ದಿನಸಿ ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ಇದು ಕ್ಯೂಟ್ ದರೋಡೆ ಎಂದ ನೆಟ್ಟಿಗರು
Viral Video: ಆನೆವೊಂದು ಅಂಗಡಿಯೊಂದಕ್ಕೆ ನುಗ್ಗಿ ತನಗೆ ಬೇಕಾದ ತಿಂಡಿ ಸವಿದು ಆರಾಮವಾಗಿ ನಡೆದುಹೋಗುತ್ತಿರುವ ಘಟನೆವೊಂದು ನಡೆದಿದೆ. ಆನೆ ತನ್ನ ಸೊಂಡಿಲನ್ನು ಬಳಸಿ, ಕಪಾಟಿನಿಂದ ತಿಂಡಿ ಎಗರಿಸಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ನಗು ತರಿಸಿದೆ.
ಅಂಗಡಿಗೆ ತೆರಳಿ ತಿಂಡಿ ಎಗರಿಸಿದ ಆನೆ -
ಬ್ಯಾಂಕಾಕ್, ಏ. 26: ಪ್ರಾಣಿಗಳ ಮುದ್ದಾದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ (Viral Video) ಆಗುತ್ತಿರುತ್ತವೆ. ಅದೇ ರೀತಿ ಇದೀಗ ಆನೆವೊಂದು ಅಂಗಡಿಯೊಂದಕ್ಕೆ ನುಗ್ಗಿ ತನಗೆ ಬೇಕಾದ ತಿಂಡಿ ಸವಿದು ಆರಾಮವಾಗಿ ನಡೆದುಹೋಗುತ್ತಿರುವ ಘಟನೆವೊಂದು ಕಂಡು ಬಂದಿದೆ. ಆನೆ ತನ್ನ ಸೊಂಡಿಲನ್ನು ಬಳಸಿ, ಕಪಾಟಿನಿಂದ ತಿಂಡಿ ಎಗರಿಸಿದೆ. ಸದ್ಯ ಈ ವಿಡಿಯೊ ಎಲ್ಲರಿಗೂ ನಗು ತರಿಸಿದೆ.
ಥೈಲ್ಯಾಂಡ್‌ನಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಬೃಹತ್ ಗಾತ್ರದ ಆನೆ ಕಾಡಿನಿಂದ ಸೀದಾ ರಸ್ತೆ ಬದಿಯ ಅಂಗಡಿಯೊಂದಕ್ಕೆ ದಾಳಿ ಇಟ್ಟಿದೆ. ಆನೆ ತನಗೆ ಬೇಕಾದ ಎಲ್ಲ ತಿಂಡಿಗಳನ್ನು ಸವಿದು ವಾಪಸ್ಸು ಹೋಗಲು ರೆಡಿಯಾಗಿದೆ. ಸಿಹಿ ಅಕ್ಕಿ ಕ್ರ್ಯಾಕರ್‌ಗಳ ಚೀಲ, ಸ್ಯಾಂಡ್‌ವಿಚ್, ಬಾಳೆಹಣ್ಣು ಇತ್ಯಾದಿ ಇಷ್ಟವಾಗುವ ವಸ್ತುಗಳನ್ನು ತಿಂದಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ದಂಗಾಗಿದ್ದಾರೆ.
ವಿಡಿಯೊ ನೋಡಿ:
Imagine explaining this to your insurance pic.twitter.com/TK5cISPi8e
— Nature is Amazing ☘️ (@AMAZlNGNATURE) April 25, 2026
ಥೈಲ್ಯಾಂಡ್‌ನಲ್ಲಿ ಕಂಡು ಬಂದಿರುವ ಈ ಒಂದು ಅಪರೂಪದ ತಮಾಷೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಥೈಲ್ಯಾಂಡ್‌ನ ಖಾವೊಯಾಯ್ ರಾಷ್ಟ್ರೀಯ ಅರಣ್ಯದ ಹತ್ತಿರ ಇರುವ ಅಂಗಡಿಗೆ 'ಪ್ಲಾಯ್ ಬಿಯಾಂಗ್ ತೆಕ್' ಎಂಬ ಹೆಸರಿನ ಕಾಡಾನೆ ನುಗ್ಗಿದೆ. ಸೌಮ್ಯ ಸ್ವಭಾವಕ್ಕೆ ಹೆಸರಾದ ಈ ಆನೆ ಬಹಳ ತಾಳ್ಮೆಯಿಂದ ಅಂಗಡಿಯೊಳಗೆ ನುಗ್ಗಿದೆ.
ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ
ಆನೆ ಯಾರ ಮೇಲೆಯೂ ದಾಳಿ ಮಾಡದೆ ಕೇವಲ ತಿಂಡಿ ತಿಂದು ಸಮಾಧಾನವಾಗಿ ಹೊರಬಂದಿದೆ. ಆನೆ ದಾಳಿಯಿಂದ ಅಂಗಡಿ ಮಾಲಕರಿಗೆ ಸುಮಾರು 2,000 ರುಪಾಯಿ ನಷ್ಟವಾಗಿದೆ. ಈ ಆನೆಯ ಕೀಟಲೆ ಬಗ್ಗೆ ತಿಳಿದಿದ್ದ ಸ್ಥಳೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಮೊದಲೇ ಬಿಲ್ ಪಾವತಿ ಮಾಡಿದೆ. ಸದ್ಯ ಮಾನವ ಮತ್ತು ಪ್ರಾಣಿಗಳ ನಡುವಿನ ಈ ಸ್ನೇಹ ಎಲ್ಲರ ಮನ ಗೆದ್ದಿದೆ.