ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್‌ ಅಯರ್‌ ಪ್ರಮುಖ ಸ್ಪರ್ಧಿ ಎಂದ ರಿಕಿ ಪಾಂಟಿಂಗ್‌!

ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತದ ಟಿ20ಐ ತಂಡದ ನಾಯಕತ್ವಕ್ಕೆ ಪ್ರಮುಖ ಸ್ಪರ್ಧಿಯಾಗಿ ಪಂಜಾಬ್‌ ಕಿಂಗ್ಸ್‌ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಪರಿಗಣಿಸಿದ್ದಾರೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಂಡದ ಪ್ರದರ್ಶನ ಕುಸಿದಿದ್ದರೂ, ಅಯ್ಯರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಪಾಂಟಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ ಟೂರ್ನಿಯ ಬಳಿಕ ಭಾರತ ತಂಡ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಂಡು ಟಿ20ಐ ಸರಣಿಗಳನ್ನು ಆಡಲಿದೆ. ಹಾಗಾಗಿ ಭಾರತ ಟಿ20ಐ ತಂಡಕ್ಕೆ ಬಿಸಿಸಿಐ ನೂತನ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ.

ಭಾರತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್‌ ಪ್ರಬಲ ಸ್ಪರ್ಧಿ: ಪಾಂಟಿಂಗ್‌!

ಭಾರತ ಟಿ20 ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನಾಯಕನಾಬೇಕೆಂದ ರಿಕಿ ಪಾಂಟಿಂಗ್‌. -

Profile
Ramesh Kote May 20, 2026 5:44 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಅಂತಿಮಗೊಳಿಸಲು ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಗುವಾಹಟಿಯಲ್ಲಿ ಸಭೆ ನಡೆಸಿತ್ತು. ಈ ವೇಳೆ ಭಾರತ ಟಿ20 ತಂಡದ ನಾಯಕತ್ವ ಕುರಿತ ಚರ್ಚೆಗಳು ನಡೆದಿವೆ ಎಂದು ವೆರದಿಯಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ ಕಿಂಗ್ಸ್‌ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ (Ricky Ponting) ಟಿ20ಐ ನಾಯಕತ್ವ ಕುರಿತು ಮಹತ್ವದ ಹೇಳಿಕೆ ನೀಡಿದರು. ಶ್ರೇಯಸ್‌ ಅಯ್ಯರ್‌ (Shreyas Iyer) ಕೇವಲ ರಾಷ್ಟ್ರೀಯ ತಂಡಕ್ಕೆ ಮರಳುವ ಸ್ಪರ್ಧಿಯಷ್ಟೇ ಅಲ್ಲ, ಭವಿಷ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಬಳಿಕ ಭಾರತದ ಮುಂದಿನ ಟಿ20ಐ ನಾಯಕನಾಗುವ ಪ್ರಮುಖ ಅಭ್ಯರ್ಥಿಯೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಭಾರತದ ಟಿ20 ನಾಯಕ Suryakumar Yadav ಅವರ ವೈಯಕ್ತಿಕ ಫಾರ್ಮ್ ಕುಸಿತ ಮತ್ತು ತಂಡದ ಭವಿಷ್ಯ ಯೋಜನೆಗಳ ಹಿನ್ನೆಲೆಯಲ್ಲಿ ಅವರ ನಾಯಕತ್ವ ಈಗ ಪರಿಶೀಲನೆಯಲ್ಲಿದೆ. ಈ ವರ್ಷದ ಆರಂಭದಲ್ಲಿ ಭಾರತವನ್ನು ಟಿ20 ವಿಶ್ವಕಪ್ ಜಯದತ್ತ ಮುನ್ನಡೆಸಿದ್ದರೂ, ಸೂರ್ಯಕುಮಾರ್ ಅವರ ನಾಯಕತ್ವದ ಮೇಲೆ ಒತ್ತಡ ಹೆಚ್ಚುತ್ತಿದೆ ಎನ್ನಲಾಗುತ್ತಿದೆ. ಜೂನ್-ಜುಲೈನಲ್ಲಿ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20ಐ ಸರಣಿಗಳಲ್ಲಿ ಅವರು ನಾಯಕತ್ವವನ್ನು ಮುಂದುವರಿಸುವ ನಿರೀಕ್ಷೆಯಿದ್ದರೂ, ಅವರ ಸ್ಥಾನ ಈಗ ಹಿಂದಿನಷ್ಟು ಭದ್ರವಾಗಿಲ್ಲ ಎಂಬ ಚರ್ಚೆಗಳು ಜೋರಾಗಿವೆ.

IPL 2026: ವೈಭವ್‌ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಕ್ರಿಸ್‌ ಗೇಲ್‌ ಎಂದ ಇರ್ಫಾನ್‌ ಪಠಾಣ್‌!

