IND vs SL: ಮಾನವ್ ಸುತಾರ್ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ, ಭಾರತ ತಂಡಕ್ಕೆ ಭರ್ಜರಿ ಜಯ!
IND vs SL 1st Test Highlights: ಮಾನವ್ ಸುತಾರ್ ಸ್ಪಿನ್ ಮೋಡಿಯ ಸಹಾಯದಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದಲ್ಲಿ 165 ರನ್‌ಗಳಿಂದ ಭರ್ಜರಿಯಾಗಿ ಜಯ ಪಡೆದಿದೆ. ಈ ಪಂದ್ಯದ ಗೆಲುವಿನ ಮೂಲಕ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಜಯ. -
ಗಾಲೆ: ಮಾನವ್ ಸುತಾರ್ (Manav Suthar) ಅವರ ಸ್ಪಿನ್ ಮೋಡಿಯ ಸಹಾಯದಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SL) ಶ್ರೀಲಂಕಾ ವಿರುದ್ಧ 165 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡದಿದೆ. ಸೋನಲ್ ದಿನುಷಾ ಹಾಗೂ ಧನಂಜಯ್ ಡಿ ಸಿಲ್ವಾ ಅವರ ಅರ್ಧಶತಕಗಳ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಆತೀಥೇಯ ಶ್ರೀಲಂಕಾ ತಂಡ ತವರು ಅಭಮಾನಿಗಳ ಎದುರು ಗೆಲುವು ದಾಖಲಿಸಲೂ ಸಾಧ್ಯವಾಗಲಿಲ್ಲ.
ಐದನೇ ಹಾಗೂ ಕೊನೆಯ ದಿನವಾದ ಬುಧವಾರ ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 84 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡಕ್ಕೆ 288 ರನ್‌ಗಳ ಅಗತ್ಯವಿತ್ತು. ಕ್ರೀಸ್‌ಗೆ ಬಂದ ಧನಂಜಯ್ ಡಿ ಸಿಲ್ವಾ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರು ಐದನೇ ವಿಕೆಟ್‌ಗೆ 95 (202 ಎಸೆತಗಳು) ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ಶ್ರೀಲಂಕಾ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು.
ರಾಹುಲ್ ದ್ರಾವಿಡ್ ಜತೆ ಎಲೈಟ್ ಪಟ್ಟಿ ಸೇರಿದ ದೇವದತ್ ಪಡಿಕ್ಕಲ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ನಾಯಕ ಧನಂಜಯ್ ಡಿ ಸಿಲ್ವಾ 151 ಎಸೆತಗಳಲ್ಲಿ 59 ರನ್‌ಗಳನ್ನು ಕಲೆ ಹಾಕಿ ಭರವಸೆ ಮೂಡಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಈ ವೇಳೆ ರವೀಂದ್ರ ಜಡೇಜಾ ಅವರು ಡಿ ಸಿಲ್ವಾ ಅವರನ್ನು ಔಟ್ ಮಾಡುವ ಮೂಲಕ ದೊಡ್ಡ ಜೊತೆಯಾಡವನ್ನು ಮುರಿದರು. ಪ್ರಥಮ ಇನಿಂಗ್ಸ್‌ನಲ್ಲಿ 80 ರನ್ ಗಳಿಸಿದ್ದ ನಿರೋಶನ್ ಡಿಕ್ವೆಲ್ಲಾ ಅವರು ಕೇವಲ 10 ರನ್ ಗಳಿಸಿ ಪ್ರಸಿಧ್ ಕೃಷ್ಣಗೆ ಔಟ್ ಆದರು.
A clinical victory for #TeamIndia in the Galle Test.
— BCCI (@BCCI) August 19, 2026
Manav Suthar's 6 wicket haul in the second innings, guides India to a 165 run win over Sri Lanka.
