೆ ಕಿರಿಕಿರಿಯಾಗುವ ಸಂದರ್ಭ ಎದುರಾಯಿತು. ಅವರು ಹೋಟೆಲ್‌ನಲ್ಲಿ ನಡೆದುಕೊಂಡು ಬರುವಾಗ ಯುವತಿಯೊಬ್ಬಳು ಅಭಿಷೇಕ್ ಅವರ ಕೈಯನ್ನು ಹಿಡಿದು ಎಳೆದಿದ್ದಾಳೆ.
ಅಭಿಷೇಕ್ ಶರ್ಮಾ ಕೈ ಹಿಡಿದು ಎಳೆದ ಯುವತಿ. -
ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ (SRH vs RR) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯಕ್ಕೂ ಮುನ್ನ ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ (Abhishek Sharma) ಕಿರಿಕಿರಿಯಾಗುವ ಸಂದರ್ಭ ಎದುರಾಗಿದೆ. ಅವರು ಟೀಮ್ ಹೋಟೆಲ್ ರೂಂ ನಿಂದ ಹೊರಗಡೆ ಬರುತ್ತಿದ್ದ ಸಂದರ್ಭದಲ್ಲಿ ಆಟಗಾರರನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಯುವತಿಯೊಬ್ಬರು ಅಭಿಷೇಕ್ ಶರ್ಮಾ ಅವರ ಕೈಯನ್ನು ಹಿಡಿದು ಎಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯುವತಿ ತಮ್ಮ ಕೈಯನ್ನು ಹಿಡಿದು ಎಳೆಯುತ್ತಿದ್ದಂತೆ ಆಘಾತಕ್ಕೆ ಒಳಗಾದ ಅಭಿಷೇಕ್, ತನ್ನ ಕೈಯನ್ನು ಆಕೆಯಿಂದ ಬಿಡಿಸಿಕೊಂಡರು. ಈ ವೇಲೆ ಭದ್ರತಾ ಸಿದ್ದಂತಿ ಯುವತಿಯನ್ನು ತಡೆದರು ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಸರಿದೂಗಿಸಿದರು. ಈ ಘಟನೆಯ ಬಳಿಕ ಆಟಗಾರರ ಭದ್ರತೆ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಆಟಗಾರರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
RR vs SRH: ಸೂರ್ಯವಂಶಿ ಶತಕ ವ್ಯರ್ಥ, ರಾಜಸ್ಥಾನ್‌ಗೆ ಆಘಾತ ನೀಡಿದ ಸನ್‌ರೈಸರ್ಸ್ ಹೈದರಾಬಾದ್!
ಇನ್ನು ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ರಾಜಸ್ಥಾನ್ ರಾಯಲ್ಸ್ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಅರ್ಧಶತಕವನ್ನು ಬಾರಿಸಿ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಅವರು ಆಡಿದ 29 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 57 ರನ್ ಸಿಡಿಸಿದರು ಹಾಗೂ ಇಶಾನ್ ಕಿಶನ್ ಜೊತೆಗೆ ಎರಡನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 18.3 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ ಗೆಲುವಿನ ಗಡಿ ದಾಟಿತು.
Abhishek was going to his hotel room and a girl held his hand which made him uncomfortable. Just imagine the outrage if a boy did this to women’s team. The worst part is that her boyfriend was there how embarrassed he must have felt 🥲 pic.twitter.com/ZpxAhd87uz
— ` (@8eenpoint5) April 25, 2026
ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ಹೇಳಿಕೆ
“ಗೆಲುವಿನ ತಂಡದ ಭಾಗವಾಗಿರುವುದಕ್ಕೆ ಸಂತೋಷ ತಂದಿದೆ. ನನಗೆ ಕೆಲವು ಅವಕಾಶಗಳು ಬಂದವು; ಇದು ನನ್ನ ಅದೃಷ್ಟದ ದಿನವಾಗಿತ್ತು. ಎದುರಾಳಿ ತಂಡ 15 ರನ್ ಕಡಿಮೆ ಗಳಿಸಿದೆ ಎಂದು ಹೇಳುವುದಿಲ್ಲ, ಆದರೆ ಅವರು ಇನ್ನೂ 15–20 ರನ್ ಹೆಚ್ಚಾಗಿ ಗಳಿಸಬಹುದಿತ್ತು. ಜೋಫ್ರಾ ಆರ್ಚರ್ ಅವರಂತಹ ಬೌಲರ್‌ಗಳು ಎದುರಿಸುವಾಗ ನಾನು ಸ್ವಲ್ಪ ರೂಂ ಮಾಡಿಕೊಂಡು ಅವರ ಲೈನ್ ಮತ್ತು ಲೆನ್ತ್ ಅನ್ನು ಸ್ವಲ್ಪ ಮಟ್ಟಿಗೆ ಕಿರಿಕಿರಿ ಮಾಡುವುದೇ ನನ್ನ ಉದ್ದೇಶವಾಗಿತ್ತು. ಹೊಸ ಚೆಂಡಿನೊಂದಿಗೆ ವಿಶೇಷವಾಗಿ ನಾನು ಮತ್ತು ಇಶಾನ್ ಅದನ್ನೇ ಮಾಡಲು ಯತ್ನಿಸಿದ್ದೇವೆ,” ಎಂದು ಅಭಿಷೇಕ್ ಶರ್ಮಾ ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.
IPL 2026: ರಿಯಾನ್ ಪರಾಗ್ ನಾಯಕತ್ವದಲ್ಲಿನ ದೌರ್ಬಲ್ಯವನ್ನು ರಿವೀಲ್ ಮಾಡಿದ ವೀರೇಂದ್ರ ಸೆಹ್ವಾಗ್!
“ಅಂತಹ ದೊಡ್ಡ ಮೊತ್ತದ ಸ್ಕೋರ್ ಅನ್ನು ಚೇಸ್ ಮಾಡಿದ ನಂತರ, ಬ್ಯಾಟರ್‌ಗಳು ತೋರಿಸುತ್ತಿರುವ ಪ್ರದರ್ಶನ ಮತ್ತು ಪವರ್‌ಪ್ಲೇ ನಂತರ ಬೌಲ್ ಮಾಡುವ ತಂಡದ ಪ್ರದರ್ಶನವನ್ನು ನೋಡಿದಾಗ, ತಂಡದಲ್ಲಿ ಆತ್ಮವಿಶ್ವಾಸವನ್ನು ನೀವು ಸ್ಪಷ್ಟವಾಗಿ ಅನುಭವಿಸಬಹುದು. ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸಲು ಬರುತ್ತಾರೆ ಎಂಬುದು ನಮಗೆ ಯಾವಾಗಲೂ ಗೊತ್ತಿತ್ತು. ಅವರ ಅನುಭವ ತಂಡಕ್ಕೆ ಹೆಚ್ಚುವರಿ ಬಲ ನೀಡಿದೆ. ಪ್ರಮುಖ ಓವರ್‌ಗಳಲ್ಲಿ ಅವರು ಬೌಲ್ ಮಾಡುವ ರೀತಿಯೇ ತಂಡಕ್ಕೆ ಆತ್ಮವಿಶ್ವಾಸವನ್ನು ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.