ಇದೇ ಸಂದರ್ಭದಲ್ಲಿ ಶ್ರೇಯಸ್‌ ಅಯ್ಯರ್‌ ಅವರ ಹೆಸರು ಭವಿಷ್ಯದ ಟಿ20 ನಾಯಕತ್ವದ ಪ್ರಮುಖ ಆಯ್ಕೆಯಾಗಿ ಕೇಳಿಬರುತ್ತಿದೆ. ಪಂಜಾಬ್‌ ಕಿಂಗ್ಸ್‌ ತಂಡದ ಪರ ಅವರು ತೋರಿಸಿರುವ ಶಾಂತ ನಾಯಕತ್ವ, ತಂತ್ರಜ್ಞಾನದ ನಿರ್ಧಾರಗಳು ಹಾಗೂ ಒತ್ತಡದ ಸಂದರ್ಭಗಳಲ್ಲಿ ತಾಳ್ಮೆಯ ಆಟ, ಆಯ್ಕೆದಾರರ ಗಮನ ಸೆಳೆಯುತ್ತಿದೆ.

“ನನ್ನ ಅಭಿಪ್ರಾಯದಲ್ಲಿ ಭಾರತ ಟಿ20 ತಂಡದ ನಾಯಕತ್ವದ ರೇಸ್‌ನಲ್ಲಿ ಹಲವು ಸ್ಪರ್ಧಿಗಳು ಇದ್ದಾರೆ. ಆದರೆ ಶ್ರೇಯಸ್‌ ಅಯ್ಯರ್‌ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು,” ಎಂದು ರಿಕಿ ಪಾಂಟಿಂಗ್ ಬುಧವಾರ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಟೂರ್ನಿಯ ಆರಂಭದಲ್ಲೇ ಅವರು ಎಷ್ಟು ಉತ್ತಮ ಟಿ20 ಆಟಗಾರ ಎಂಬುದನ್ನು ನಾವು ನೋಡಿದ್ದೇವೆ. ಮೈದಾನದಲ್ಲಿಯೂ ಹಾಗೂ ಮೈದಾನದ ಹೊರಗಡೆಯೂ ಅವರು ಈಗಿರುವ ಸ್ಥಿತಿ ಮತ್ತು ಆತ್ಮವಿಶ್ವಾಸ ಅತ್ಯಂತ ಗಮನಾರ್ಹವಾಗಿದೆ,” ಎಂದು ಪಾಂಟಿಂಗ್ ಹೇಳಿದರು.

ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ವಿದಾಯ ಹೇಳಲು ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

ನಾಯಕತ್ವದ ರೇಸ್‌ನಲ್ಲಿ ಅಯ್ಯರ್?

ಈ ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗೆ ಅವರು ತಂಡದಲ್ಲಿ ಆಯ್ಕೆಯಾಗಿದ್ದರೂ, ಸಂಪೂರ್ಣ ಸರಣಿಯಲ್ಲೂ ಬೆಂಚ್‌ನಲ್ಲೇ ಕಾಲ ಕಳೆಯಬೇಕಾಯಿತು.

ಆದರೆ, ಇದೀಗ ಅವರು ತಮ್ಮ ಪ್ರದರ್ಶನದ ಮೂಲಕ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಬಹುಕಾಲ ನಿಧಾನಗತಿಯ ಆಂಕರ್ ಬ್ಯಾಟರ್ ಎಂದು ಗುರುತಿಸಿಕೊಂಡಿದ್ದ ಅವರು, ಕಳೆದ ಎರಡು ಐಪಿಎಲ್‌ ಸೀಸನ್‌ಗಳಲ್ಲಿ ತಮ್ಮ ಟಿ20 ಆಟವನ್ನು ಸಂಪೂರ್ಣವಾಗಿ ಮರು ರೂಪಿಸಿಕೊಂಡಿದ್ದಾರೆ.

ಹಿಂದೆ ಸುಮಾರು 135ರಷ್ಟಿದ್ದ ಅವರ ಸ್ಟ್ರೈಕ್ ರೇಟ್, ಕಳೆದ ವರ್ಷ 178ಕ್ಕೆ ಏರಿಕೆಯಾದರೆ, ಈ ಸೀಸನ್‌ನಲ್ಲಿ ಒಟ್ಟಾರೆ 162.31ರ ಆಕರ್ಷಕ ಸ್ಟ್ರೈಕ್ ರೇಟ್ ದಾಖಲಿಸಿದ್ದಾರೆ. ವೇಗವಾಗಿ ರನ್ ಗಳಿಸುವ ಸಾಮರ್ಥ್ಯ, ಒತ್ತಡದ ಸಂದರ್ಭಗಳಲ್ಲಿ ಆಕ್ರಮಣಕಾರಿ ಆಟ ಹಾಗೂ ನಾಯಕತ್ವದ ಪರಿಪಕ್ವತೆ, ಅವರನ್ನು ಮತ್ತೆ ರಾಷ್ಟ್ರೀಯ ತಂಡದ ಚರ್ಚೆಗೆ ತಂದು ನಿಲ್ಲಿಸಿದೆ.