Scorecard - https://t.co/M9LVyCAp8y #SLvIND pic.twitter.com/QxAhFQGZke
ಸೋನಲ್ ದಿನುಷಾ ಅರ್ಧಶತಕ
ಶ್ರೀಲಂಕಾ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಸೋನಲ್ ದಿನುಷಾ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರುಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಸೋನಲ್ ಮತ್ತೊಂದು ಗುಣಮಟ್ಟದ ಇನಿಂಗ್ಸ್ ಆಡಿದರು. ಅವರು ಆಡಿದ 128 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಕಲೆ ಹಾಕಿದ ಬಳಿಕ ಮಾನವ್ ಸುತಾರ್‌ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಇವರು ಶತಕವನ್ನು ಬಾರಿಸಿದ್ದರು. ಇವರು ವಿಕೆಟ್ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟ್ಸ್‌ಮನ್ ಬಹುಬೇಗ ಔಟ್ ಆದರು. ಮಾನವ್ ಸುತಾರ್ ಅವರು, ಪ್ರಭತ್ ಜಯಸೂರ್ಯ, ಲಹಿರು ಕುಮಾರ ಹಾಗೂ ಕೇಶಾರ ನುವಾಂತ (20 ರನ್) ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಶ್ರೀಲಂಕಾ ತಂಡ 77.4 ಓವರ್‌ಗಳಿಗೆ 206 ರನ್‌ಗಳಿಗೆ ಆಲ್‌ಔಟ್ ಆಯಿತು.
An absolute display of skill and precision as Manav Suthar picks up 10 wickets in the 1st Test.
— BCCI (@BCCI) August 19, 2026
A glimpse of how he fared in his last ten deliveries in the second innings 👌👌#SLvIND #TeamIndia pic.twitter.com/B3QVZdhPuG
10 ವಿಕೆಟ್ ಸಾಧನೆ ಮಾಡಿದ ಮಾನವ್ ಸುತಾರ್
ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್‌ಹಗಳನ್ನು ಕಬಳಿಸಿದ್ದ ಮಾನವ್ ಸುತಾರ್, ದ್ವಿತೀಯ ಇನಿಂಗ್ಸ್‌ನಲ್ಲಿಯೂ ತಮ್ಮ ಸ್ಪಿನ್ ಮೋಡಿ ಮಾಡಿದ್ದರು. ಅವರು ಬೌಲ್ ಮಾಡಿದ್ದ 23.4 ಓವರ್‌ಗಳಿಗೆ ಕೇವಲ 55 ರನ್ ನೀಡಿ 6 ವಿಕೆಟ್ ಕಿತ್ತರು. ಒಟ್ಟಾರೆ ಈ ಪಂದ್ಯದಲ್ಲಿ ಅವರು 10 ವಿಕೆಟ್‌ಗಳ ಸಾಧನೆ ಮಾಡಿದರು.
For his maiden Test ton that laid the foundation and an equally important knock in the second innings, @devdpd07 receives the Player of the Match award 👏👏#SLvIND #TeamIndia pic.twitter.com/EY7bbMT92f
— BCCI (@BCCI) August 19, 2026
ದೇವದತ್ ಪಡಿಕ್ಕಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಸಾಯಿ ಸುದರ್ಶನ್ ಅವರು ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ಪಡದ ದೇವದತ್ ಪಡಿಕ್ಕಲ್ ಅವರು ಭರ್ಜರಿ ಆಟವನ್ನು ಆಡಿದರು. ಅವರು ಪ್ರಥಮ ಇನಿಂಗ್ಸ್‌ನಲ್ಲಿ 167 ರನ್‌ಗಳು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್ ಸೇರಿ ಒಟ್ಟು 211 ರನ್‌ಗಳನ್ನು ಕಲೆ ಹಾಕಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮುನ್ನ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್ ಹಾಗೂ ಶ್ರೀಲಂಕಾ ಪ್ರಥಮ ಇನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದರ ಫಲವಾಗಿ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 178 ರನ್‌ಗಳ ಮುನ್ನಡೆಯನ್ನು ಪಡೆದಿತ್ತು. ನಂತರ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದರೊಂದಿಗೆ ಎದುರಾಳಿ ಶ್ರೀಲಂಕಕ್ಕೆ 372 ರನ್‌ಗಳ ಗುರರಿಯನ್ನು ನೀಡಿತ್ತು.